ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ತಂಡಗಳ ಸೆಮಿಫೈನಲ್ ಹಾದಿಯ ಕುತೂಹಲಕಾರಿ ಲೆಕ್ಕಾಚಾರ!

World Cup 2019: What teams have to do to reach semi-finals

ಲಂಡನ್, ಜೂನ್ 26: ಐಸಿಸಿ ಕ್ರಿಕೆಟ್ ವಿಶ್ವಕಪ್ ಈಗ ರೋಚಕ ಘಟ್ಟದಲ್ಲಿದೆ. 10 ತಂಡಗಳ ನಡುವಣ ಈ ಕದನದಲ್ಲಿ ಈಗಾಗಲೇ ಕೆಲ ತಂಡಗಳು ಪ್ರಶಸ್ತಿ ಸುತ್ತಿನೆಡೆಗಿನ ಸವಾಲಿನತ್ತ ಮುಖಮಾಡಿವೆ. ಆದರೆ ಇನ್ನೂ ಬಹುತೇಕ ತಂಡಗಳ ಸೆಮಿಫೈನಲ್ ಪ್ರವೇಶ ಖಾತ್ರಿಗೊಳ್ಳಲಿರುವುದರಿಂದ ಮುಂದಿನ ಪಂದ್ಯಗಳ ಫಲಿತಾಂಶ ಕುತೂಹಲ ಮೂಡಿಸಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಈ ವರೆಗಿನ ಪಂದ್ಯಗಳ ಪಲಿತಾಂಶವನ್ನು ಪರಿಗಣಿಸಿದಾಗ ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇನ್ನು ನ್ಯೂಜಿಲೆಂಡ್ ಪ್ರವೇಶವೂ ಬಹುತೇಕ ಸಾಕಾರಗೊಳ್ಳುವ ನಿರೀಕ್ಷೆಯಿದೆ. ಆದರೆ ಒಂದುವೇಳೆ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಎಣಿಕೆಗಳು ಏರುಪೇರಾಗಲಿವೆ.

ಐಸಿಸಿ ವಿಶ್ವಕಪ್ 2019: ವಿಶ್ವದಾಖಲೆ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ!ಐಸಿಸಿ ವಿಶ್ವಕಪ್ 2019: ವಿಶ್ವದಾಖಲೆ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ!

ಹಾಗಾದರೆ ನ್ಯೂಜಿಲೆಂಡ್, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಲು ಏನೇನು ಮಾಡಬೇಕು? ಸೆಮಿಫೈನಲ್‌ಗೆ ಹೇಗೆಲ್ಲ ಅವಕಾಶವಿದೆ ಎನ್ನುವುದಕ್ಕೆ ಇಲ್ಲೊಂದು ವಿಶ್ಲೇಷಣೆಯಿದೆ.

ನ್ಯೂಜಿಲೆಂಡ್

ನ್ಯೂಜಿಲೆಂಡ್

ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಆರು ಪಂದ್ಯಗಳಲ್ಲಿ 5 ಜಯ, ಒಂದು ಟೈ ಸೇರಿ ಒಟ್ಟು 11 ಪಾಯಿಂಟ್‌ಗಳನ್ನು ಕಲೆ ಹಾಕಿದೆ. ಸೆಮಿಫೈನಲ್ ಪ್ರವೇಶಿಸಲು ಕಿವೀಸ್‌ಗೆ ಕೇವಲ ಒಂದೇ ಗೆಲುವು ಸಾಕು. ಬುಧವಾರ (ಜೂನ್ 26) ನ್ಯೂಜಿಲೆಂಡ್‌ಗೆ ಪಾಕಿಸ್ತಾನ ವಿರುದ್ಧ ಪಂದ್ಯವಿದೆ. ಈ ಪಂದ್ಯವನ್ನು ಗೆದ್ದರೆ ನ್ಯೂಜಿಲೆಂಡ್‌ನ ಸೆಮಿಫೈನಲ್ ಹಾದಿ ಸುಗಮ. ಇಲ್ಲದಿದ್ದರೆ ಮುಂದೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯ ನ್ಯೂಜಿಲೆಂಡ್ ಪಾಲಿಗೆ ಒತ್ತಡವನ್ನು ತರಲಿದೆ. ಬ್ಲ್ಯಾಕ್ ಕ್ಯಾಪ್ ಬಣ ಸದ್ಯ 1.306 ಉತ್ತಮ ರನ್ ರೇಟ್ ಹೊಂದಿದೆ.

ಟೀಮ್ ಇಂಡಿಯಾ

ಟೀಮ್ ಇಂಡಿಯಾ

ಭಾರತ ಆಡಿರುವ 5ರಲ್ಲಿ 4 ಗೆಲುವು ಮತ್ತೊಂದು ಪಂದ್ಯವನ್ನು ಟೈ ಮಾಡಿಕೊಂಡಿದೆ. ಭಾರತದ ಖಾತೆಯಲ್ಲಿ ಈಗ 9 ಪಾಯಿಂಟ್‌ಗಳಿವೆ. ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಭಾರತಕ್ಕೆ ಸುವರ್ಣಾವಕಾಶವಿದೆ. ಇನ್ನೆರಡು ಪಂದ್ಯಗಳನ್ನು ಭಾರತ ಗೆದ್ದರೆ ಸೆಮಿಫೈನಲ್ ಬಸ್ ಹಿಡಿಯಲಿದೆ. ಇನ್ನುಳಿದ ನಾಲ್ಕೂ ಪಂದ್ಯಗಳನ್ನೂ ಭಾರತ ಗೆದ್ದರೆ ಒಟ್ಟು 17 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಆವರಿಸಲಿದೆ. ಭಾರತ 0.809 ರನ್ ರೇಟ್ ಹೊಂದಿದೆ.

ಆತಿಥೇಯ ಇಂಗ್ಲೆಂಡ್

ಆತಿಥೇಯ ಇಂಗ್ಲೆಂಡ್

7ರಲ್ಲಿ 4 ಪಂದ್ಯಗಳನ್ನು ಗೆದ್ದು 3 ಸೋಲು ಕಂಡಿರುವ ಇಂಗ್ಲೆಂಡ್‌ 8 ಪಾಯಿಂಟ್ ಕಲೆ ಹಾಕಿದೆ. ಆದರೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡೂ ಪಂದ್ಯಗಳನ್ನೂ ಸೋತು ಇಂಗ್ಲೆಂಡ್ ಸೆಮಿಫೈನಲ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ. ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ತನಗಿಂತ ಮೇಲಿರುವ ತಂಡಗಳ ಎದುರು ಸೋತರೆ ಅದರಿಂದ ಕೆಳಗಿನ ತಂಡಗಳಿಗೆ ಸೆಮಿಫೈನಲ್ ನಿಟ್ಟಿನಲ್ಲಿ ಲಾಭವಾಗಲಿದೆ. ಇಂಗ್ಲೆಂಡ್ 1.051 ರನ್ ರೇಟ್ ಹೊಂದಿದೆ.

ಬಾಂಗ್ಲಾದೇಶ

ಬಾಂಗ್ಲಾದೇಶ

ಬಾಂಗ್ಲಾದೇಶ ಸೆಮಿಫೈನಲ್ ಕನಸು ಇನ್ನೂ ಜೀವಂತವಾಗಿದೆ. 7ರಲ್ಲಿ 3 ಗೆಲುವುಗಳನ್ನು ದಾಖಲಿಸಿರುವ ಬಾಂಗ್ಲಾ 7 ಪಾಯಿಂಟ್ ಕಲೆ ಹಾಕಿದೆ. ಇನ್ನು ಬಾಂಗ್ಲಾದೇಶಕ್ಕೆ ಏಷ್ಯಾ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯವಿದೆ. ಈ ಪಂದ್ಯಗಳಲ್ಲಿ ಬಾಂಗ್ಲಾ ಗೆದ್ದರೆ, ಇಂಗ್ಲೆಂಡ್ ಮುಂದಿನ ಪಂದ್ಯಗಳಲ್ಲಿ ಸೋತರೆ, ಬಾಂಗ್ಲಾಕ್ಕೆ ಸೆಮಿಫೈನಲ್ ಅವಕಾಶವಿದೆ. ಬಾಂಗ್ಲಾ -0.133 ನೆಟ್ ರನ್ ರೇಟ್ ಹೊಂದಿದೆ.

ಶ್ರೀಲಂಕಾ

ಶ್ರೀಲಂಕಾ

ದಿಮುತ್ ಕರುಣರತ್ನೆ ಬಣ ಆರು ಪಂದ್ಯಗಳಲ್ಲಿ 6 ಅಂಕ ಗಳಿಸಿದೆ. ಟೂರ್ನಿಯ ಆರಂಭದಲ್ಲಿ ಶ್ರೀಲಂಕಾ ಸೆಮಿಫೈನಲ್ ಆಸೆಯನ್ನು ಕೈ ಬಿಟ್ಟಂತಿತ್ತು. ಆದರೆ ಯಾವತ್ತು ಇಂಗ್ಲೆಂಡ್ ವಿರುದ್ಧ 20 ರನ್ ಜಯಗಳಿಸಿತೋ ಅವತ್ತು ಲಂಕಾ ಸೆಮಿಫೈನಲ್ ಕನಸೂ ಟಿಸಿಲೊಡೆಯಿತು. ಮಾಜಿ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾಕ್ಕೆ ಮುಂದೆ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಭಾರತದ ವಿರುದ್ಧ ಪಂದ್ಯವಿದೆ. ಈ ಪಂದ್ಯಗಳ ಫಲಿತಾಂಶ ಕೈ ಹಿಡಿದರೆ, ನೆಟ್ ರನ್‌ ರೇಟ್ ಕೂಡ ಚೇತರಿಸಿದರೆ ಲಂಕಾ ಸೆಮಿಫೈನಲ್ ರೇಸ್ ಗೆಲ್ಲಲಿದೆ. ಸದ್ಯ ಲಂಕಾ ಖಾತೆಯಲ್ಲಿ -1.119. ರನ್ ರೇಟ್ ಇದೆ.

ಪಾಕಿಸ್ತಾನ

ಪಾಕಿಸ್ತಾನ

ದಕ್ಷಿಣ ಆಫ್ರಿಕಾ ವಿರುದ್ಧ 49 ರನ್ ಜಯ ಗಳಿಸಿದ ಬಳಿಕವೂ ಪಾಕಿಸ್ತಾನ ತಂಡದ ಸೆಮಿಫೈನಲ್ ಆಸೆಗೆ ಸಂಪೂರ್ಣ ಜೀವ ಬಂದಿಲ್ಲ. ಅತ್ತ ಆಸೆ ಸಾಯಲೂ ಇಲ್ಲ. ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಪಂದ್ಯವಿದೆ. ಇದರ ಸೋಲು ಗೆಲುವು, ಮುಂದಿನ ಎಲ್ಲಾ ಪಂದ್ಯಗಳ ಫಲಿತಾಂಶ ಎನೇ ಲೆಕ್ಕಾಚಾರ ಹಾಕಿದರೂ ಪಾಕ್‌ಗೆ ಈ ಬಾರಿಯ ವಿಶ್ವಕಪ್ ದೂರ ದೂರದ ಮಾತೆ. ಆರು ಪಂದ್ಯಗಳಲ್ಲಿ 2 ಗೆಲುವು ಮತ್ತೊಂದನ್ನು ಟೈ ಮಾಡಿಕೊಂಡಿರುವ ಪಾಕ್ ಖಾತೆಯಲ್ಲಿ 5 ಅಂಕಗಳಿದ್ದು, -1.265 ರನ್ ರೇಟ್ ಹೊಂದಿದೆ.

ವೆಸ್ಟ್ ಇಂಡೀಸ್

ವೆಸ್ಟ್ ಇಂಡೀಸ್

ವಿಶ್ವಕಪ್ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಪಾಲಿಗೂ ಈ ಬಾರಿಯ ವಿಶ್ವಕಪ್ ಆಶಾದಾಯಕವಾಗಲಿಲ್ಲ. 6 ಪಂದ್ಯಗಳಲ್ಲಿ ಕೇವಲ 1 ಗೆಲುವು, 1 ಟೈ ದಾಖಲಿಸಿರುವ ವಿಂಡೀಸ್‌ ಖಾತೆಯಲ್ಲಿ 3 ಅಂಕಗಳಿವೆ. ಮುಂದೆ ವಿಂಡೀಸ್‌ಗೆ ಭಾರತದ ವಿರುದ್ಧ ಪಂದ್ಯವಿದ್ದು ಅದರಲ್ಲಿ ಕೆರಿಬಿಯನ್ನರು ಸೋತರೆ ಅಲ್ಲಿಗೆ ಕತೆ ಫಿನಿಶ್. ಆದರೆ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ ಈ ಮೂರೂ ತಂಡಗಳ ವಿರುದ್ಧ ವಿಂಡೀಸ್ ಗೆದ್ದರೂ 9 ಅಂಕಗಳು ಸಂಪಾದನೆಯಾಗಲಿದೆ. ಇದರಿಂದಲೂ ಸೆಮಿಫೈನಲ್ ಕನಸು ಸಾಕಾರಗೊಳ್ಳಲಾರದು. ಆದರೆ ನೆಟ್ ರನ್‌ ರೇಟ್ ವಿಂಡೀಸ್‌ಗೆ ಆಶಾಭಾವನೆಯಾಗಿದೆ. ವಿಂಡೀಸ್ ಈಗ 0.182 ರನ್ ರೇಟ್ ಹೊಂದಿದೆ.

Story first published: Wednesday, June 26, 2019, 16:39 [IST]
Other articles published on Jun 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X