ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಔಟಾದರೂ ಕೇನ್‌ ವಿಲಿಯಮ್ಸನ್‌ ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಏಕೆ?

World Cup 2019: Why didnt Kane Williamson walk?

ಬರ್ಮಿಂಗ್‌ಹ್ಯಾಮ್‌, ಜೂನ್‌ 20: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ ತಂಡ ಜಿದ್ದಾಜಿದ್ದಿನ ಹೋರಾಟದ ನಡುವ ರೋಚಕ ಜಯ ದಾಖಲಿಸಿತ್ತು. ಆದರೆ, ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ 38ನೇ ಓವರ್‌ನಲ್ಲಿ ಔಟಾಗಿದ್ದರೂ ಹೊರನಡೆಯದೇ ಕ್ರೀಡಾ ಸ್ಫೂರ್ತಿಯನ್ನು ಮರೆತದ್ದೇಕೆ ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೆ ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ಒಪ್ಪಿಕೊಂಡು ಅಂಪೈರ್‌ ಔಟ್‌ ಎಂದು ತೀರ್ಪು ನೀಡದೇ ಇದ್ದರೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಪೆವಿಲಿಯನ್‌ಗೆ ತೆರಳುವ ಮೂಲಕ ಅಪ್ರತಿಮ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಇದಕ್ಕೆ ಕ್ರಿಕೆಟ್‌ ಜಗತ್ತಿನಲ್ಲಿ ಭಾರಿ ಮೆಚ್ಚುಗೆ ಹರಿದು ಬಂದಿತ್ತು.

ಧವನ್‌ ಬಳಿಕ ಆಲ್‌ರೌಂಡರ್‌ ವಿಜಯ್‌ ಶಂಕರ್‌ಗೂ ಗಾಯದ ಹೊಡೆತ!ಧವನ್‌ ಬಳಿಕ ಆಲ್‌ರೌಂಡರ್‌ ವಿಜಯ್‌ ಶಂಕರ್‌ಗೂ ಗಾಯದ ಹೊಡೆತ!

ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 242 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ತಂಡ ಇನಿಂಗ್ಸ್‌ ಮಧ್ಯದಲ್ಲಿ ಸತತ ವಿಕೆಟ್‌ ಕೈಚೆಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಈ ಸಂದರ್ಭದಲ್ಲಿ ಆಸರೆಯಾಗಿ ನಿಂತ ನಾಯಕ ಕೇನ್‌ ವಿಲಿಯಮ್ಸನ್‌ ಅದ್ಭುತ ಬ್ಯಾಟಿಂಗ್‌ ನಡೆಸಿ, 136 ಎಸೆತಗಳಲ್ಲಿ 9 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ ಅಜೇಯ 106 ರನ್‌ಗಳನ್ನು ದಾಖಲಿಸಿ ತಂಡಕ್ಕೆ 4 ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು.

38ನೇ ಓವರ್‌ನಲ್ಲೇ ವಿಲಿಯಮ್ಸನ್‌ ಔಟ್‌!

38ನೇ ಓವರ್‌ನಲ್ಲೇ ವಿಲಿಯಮ್ಸನ್‌ ಔಟ್‌!

ದಕ್ಷಿಣ ಆಫ್ರಿಕಾ ತಂಡದ ಅನುಭವಿ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರ ಬೌಲಿಂಗ್‌ನಲ್ಲಿ ಇನಿಂಗ್ಸ್‌ನ 38ನೇ ಓವರ್‌ನಲ್ಲಿ ಚೆಂಡು ಕೇನ್‌ ವಿಲಿಯಮ್ಸನ್‌ ಅವರ ಬ್ಯಾಟ್‌ಗೆ ತಾಗಿ ವಿಕೆಟ್‌ಕೀಪರ್‌ ಕ್ವಿಂಟನ್‌ ಡಿ'ಕಾಕ್‌ ಅವರ ಕೈಸೇರಿತ್ತು. ತಾಹಿರ್‌ ವಿಕೆಟ್‌ಗಾಗಿ ಮನವಿ ಮಾಡಿದರಾದರೂ, ಅಂಪೈರ್‌ ನಾಟ್‌ ಔಟ್‌ ನಿರ್ಧಾರ ನೀಡಿದ್ದರು. ಆದರೆ, ಕೀಪರ್‌ ಡಿ'ಕಾಕ್‌ ಚೆಂಡು ಬ್ಯಾಟ್‌ಗೆ ತಾಗಿರುವುದನ್ನು ಅಂದಾಜಿಸುವಲ್ಲಿ ವಿಫಲರಾಗಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಅಂಪೈರ್‌ ತೀರ್ಪನ್ನು ಮರು ಪರಿಶೀಲಿಸಲು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ ಮುಂದಾಗಲಿಲ್ಲ. ಟೆಲಿವಿಷನ್‌ ರೀಪ್ಲೇಯಲ್ಲಿ ಕೇನ್‌ ಬ್ಯಾಟ್‌ಗೆ ಚೆಂಡು ತಾಗಿರುವುದು ಪತ್ತೆಯಾಗಿತ್ತು.

ವಿಲಿಯಮ್ಸನ್‌ ಕ್ರೀಡಾ ಸ್ಫೂರ್ತಿ ಮರೆತರೆ?

ವಿಲಿಯಮ್ಸನ್‌ ಕ್ರೀಡಾ ಸ್ಫೂರ್ತಿ ಮರೆತರೆ?

ಇನ್ನು ಪಂದ್ಯದ ನಂತರ ಕೇನ್‌ ವಿಲಿಯಮ್ಸನ್‌ ಅವರ ಕ್ರೀಡಾ ಸ್ಫೂರ್ತಿ ಕುರಿತಾಗಿ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್‌ ಪೌಲ್‌ ಆಡಮ್ಸ್‌ ಪ್ರಶ್ನೆ ಮಾಡಿದ್ದಾರೆ. ತಮ್ಮ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿರುವ ಆಡಮ್ಸ್‌, "ಔಟ್‌ ಆಗಿರುವುದು ಗೊತ್ತಾದ ಕೂಡಲೇ ಕೇನ್‌ ವಿಲಿಯಮ್ಸನ್‌ ಹೊರನಡೆಯಲಿಲ್ಲವೇಕೆ? ಅದೇ ಅವರನ್ನು ಮಂಕಡಿಂಗ್‌ ಮಾಡಿದ್ದರೆ ಬೇಸರಗೊಳ್ಳುತ್ತಿರಲಿಲ್ಲವೇ? ಎಂದು ಕೆಣಕಿದ್ದಾರೆ. ಇದೇ ವೇಳೆ ಸೋಚಿಯಲ್‌ ಮೀಡಿಯಾದಲ್ಲೂ ವಿಲಿಯಮ್ಸನ್‌ ಅವರ ಕ್ರೀಡಾ ಸ್ಫೂರ್ತಿ ಕುರಿತಾಗಿ ಪರ ವಿರೋಧಗಳ ಚರ್ಚೆ ಜೋರಾಗಿಯೇ ನಡೆದಿದೆ.

ನಾಯಕ ಫಾಫ್‌ಗೆ ಸುಳಿವೇ ಇಲ್ಲ

ನಾಯಕ ಫಾಫ್‌ಗೆ ಸುಳಿವೇ ಇಲ್ಲ

ದಕ್ಷಿಣ ಆಫ್ರಿಕಾದ ನಾಯಕ ಫಾಫ್‌ ಡು'ಪ್ಲೆಸಿಸ್‌ ಅವರಿಗೆ 38ನೇ ಓವರ್‌ನಲ್ಲಿ ವಿಲಿಯಮ್ಸನ್‌ ಔಟ್‌ ಆಗಿದ್ದರು ಎಂಬುದರ ಸುಳಿವೇ ಇರಲಿಲ್ಲ. ಇದನ್ನು ಪಂದ್ಯದ ಬಳಿಕ ತಮ್ಮ ಅನುಭವ ಹಂಚಿಕೊಂಡ ಸಂದರ್ಭದಲ್ಲಿ ಫಾಫ್‌ ಬಾಯ್ಬಿಟ್ಟಿದ್ದರು. ಆದರೆ, ಈ ವಿಚಾರ ತಿಳಿದ ಬಳಿಕ ಮಾತನಾಡಿದ ಹರಿಣ ಪಡೆಯ ನಾಯಕ, "ನಾನು ಲಾಂಗ್‌ ಆಫ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ವಿಕೆಟ್‌ಕೀಪರ್‌ ಕ್ವಿಂಟನ್‌ ಡಿ'ಕಾಕ್‌ ಮೇಲೆ ಹೆಚ್ಚು ಭರವಸೆ ಇಡುತ್ತೇನೆ. ಏಕೆಂದರೆ ಆತನೇ ಈ ಘಟನೆಗೆ ಅತ್ಯಂತ ಸಮೀಪದ ವ್ಯಕ್ತಿ. ಹೀಗಿರುವಾಗ ಆತನ ನಿರ್ಧಾರಕ್ಕೆ ಸಮ್ಮತಿಸುತ್ತೇನೆ. ಕೇನ್‌ ವಿಲಿಯಮ್ಸನ್‌ಗೂ ಚೆಂಡು ಬ್ಯಾಟ್‌ಗೆ ತಾಗಿರುವುದು ಗೊತ್ತಾಗಲಿಲ್ಲವಂತೆ. ಆದರೆ, ನಮ್ಮ ಸೋಲಿಗೆ ಇದು ಕಾರಣವಲ್ಲ. ಬ್ಯಾಟಿಂಗ್‌ನಲ್ಲಿ ಇನ್ನು ಕನಿಷ್ಠ 30 ರನ್‌ಗಳನ್ನಾದರೂ ಹೆಚ್ಚುವರಿಯಾಗಿ ಗಳಿಸಬೇಕಿತ್ತು.'' ಎಂದು ಫಾಫ್‌ ಹೇಳಿದ್ದಾರೆ.

 ವಿಲಿಯಮ್ಸನ್‌ ಶತಕ ವಿವರ

ವಿಲಿಯಮ್ಸನ್‌ ಶತಕ ವಿವರ

ರನ್‌: 106*
ಎಸೆತ: 138
ಸಮಯ: 216 ನಿಮಿಷ
ಫೋರ್‌: 09
ಸಿಕ್ಸರ್‌: 01
ಸ್ಟ್ರೈಕ್‌ರೇಟ್‌: 76.81

Story first published: Thursday, June 20, 2019, 19:52 [IST]
Other articles published on Jun 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X