ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಮರೆಯಾಗದ ಸ್ಫೋಟಕ ಬ್ಯಾಟಿಂಗ್‌ ಕ್ಷಣಗಳು!

world cup flashback: The famous knock-out punches

ಬೆಂಗಳೂರು, ಮೇ 28: ಸುಮಾರು 44 ವರ್ಷಗಳ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಲೆಕ್ಕವಿಡದಷ್ಟು ರಸ ಕ್ಷಣಗಳನ್ನು ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸಿದ್ದಾರೆ. ವಿಶ್ವಕಪ್ ಕ್ರಿಕೆಟ್ ಅಂದರೇನೇ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡುವಲ್ಲಿ ಅನೇಕ ಕ್ರಿಕೆಟ್ ದಂತ ಕತೆಗಳ ಕೊಡುಗೆ ಮಹತ್ವದ್ದು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ದೊಡ್ಡ ಮಟ್ಟದ ವಿಶ್ವಕಪ್ ಕ್ರಕೆಟ್ ಟೂರ್ನಿಯಲ್ಲಿ ಹೆಚ್ಚಿನ ಬ್ಯಾಟ್ಸಮನ್‌ಗಳು ಹೊಡ್ಡ ಹೊಡೆತಕ್ಕೆ ಸುಲಭಕ್ಕೆ ಕೈ ಹಾಕೋದು ಕಡಿಮೆ. ಆದರೆ ಪಂದ್ಯ ರೋಕಚ ಹಂತಕ್ಕೆ ತಿರುಗಿ ಮಾಡು-ಇಲ್ಲವೆ ಮಡಿ ಘಟ್ಟ ತಲುಪಿದಾಗ ಹಲವಾರು ಬ್ಯಾಟ್ಸ್ಮನ್‌ಗಳು ಬ್ಯಾಟಿಂಗ್‌ನಲ್ಲಿ ಸಿಡಿದಿದ್ದಿದೆ.

ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!

ಮೇ 30ರ ವಿಶ್ವಕಪ್ ಟೂರ್ನಿ ಆರಂಭಗೊಳ್ಳುವುದಕ್ಕೂ ಮುನ್ನ ವಿಶ್ವಕಪ್‌ನ ಸ್ಫೋಟಕ ಬ್ಯಾಟಿಂಗ್ ಕ್ಷಣಗಳತ್ತ ಒಂದು ಇಣುಕು ಹಾಕೋಣ.

ಕ್ಲೈವ್ ಲಾಯ್ಡ್

ಕ್ಲೈವ್ ಲಾಯ್ಡ್

1975ರ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ವಿಂಡೀಸ್ ನಾಯಕರಾಗಿದ್ದ ಕ್ಲೈವ್ ಲಾಯ್ಡ್ 85 ಎಸೆತಗಳಿಗೆ 102 ರನ್ ಚಚ್ಚಿದ್ದರು. ಲಂಡನ್ ನ ಲಾರ್ಡ್ಸ್ ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 17 ರನ್‌ಗಳಿಂದ ರೋಚಕ ಜಯ ಗಳಿಸಿತ್ತು.

ಕಪಿಲ್‌ ದೇವ್

ಕಪಿಲ್‌ ದೇವ್

ಭಾರತದ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಅವರು 1983ರಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್ (138 ಎಸೆತಗಳು) ಚಚ್ಚಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಟನ್‌ಬ್ರಿಡ್ಜ್‌ವೆಲ್‌ನಲ್ಲಿ ನಡೆದಿದ್ದ ಈ ಪ್ರುಡೆನ್ಷಿಯಲ್ ವಿಶ್ವಕಪ್ ಪಂದ್ಯದಲ್ಲಿ ಭಾರತ 31 ರನ್ ಗೆಲುವು ದಾಖಲಿಸಿತ್ತು.

ಇನ್ಝಮಾಮ್ ಉಲ್ ಹಕ್

ಇನ್ಝಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಇನ್ಝಮಾಮ್ ಉಲ್ ಹಕ್ ಬಿರುಸಿನ ಬ್ಯಾಟಿಂಗ್‌ಗಾಗಿ ಕೇಳಿ ಬರುತ್ತಿದ್ದ ಹೆಸರು. ಅಕ್ಲ್ಯಾಂಡ್‌ನಲ್ಲಿ 1992ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಹಕ್, ಪಾಕ್ ತಂಡವನ್ನು 4 ವಿಕೆಟ್‌ಗಳಿಂದ ಗೆಲ್ಲಿಸಿದ್ದರು. ಈ ಪಂದ್ಯದಲ್ಲಿ ಇನ್ಝಮಾಮ್ 37 ಎಸೆತಗಳಿಗೆ 60 ರನ್ ಸಿಡಿಸಿದ್ದರು.

ಅರವಿಂದ ಡೆ ಸಿಲ್ವಾ

ಅರವಿಂದ ಡೆ ಸಿಲ್ವಾ

1996ರಲ್ಲಿ ಲಾರೋರ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ ಪರ ಬ್ಯಾಟ್ ಬೀಸಿದ್ದ ಅರವಿಂದ ಡೆ ಸಿಲ್ವಾ 124 ಎಸೆತಗಳಿಗೆ ಅಜೇಯ 107 ರನ್ ಬಾರಿಸಿದ್ದರು. ಪಂದ್ಯದಲ್ಲಿ ಶ್ರೀಲಂಕಾ ಇನ್ನೂ 22 ಎಸೆತಗಳು ಬಾಕಿ ಉಳಿಸಿಕೊಂಡು 7 ವಿಕೆಟ್‌ಗಳಿಂದ ಗೆದ್ದಿತ್ತು.

ಸ್ಟೀವ್ ವಾ

ಸ್ಟೀವ್ ವಾ

1999ರಲ್ಲಿ ಲೀಡ್ಸ್ ನಲ್ಲಿ ನಡೆದಿದ್ದ ಸೂಪರ್ ಸಿಕ್ಸ್ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಸ್ಟೀವ್ ವಾ ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಆಸೀಸ್ ಗೆಲುವಿಗೆ ಕಾರಣರಾಗಿದ್ದರು. ಈ ವೇಳೆ ಸ್ಟೀವ್ 110 ಎಸೆತಗಳಿಗೆ ಅಜೇಯ 120 ರನ್ ಕೊಡುಗೆ ನೀಡಿದ್ದರು. ಕಾಂಗರೂ ಪಡೆ 5 ವಿಕೆಟ್ ಗೆಲುವನ್ನಾಚರಿಸಿತ್ತು.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಸೆಂಚುರಿಯನ್‌ನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 75 ಎಸೆತಗಳಿಗೆ 98 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಇನ್ನೂ 26 ಎಸೆತಗಳು ಬಾಕಿಯಿರುವಾಗಲೇ ಭಾರತ 6 ವಿಕೆಟ್ ಜಯಭೇರಿ ಬಾರಿಸಿತ್ತು.

ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್

ಭಾರತ ವಿರುದ್ಧ ಆಸೀಸ್ ನಾಯಕ ರಿಕಿ ಪಾಂಟಿಂಗ್ ಅಜೇಯ 140 ರನ್ (121 ಎಸೆತ) ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಜೋಹನ್ಸ್‌ಬರ್ಗ್‌ನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯವಿದು. ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ 125 ರನ್‌ಗಳಿಂದ ಗೆದ್ದಿತ್ತು.

ಆ್ಯಡಮ್ ಗಿಲ್‌ಕ್ರಿಸ್ಟ್

ಆ್ಯಡಮ್ ಗಿಲ್‌ಕ್ರಿಸ್ಟ್

ಬರ್ಬೊಡಾಸ್‌ನಲ್ಲಿ 2007ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಕಾದಾಡಿದ್ದವು. ಇದರಲ್ಲಿ ಆಸೀಸ್ ಆರಂಭಿಕ ಆಟಗಾರ ಆ್ಯಮ್ ಗಿಲ್‌ಕ್ರಿಸ್ಟ್ 104 ಎಸೆತಗಳಿಗೆ 149 ರನ್ ಬಾರಿಸಿದ್ದರು. ಇದರಲ್ಲಿ ಆಸ್ಟ್ರೇಲಿಯಾ 53 ರನ್‌ ನಿಂದ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗೆದ್ದಿತ್ತು.

Story first published: Tuesday, May 28, 2019, 19:42 [IST]
Other articles published on May 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X