ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಭಾರತ ವಿರುದ್ಧ ಭರ್ಜರಿ ಬ್ಯಾಟಿಂಗ್‌ನ ಮುನ್ಸೂಚನೆಯಿತ್ತ ಬಾಬರ್!

ICC World Cup 2019 : ಕೊಹ್ಲಿ ನೋಡಿ ಪಾಕ್ ಆಟಗಾರ ಕಲಿತಿದ್ದೇನು ಗೊತ್ತಾ..? | Oneindia Kannada
World Cup: Babar Azam watches Virat Kohlis batting videos to prepare for India clash

ಮ್ಯಾನ್ಚೆಸ್ಟರ್, ಜೂನ್ 15: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾನುವಾರ (ಜೂನ್ 16) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಹೈವೋಲ್ಟೇಜ್ ಕದನಕ್ಕಾಗಿ ಪಾಕಿಸ್ತಾನ ಭಾರೀ ತಯಾರಿ ನಡೆಸುತ್ತಿದೆ. ಪಾಕ್ ಬ್ಯಾಟ್ಸ್ಮನ್‌ ಬಾಬರ್ ಅಝಾಮ್ ಅವರು ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಡಿಯೋ ವೀಕ್ಷಿಸುವ ಮೂಲಕ ಕೊಹ್ಲಿ ಶೈಲಿ ಕಲಿಯುವ ಯತ್ನ ಮಾಡುತ್ತಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಜೂನ್ 3ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪಾಕ್, ಇಂಗ್ಲೆಂಡ್‌ಗೆ ಶಾಕ್ ನೀಡಿತ್ತು. ಈ ಪಂದ್ಯದಲ್ಲಿ 63 ರನ್ ಬಾರಿಸಿದ್ದ ಬಾಬರ್ ತಂಡದ ಗೆಲುವಿಗೆ ನೆರವಾಗಿದ್ದರು. ಪಾಕ್ ತಂಡದಲ್ಲಿ ಪ್ರಮುಖ ಬ್ಯಾಟ್ಸ್ಮನ್‌ ಆಗಿರುವ ಬಾಬರ್, ಭಾರತ ವಿರುದ್ಧ ಹೆಚ್ಚು ರನ್ ಗಳಿಸುವತ್ತ ಕಣ್ಣಿಟ್ಟಿದ್ದಾರೆ.

ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್

ಈ ಬಗ್ಗೆ ಮಾತನಾಡಿದ ಬಾಬರ್ ಅಝಾಮ್, 'ಕೊಹ್ಲಿಯಿಂದ ಕಲಿಯಬೇಕೆಂದು ನಾನು ಅವರ ಬ್ಯಾಟಿಂಗ್ ವೀಕ್ಷಿಸುತ್ತಿದ್ದೇನೆ. ವಿವಿಧ ಸಂದರ್ಭಗಳಲ್ಲಿ ಕೊಹ್ಲಿಯ ಬ್ಯಾಟಿಂಗ್ ಶೈಲಿಗಳನ್ನು ಗಮನಿಸುತ್ತಿದ್ದೇನೆ. ತಂಡದಲ್ಲಿ ಕೊಹ್ಲಿಯ ಬ್ಯಾಟಿಂಗ್ ಪ್ರಮುಖವಾದುದು. ಹೀಗಾಗಿ ಅವರನ್ನೇ ಅನುಸರಿಸಲು ಯತ್ನಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

2 ವರ್ಷಗಳಿಗೆ ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಪಾಕ್ ಗೆದ್ದಿದ್ದನ್ನೇ ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತೇವೆ ಎಂದು 24ರ ಹರೆಯದ ಬಲಗೈ ಬ್ಯಾಟ್ಸ್ಮನ್ ಹೇಳಿಕೊಂಡಿದ್ದಾರೆ. 'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಗೆದ್ದಿದ್ದು ನಮಗೆ ವಿಶ್ವಾಸ ತುಂಬಿದೆ. ಬಹುತೇಕ ಅಂದು ಆಡಿದ್ದ ತಂಡವೇ ಇಂದೂ ಇದ್ದು, ನಮ್ಮ ಧೈರ್ಯ ಹೆಚ್ಚಿಸಿದೆ' ಎಂದು ಬಾಬರ್ ವಿವರಿಸಿದರು.

ಭಾರತ ವರ್ಸಸ್ ಪಾಕಿಸ್ತಾನ : 5 ವಿಕೆಟ್ ಕಬಳಿಸಿದ ಕಲಿಗಳುಭಾರತ ವರ್ಸಸ್ ಪಾಕಿಸ್ತಾನ : 5 ವಿಕೆಟ್ ಕಬಳಿಸಿದ ಕಲಿಗಳು

ಈವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ನಲ್ಲಿ 6 ಬಾರಿ ಕಾದಾಡಿವೆ. ಇದರಲ್ಲಿ ಎಲ್ಲಾ ಪಂದ್ಯಗಳನ್ನೂ ಭಾರತ ಗೆದ್ದುಕೊಂಡಿತ್ತು. ಆದರೆ ಎದುರಾಳಿಯ ಯುದ್ಧ ಶೈಲಿಯನ್ನು ಗಮನಿಸೋದೂ ಜಾಣ ಸೈನಿಕನ ಲಕ್ಷಣ. ಅದನ್ನೇ ಬಾಬರ್ ಈ ವಿಶ್ವಕಪ್‌ನಲ್ಲಿ ಅನುಸರಿಸಲು ಬಾಬರ್ ಯತ್ನಿಸುತ್ತಿದ್ದಾರೆ. ಇತ್ತಂಡಗಳ ಈ ಕುತೂಹಲಕಾರಿ ಕದನ 3 pmಗೆ ಆರಂಭಗೊಳ್ಳಲಿದೆ.

Story first published: Saturday, June 15, 2019, 15:58 [IST]
Other articles published on Jun 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X