ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಸೋಲರಿಯದ ಟೀಮ್‌ ಇಂಡಿಯಾಗೆ ಶಿರ ಬಾಗಿದ ವೆಸ್ಟ್‌ ಇಂಡೀಸ್‌

ICC World Cup 2019 : ವೆಸ್ಟ್ ಇಂಡೀಸ್ ಗೆ 269 ರನ್ ಗಳ ಟಾರ್ಗೆಟ್ ನೀಡಿದ ಭಾರತ. | IND vs WI
World cup 2019: West Indies vs India, Match 34 - Live Score

ಮ್ಯಾನ್ಚೆಸ್ಟರ್, ಜೂನ್ 27: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಸೆಮಿಫೈನಲ್ಸ್‌ ಕಡೆಗೆ ಹೆಜ್ಜೆ ಹಾಕಿರುವ ಟೀಮ್‌ ಇಂಡಿಯಾ, ಗುರುವಾರ ನಡೆದ ಪಂದ್ಯದಲ್ಲಿ ಅಪಾಯಕಾರಿ ವೆಸ್ಟ್‌ ಇಂಡೀಸ್‌ ವಿರುದ್ಧ 125 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ವೆಸ್ಟ್ ಇಂಡೀಸ್ vs ಭಾರತ, ಜೂನ್ 27, Live ಸ್ಕೋರ್‌ಕಾರ್ಡ್

1
43677

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತ ದಾಖಲಿಸುವ ಹುಮ್ಮಸ್ಸಿನಲ್ಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ, ವೆಸ್ಟ್‌ ಇಂಡೀಸ್‌ ತಂಡದ ಶಿಸ್ತಿನ ಬೌಲಿಂಗ್‌ ದಾಳಿ ಎದುರು ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 268 ರನ್‌ಗಳನ್ನು ಮಾತ್ರವೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ವಿಂಡೀಸ್‌ ಪಡೆಯನ್ನು 34.2 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲ್‌ಔಟ್‌ ಮಾಡಿತು. ಈ ಮೂಲಕ ಆಡಿದ 6 ಪಂದ್ಯಗಳಿಂದ ಒಟ್ಟು 11 ಅಂಕಗಳನ್ನು ಗಳಿಸಿರುವ ಭಾರತ 2ನೇ ಸ್ಥಾನಕ್ಕೇರಿದ್ದು, ಸೆಮಿಫೈನಲ್ಸ್‌ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಮತ್ತೊಂದೆಡೆ ವಿಂಡೀಸ್‌ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ಭಾರತದ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಕಳೆದ ಪಂದ್ಯದ ಹ್ಯಾಟ್ರಕ್‌ ಹೀರೊ ಮೊಹಮ್ಮದ್‌ ಶಮಿ 16ಕ್ಕೆ 4 ವಿಕೆಟ್‌ ಉರುಳಿಸಿದರೆ, ಜಸ್‌ಪ್ರೀತ್‌ ಬುಮ್ರಾ (9ಕ್ಕೆ 2) ಮತ್ತು ಯುಜ್ವೇಂದ್ರ ಚಹಲ್‌ (39ಕ್ಕೆ 2) ಎರಡು ವಿಕೆಟ್‌ ಪಡೆದು ಮಿಂಚಿದರು. ಹಾರ್ದಿಕ್‌ ಪಾಂಡ್ಯ ಮತ್ತು ಕುಲ್ದೀಪ್‌ ಯಾದವ್‌ ತಲಾ ಒಂದು ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು.

ಇದಕ್ಕೂ ಮುನ್ನ ರೋಹಿತ್‌ ಶರ್ಮಾ (18) ಆರಂಭದಲ್ಲೇ ನಿರ್ಗಮಿಸಿದರ ಹಾಗೂ ಕೆ.ಎಲ್‌ ರಾಹುಲ್‌ (64 ಎಸೆತಗಳಲ್ಲಿ 48 ರನ್‌) ಅವರ ಮಂದಗತಿಯ ಬ್ಯಾಟಿಂಗ್‌ ನಿಂದಾಗಿ ಭಾರತಕ್ಕೆ ನಿರೀಕ್ಷಿತ ಮಟ್ಟದ ಆರಂಭ ಲಭ್ಯವಾಗಲಿಲ್ಲ.

ಆದರೂ ನಾಯಕ ವಿರಾಟ್‌ ಕೊಹ್ಲಿ ಅದ್ಭುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತು 82 ಎಸೆತಗಳಲ್ಲಿ 8 ಫೋರ್‌ಗಳನ್ನು ಒಳಗೊಂಡ 72 ರನ್‌ಗಳನ್ನು ದಾಖಲಿಸಿದರು. ತಾಳ್ಮೆಯ ಆಟವಾಡಿದ ವಿಕೆಟ್‌ಕೀಪರ್‌ ಎಂ.ಎಸ್‌ ಧೋನಿ, ಕೊನೆಯವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನಿಂತು, 61 ಎಸೆತಗಳಲ್ಲಿ 3 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 56 ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು.

ಇದಕ್ಕೂ ಮೊದಲು ತಂಡದ ರನ್‌ರೇಟ್‌ ಹೆಚ್ಚಿಸಲು ಬಿರುಸಿನ ಬ್ಯಾಟಿಂಗ್‌ ನಡೆಸಿದ ಹಾರ್ದಿಕ್‌ ಪಾಂಡ್ಯ 38 ಎಸೆತಗಳಲ್ಲಿ 5 ಫೋರ್‌ಗಳನ್ನು ಒಳಗೊಂಡ 46 ರನ್‌ಗಳನ್ನು ಸಿಡಿಸಿ ಉತ್ತಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 268/7 (ಕೆ.ಎಲ್‌ ರಾಹುಲ್‌ 48, ವಿರಾಟ್‌ ಕೊಹ್ಲಿ 72, ಎಂಎಸ್‌ ಧೋನಿ ಔಟಾಗದೆ 56, ಹಾರ್ದಿಕ್‌ ಪಾಂಡ್ಯ 46; ಶೆಲ್ಡನ್‌ ಕಾಟ್ರೆಲ್‌ 50ಕ್ಕೆ 2, ಕೆಮಾರ್‌ ರೋಚ್‌ 36ಕ್ಕೆ 3, ಜೇಸನ್‌ ಹೋಲ್ಡರ್‌ 32ಕ್ಕೆ 2).

ವೆಸ್ಟ್‌ ಇಂಡೀಸ್‌: 34.2 ಓವರ್‌ಗಳಲ್ಲಿ 143/10 (ಸುನಿಲ್‌ ಅಂಬ್ರಿಸ್‌ 31, ನಿಕೋಲಸ್‌ ಪೂರನ್‌ 28, ಶಿಮ್ರಾನ್‌ ಹೆಟ್ಮಾಯೆರ್‌ 18; ಶಮಿ 16ಕ್ಕೆ 4, ಬುಮ್ರಾ 9ಕ್ಕೆ 2, ಚಹಲ್‌ 39ಕ್ಕೆ 2).

ಸ್ಟ್ಯಾಟ್‌ ಇನ್ಫೋ

125, ರನ್‌ಗಳ ಅಂತರದಲ್ಲಿ ವಿಶ್ವಕಪ್‌ ಇತಿಹಾಸದಲ್ಲಿ ಭಾರತ ತಂಡಕ್ಕೆ ವೆಸ್ಟ್‌ ಇಂಡೀಸ್‌ ವಿರುದ್ಧ ಸಿಕ್ಕಂತ ಭರ್ಜರಿ ಗೆಲುವು.

72, ವಿರಾಟ್‌ ಕೊಹ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿ ಇಷ್ಟು ಕಡಿಮೆ ರನ್‌ ಗಳಿಸಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ.

01, ವೇಗಿ ಮೊಹಮ್ಮದ್‌ ಶಮಿ ವಿಶ್ವಕಪ್‌ ಇತಿಹಾಸದಲ್ಲಿ 3ಕ್ಕೂ ಹೆಚ್ಚು ಬಾರಿ 4 ವಿಕೆಟ್‌ ಪಡೆದ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಎನಿಸಿದ್ದಾರೆ.

03, ಪ್ರಸಕ್ತ ವಿಶ್ವಕಪ್‌ ಟೂನರ್ನಿಯಲ್ಲಿ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಮೂರನೇ ತಂಡ ವೆಸ್ಟ್‌ ಇಂಡೀಸ್‌, ಈಗಾಗಲೇ ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಹೊರಬಿದ್ದಿವೆ.

9 ವಿಶ್ವಕಪ್‌ ಪಂದ್ಯಗಳನ್ನಾಡಿ ಟತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳು

ಮೊಹಮ್ಮದ್‌ ಶಮಿ: 25

ಲಸಿತ್‌ ಮಾಲಿಂಗ: 24

ಮಿಚೆಲ್‌ ಸ್ಟಾರ್ಕ್‌: 23

ಇಮ್ರಾನ್‌ ತಾಹಿರ್‌: 23

ಟ್ರೆಂಟ್‌ ಬೌಲ್ಟ್‌: 22

ತಂಡಗಳ ವಿವರ

ವೆಸ್ಟ್ ಇಂಡೀಸ್ (ಪ್ಲೇಯಿಂಗ್‌ 11): ಕ್ರಿಸ್ ಗೇಲ್, ಸುನಿಲ್ ಅಂಬ್ರಿಸ್, ಶೇಯ್‌ ಹೋಪ್ (ವಿಕೆಟ್‌ಕೀಪರ್‌), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮಾಯೆರ್‌, ಜೇಸನ್ ಹೋಲ್ಡರ್ (ನಾಯಕ), ಕಾರ್ಲೋಸ್ ಬ್ರಾತ್‌ವೇಟ್, ಫ್ಯಾಬಿಯಾನ್ ಆಲೆನ್, ಕೆಮರ್ ರೋಚ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್.

ಭಾರತ (ಪ್ಲೇಯಿಂಗ್‌ 11): ಕೆ.ಎಲ್‌ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ವಿಜಯ್ ಶಂಕರ್, ಎಂ.ಎಸ್. ಧೋನಿ (ವಿಕೆಟ್‌ಕೀಪರ್‌), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬುಮ್ರಾ.

Story first published: Thursday, June 27, 2019, 22:46 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X