ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿರುದ್ಧ ನಯವಾಗಿಯೇ ಛಾಟಿ ಬೀಸಿದ ಕೇನ್ ವಿಲಿಯಮ್ಸನ್!

World Cup Final Boundary Count Not Really Cricket: kane

ಕ್ರಿಕೆಟ್‌ ನಿಯಮದ ಬಗ್ಗೆ ನ್ಯೂಝಿಲ್ಯಾಂಡ್ ನಾಯಕ ಕೇನ್‌ ವಿಲಿಯಮ್ಸನ್ ನಯವಾಗಿಯೇ ಛಾಟಿ ಬೀಸಿದ್ದಾರೆ. ಈ ರೀತಿಯ ನಿರ್ಧಾರಗಳು ನಾಲ್ಕು ಗೋಡೆಯ ಮಧ್ಯೆ ಕುಳಿತು ಹೊಳೆದಿದ್ದನ್ನು ಹೇಳುವಂತಾ ಸಂದರ್ಭದಲ್ಲಿ ಬಂತಂತಾ ಯೋಚನೆಗಳೇ ಆಗಿರುತ್ತವೆ, ದುರಂತವೇನೆಂದರೆ ಅದು ನಿಯಮಾಳಿಯಾಗಿ ಕಾರ್ಯರೂಪಕ್ಕೆ ಬಂದು ಬಿಟ್ಟಿದೆ. ಇದು ಭಯಾನಕ ವಿಚಾರ ಎಂದು ಐಸಿಸಿಯನ್ನು ತಿವಿದಿದ್ದಾರೆ.

ಕಳೆದ ವಿಶ್ವಕಪ್‌ ಪೈನಲ್ ಪಂದ್ಯವನ್ನು ನಾಟಕೀಯ ರೀತಿಯಲ್ಲಿ ಕಳೆದುಕೊಂಡ ಬಗ್ಗೆ ನ್ಯೂಝೀಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನಿಜವಾದ ಕ್ರಿಕೆಟ್ ಅದು ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇನ್ ವಿಲಿಯಮ್ಸನ್ ಈ ರೀತಿಯಾಗಿ ತಮ್ಮ ನೋವನ್ನು ಹಂಚಿಕೊಂಡರು.

ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

ಈ ರೀತಿಯ ಜಿದ್ದಾಜಿದ್ದಿನ ಪಂದ್ಯಗಳಲ್ಲಿ ಆಡುವುದು ನಿಜಕ್ಕೂ ಸಂತಸದ ಸಂಗತಿ. ಆದರೆ ಯಾರೂ ಕೂಡ ಈ ರೀತಿ ನಡೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಆದರೆ ಅದೇ ನಡೆದು ಹೋಗಿದೆ ಎಂದು ಹತಾಶೆಯಿಂದ ಉತ್ತರವನ್ನು ನೀಡಿದರು. ನ್ಯೂಝೀಲ್ಯಾಂಡ್ ತಂಡ ತವರಿನಲ್ಲಿ ಇಂಗ್ಲೆಂಡದ ವಿರುದ್ಧ 2 ಟೆಸ್ಟ್‌ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಅದಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಟಿಯಲ್ಲಿ ಕೇನ್ ವಿಲಿಯಮ್ಸನ್ ವಿಶ್ವಕಪ್‌ ಸೋಲಿನ ಬಗ್ಗೆ ಮಾತನಾಡಿದರು.

ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!

ಜುಲೈ 14ರಂದು ಇಂಗ್ಲೆಂಡ್‌ನ ಲಾರ್ಡ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಆಡಿದ 50 ಓವರ್‌ಗಳಲ್ಲಿ ಪಂದ್ಯ ಟೈ ಆದ ಬಳಿಕ ಸೂಪರ್‌ ಓವರ್ ಅವಕಾಶ ನೀಡಲಾಗಿತ್ತು. ಸೂಪರ್‌ ಓವರ್ ಕೂಡ ಟೈನಲ್ಲೈ ಅಂತ್ಯವಾಗಿದ್ದರಿಂದ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವಾದ ಇಂಗ್ಲೆಂಡ್ ವಿಜಯೀ ಎಂದು ಘೋಷಿಸಲಾಯಿತು. ಈ ರೀತಿ ಮಹತ್ವದ ಟೂರ್ನಿಯೊಂದರ ವಿಜಯಿ ತಂಡವನ್ನು ನಿರ್ಧಾರಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Story first published: Wednesday, November 20, 2019, 15:40 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X