ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೊ-ಪಾಕ್‌ ಕ್ರಿಕೆಟ್‌ ಕದನ: ವಿರಾಟ್‌ ಕೊಹ್ಲಿ ನಿದ್ರೆ ಕಸಿದ ಆ ಪಂದ್ಯ!

World Cup 2019: When Virat Kohli had a sleepless night

ಮ್ಯಾಂಚೆಸ್ಟರ್‌, ಜೂನ್‌ 16: ಕ್ರಿಕೆಟ್‌ ಜಗತ್ತೇ ಇಂಡೊ-ಪಾಕ್‌ ಪಂದ್ಯ ವೀಕ್ಷಿಸಲು ಕಾದು ಕುಳಿತಿರುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದ ಕುರಿತಾಗಿ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಪ್ರಶಸ್ನಿಸಿದರೆ ಅವರಿಂದ ಸದಾ ಬರುವುದು ಒಂದೇ ಉತ್ತರ. ಇದು ಮತ್ತೊಂದು ಪಂದ್ಯವಷ್ಟೇ ಎಂದು ಹೇಳಿ ಜಾರಿಕೊಳ್ಳುತ್ತಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಇಂಡೊ-ಪಾಕ್‌ ಕ್ರಿಕೆಟ್‌ ಕದನದಲ್ಲಿ ನಿಮ್ಮ ಹಾಸ್ಯದ ಸನ್ನಿವೇಶ ಮತ್ತು ಆತಂಕದ ಸನ್ನಿವೇಶ ಯಾವುದಾದರು ಇದೆಯೇ ಎಂದು ಕೇಳಿದಾಗ ಬೇರೆಯದ್ದೇ ಉತ್ತರ ಸಿಕ್ಕಿದೆ. ಪಾಕಿಸ್ತಾನ ವಿರುದ್ಧ ಆಡುವ ಸಂದರ್ಭದಲ್ಲಿ ಅನುಭವಿಸಿದ ಕೆಲ ವಿಚಾರಗಳನ್ನು ಕ್ಯಾಪ್ಟನ್‌ ಕೊಹ್ಲಿ ಇಲ್ಲಿ ಹಂಚಿಕೊಂಡಿದ್ದಾರೆ.

"2009ರ ಚಾಂಪಿಯನ್ಸ್ ಟ್ರೋಫಿ ಸಂದರ್ಭವದು. ಯುವರಾಜ್‌ ಸಿಂಗ್‌ ಅವರ ಕೈ ಬೆರಳು ಮುರಿದಿತ್ತು. ಬದಲಿ ಆಟಗಾರನಾಗಿ ನನಗೆ ಬುಲಾವ್‌ ನೀಡಿದ್ದರು. ಅಂತೆಯೇ ತಂಡ ಸೇಡಿಕೊಂಡೆ. ಇನ್ನೆರಡು ದಿನಗಳಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ನಾನು ಆಡಬೇಕಿದೆ. ಈ ತರಹದ ಅನುಭವ ನನಗೆಂದೂ ಆಗಿರಲಿಲ್ಲ. ಅತ್ಯಂತ ಕಳಪೆ ಹೊಡೆತವನ್ನಾಡಿ ವಿಕೆಟ್‌ ಒಪ್ಪಿಸಿದ್ದೆ. ಇದರಿಂದಾಗಿ ಬೆಳಗ್ಗೆ 6 ಗಂಟೆಯಾದರೂ ನನಗೆ ನಿದ್ರೆ ಬಂದಿರಲಿಲ್ಲ. ರಾತ್ರಿಯಿಡೀ ಅಂಗಾತ ಮಲಗಿ ಮೇಲ್ಛಾವಣಿ ನೋಡುತ್ತಾ ಆಲೋಚಿಸುತ್ತಿದ್ದೆ. ಭಾರತದಿಂದ ಸ್ವಲ್ಪ ಸಮಯದ ಹಿಂದಷ್ಟೇ ಇಲ್ಲಿಗೆ ಬಂದು ಈಗಾಗಲೇ ಎಲ್ಲವೂ ಮುಗಿದು ಹೋಗಿದೆ,'' ಎಂದು ತಮ್ಮ ಕೆಟ್ಟ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!

ಇನ್ನು ತಮಾಷೆಯ ಸಂಗತಿಯೆಂದರೆ, "ತಮಾಷೆಯ ಸಂಗತಿ ಹಲವಿದೆ. ಆದರೂ, 2011ರ ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದ ವೇಳೆ ನಾನ್‌-ಸಟ್ರೈಕ್‌ನಲ್ಲಿ ಇದ್ದಂತಹ ವೇಳೆ ಎದುರಾದ ತಮಾಷೆಯ ಸಂಗಿತಿಯನ್ನು ಎಂದಿಗೂ ಮರೆಯಲಾರೆ. ಶಾಹಿದ್‌ ಅಫ್ರಿದಿ ಮತ್ತು ವಹಾಬ್‌ ರಿಯಾಝ್‌ ನಡುವಣ ಸಂಭಾಷಣೆಯದು. ನಾನು ನಾನ್‌ ಸ್ಟ್ರೈಕ್‌ನಲ್ಲಿ ಇದ್ದಾಗ ನನ್ನ ಕಿವಿಗೆ ಅವರಿಬ್ಬರ ನಡುವಣ ಸಂಭಾಷಣೆ ಕೇಳಿಸಿತು. ಅದನ್ನು ಖಂಡಿತವಾಗಿಯೂ ಎಲ್ಲಿಯೂ ವಿವರಿಸಿ ಹೇಳಲಾರೆ,'' ಎಂದು ಹೇಳಿದ್ದಾರೆ.

ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?

ತಂಡ ಸೇರಿಕೊಂಡ ರಿಷಭ್‌ ಪಂತ್‌
ಶಿಖರ್‌ ಧವನ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವಿಕೆಟ್‌ಕೀಪರ್‌ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಮುಂಜಾಗ್ರತೆಯ ಕ್ರಮವಾಗಿ ಟೀಮ್‌ ಇಂಡಿಯಾಗೆ ಸೇರಿಕೊಂಡಿದ್ದಾರೆ. ಅಲ್ಲದೆ ಓಲ್ಡ್‌ ಟ್ರಾಫರ್ಡ್‌ನಲ್ಲಿ ಶುಕ್ರವಾರ ಭಾರತ ತಂಡದ ಜೊತೆ ಅಭ್ಯಾಸವನ್ನೂ ನಡೆಸಿದ್ದಾರೆ. ಈ ವೇಳೆ ಮಾಜಿ ನಾಯಕ ಎಂ.ಎಸ್‌ ಧೋನಿ ಜೊತೆಗೆ ಸುದೀರ್ಘ ಸಂಭಾಷಣೆಯಲ್ಲೂ ನಿರತರಾಗಿದ್ದರು. ತಮ್ಮ ಅಧಿಕೃತ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆ ಮೂಲಕವೂ ಪಂತ್‌ ತಾವು ಮ್ಯಾಂಚೆಸ್ಟರ್‌ ತಲುಪಿರುವುದರ ಚಿತ್ರಗಳನ್ನು ಪ್ರಕಟ ಮಾಡಿದ್ದಾರೆ. ಶಿಖರ್‌ ಧವನ್‌ ಗಾಯದಿಂದ ಚೇತರಿಸಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿದ್ದರಷ್ಟೇ ರಿಷಭ್‌ಗೆ ಟೀಮ್‌ ಇಂಡಿಯಾ ಪರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿದೆ.

Story first published: Sunday, June 16, 2019, 16:22 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X