ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

World Cup Flashbacks: Players who have represented two countries at the World Cup

ಬೆಂಗಳೂರು, ಮೇ 30: ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಬಹುದೊಡ್ಡ ಕನಸಾಗಿರುತ್ತದೆ. 12ನೇ ಆವೃತ್ತಿಯ ವಿಶ್ವಕಪ್‌ ಈಗಷ್ಟೇ ಶುರುವಾಗಿದ್ದು, ಹಲವು ಆಟಗಾರರು ತಮ್ಮ ಕನಸನ್ನು ನನಸನ್ನಾಗಿಸಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು /

44 ವರ್ಷಗಳ ಸುದೀರ್ಘಾವಧಿಯ ಇತಿಹಾಸ ಹೊಂದಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 11 ಟೂರ್ನಿಗಳು ನಡೆದಿವೆ. ಇದರಲ್ಲಿಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಮತ್ತು ಪಾಕಿಸ್ತಾನದ ಮಾಜಿ ಆಟಗಾರ ಜಾವೇದ್‌ ಮಿಯಾಂದಾದ್‌ ಮಾತ್ರವೇ ಒಟ್ಟು 6 ವಿಶ್ವಕಪ್‌ ಟೂರ್ನಿಗಳನ್ನಾಡಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಆದರೆ, ಮತ್ತೂ ಕೆಲ ಆಟಗಾರರು ವಿಶ್ವಕಪ್‌ ಟೂರ್ನಿಗಳಲ್ಲಿ ಎರಡು ವಿಭಿನ್ನ ತಂಡಗಳನ್ನು ಪ್ರತಿನಿಧಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ. ಆ ಆಟಗಾರರ ವಿವರ ಇಲ್ಲಿದೆ.

ವಿಶ್ವಕಪ್‌ ಇತಿಹಾಸ

ಕೆಪ್ಲರ್‌ ವೆಸೆಲ್‌ (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ)

ಕೆಪ್ಲರ್‌ ವೆಸೆಲ್‌ (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೆಪ್ಲರ್‌ ವೆಸಲ್‌ ವಿಶ್ವಕಪ್‌ನಲ್ಲಿ ಎರಡು ವಿಭಿನ್ನ ತಂಡಗಳ ಪರ ಆಡಿದ ಮೊತ್ತ ಮೊದಲ ಆಟಗಾರ. ದಕ್ಷಿಣ ಆಫ್ರಿಕಾದ ಬ್ಲೊಮ್‌ಫಾಂಟೀನ್‌ನಲ್ಲಿ ಹುಟ್ಟಿ ಬೆಳೆದ ಕೆಪ್ಲರ್‌, ಬಳಿಕ ಆಸ್ಟ್ರೇಲಿಯಾ ಸೇರಿದರು. ಮೊದಲಿಗೆ ಕ್ವೀನ್ಸ್‌ಲ್ಯಾಂಡ್‌ ತಂಡದ ಪರ ಆಡಲು ಆರಂಭಿಸಿದ ಕೆಪ್ಲರ್‌ ಕ್ರಮೇಣ 1982ರಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡರು. ಅಂತೆಯೇ 1983ರ ವಿಶ್ವಕಪ್‌ನಲ್ಲಿ ಕಿಮ್‌ ಹ್ಯೂಸ್‌ ಸಾರಥ್ಯದ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾದ 9 ವರ್ಷಗಳ ಬಳಿಕ ಕೆಪ್ಲರ್‌ ಮರಳಿ ವಿಶ್ವಕಪ್‌ ಅಂಗಣಕ್ಕೆ ಕಾಲಿಟ್ಟಿದ್ದರು. ಆದರೆ, ಈ ಬಾರಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಅಖಾಡಕ್ಕೆ ಇಳಿದಿದ್ದರು. 1992ರಲ್ಲಿ ದಕ್ಷಿಣ ಆಫ್ರಿಕಾ ತನ್ನ ಚೊಚ್ಚಲ ವಿಶ್ವಕಪ್‌ ಟೂರ್ನಿಯನ್ನಾಡಿತ್ತು.

ಆಂಡರ್ಸನ್‌ ಕಮಿನ್ಸ್‌ (ವೆಸ್ಟ್‌ ಇಂಡೀಸ್‌ ಮತ್ತು ಕೆನಡಾ)

ಆಂಡರ್ಸನ್‌ ಕಮಿನ್ಸ್‌ (ವೆಸ್ಟ್‌ ಇಂಡೀಸ್‌ ಮತ್ತು ಕೆನಡಾ)

ಬಾರ್ಬೇಡೊಸ್‌ನಲ್ಲಿ ಜನಿಸಿದ ಆಂಡರ್ಸನ್‌ ಕಮಿನ್ಸ್‌ ಈ ಸಾಧನೆ ಮಾಡಿದ ಎರಡನೇ ಆಟಗಾರ. ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ 1991ರಲ್ಲಿ ಕೆರಿಬಿಯನ್‌ ಪಡೆ ಸೇರಿಕೊಳ್ಳುವ ಮೂಲಕ 1992ರ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದರು. ಇದಾದ 15 ವರ್ಷಗಳ ನಂತರ ಅಚ್ಚರಿಯ ಬೆಳವಣಿಗೆ ಎಂಬಂತೆ ಕೆನಡಾ ತಂಡದ ಪರ ಆಡಿದ ಕಮಿನ್ಸ್‌, 2007ರ ವಿಶ್ವಕಪ್‌ ಟೂರ್ನಿಯಲ್ಲಿ ಕೆನಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಟೂರ್ನಿಯಲ್ಲಿ ಕೆನಡಾ ತಂಡ ಗ್ರೂಪ್‌ ಹಂತವನ್ನೂ ದಾಟಲಿಲ್ಲ. ಕಮಿನ್ಸ್‌ ಕೆನಡಾ ತಂಡದಲ್ಲಿ ಇದ್ದ ಅತ್ಯಂತ ಹಿರಿಯ ಆಟಗಾರನಾಗಿದ್ದರು.

ಐಯಾನ್‌ ಮಾರ್ಗನ್‌ (ಐರ್ಲೆಂಡ್‌ ಮತ್ತು ಇಂಗ್ಲೆಂಡ್‌)

ಐಯಾನ್‌ ಮಾರ್ಗನ್‌ (ಐರ್ಲೆಂಡ್‌ ಮತ್ತು ಇಂಗ್ಲೆಂಡ್‌)

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡದ ಪರ ಅತಿ ಹೆಚ್ಚು ರನ್‌ಗಳನ್ನು ಗಳಿಸಿರುವ ಬ್ಯಾಟ್ಸ್‌ಮನ್‌ ಐಯಾನ್‌ ಮಾರ್ಗನ್‌. ಅಲ್ಲದೆ 2015 ಮತ್ತು ಈ ಬಾರಿಯ (2019) ವಿಶ್ವಕಪ್‌ ಟೂರ್ನಿಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಮಾರ್ಗನ್‌ ಮುನ್ನಡೆಸುತ್ತಿದ್ದರೆ. ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಜನಿಸಿದ ಮಾರ್ಗನ್‌, 2007ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ ತಂಡದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿದ್ದರು. ಅವರಿಗಾಗ 16 ವರ್ಷ ವಯಸ್ಸು. ಬಳಿಕ 2011ರ ವಿಶ್ವಕಪ್‌ಗೆ ಐರ್ಲೆಂಡ್‌ ತಂಡಕ್ಕೆ ಅರ್ಹತೆ ತಂದುಕೊಡುವಲ್ಲಿ ಮಾರ್ಗನ್‌ ಮಹತ್ವದ ಪಾತ್ರ ವಹಿಸಿದ್ದರು. ಆದರೆ, 2009ರ ಹೊತ್ತಿಗಾಗಲೇ ಅವರು ಇಂಗ್ಲೆಂಡ್‌ ತಂಡಕ್ಕೆ ಸೇರಿದ್ದರು. 2011ರ ವಿಶ್ವಕಪ್‌ನಲ್ಲಿ ಆಡಲು ಸಿಕ್ಕ 3 ಪಂದ್ಯಗಳಲ್ಲಿ ಮಾರ್ಗನ್‌ 2 ಅರ್ಧಶತಕ ದಾಖಲಿಸಿದ್ದರು. ಬಳಿಕ 2015ರಲ್ಲಿ ಇಂಗ್ಲೆಂಡ್‌ ತಂಡವನ್ನು ವಿಶ್ವಕಪ್‌ನಲ್ಲಿ ಮುನ್ನಡೆಸಿದ್ದರು. ಇದೀಗ 32 ವರ್ಷದ ಅನುಭವಿ ಆಟಗಾರ 2019ರ ವಿಶ್ವಕಪ್‌ನಲ್ಲೂ ಇಂಗ್ಲೆಂಡ್‌ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಎಡ್‌ ಜಾಯ್ಸ್‌ (ಇಂಗ್ಲೆಂಡ್‌ ಮತ್ತು ಐರ್ಲೆಂಡ್‌)

ಎಡ್‌ ಜಾಯ್ಸ್‌ (ಇಂಗ್ಲೆಂಡ್‌ ಮತ್ತು ಐರ್ಲೆಂಡ್‌)

ವಿವಿಧ ತಂಡಗಳಿಂದ ಇಂಗ್ಲೆಂಡ್‌ ತಂಡಕ್ಕೆ ಸೇರಿದ ಆಟಗಾರರ ಸಂಖ್ಯೆ ಹೆಚ್ಚಿದೆ. ಆದರೆ, ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಿ ಬಳಿಕ ಐರ್ಲೆಂಡ್‌ಗೆ ಹಿಂದಿರುಗಿದ ಏಕಮಾತ್ರ ಆಟಗಾರ ಎಡ್‌ ಜಾಯ್ಸ್‌. ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಇಂಗ್ಲೆಂಡ್‌ ಪರ ಉತ್ತಮ ಆಟವನ್ನೇ ಆಡಿದ್ದರು. ಆದರೆ, ತಮ್ಮ ತಾಯ್ನಾಡು ಐರ್ಲೆಂಡ್‌ ತಂಡವನ್ನು ಪ್ರತಿನಿಧಿಸುವ ಮಹದಾಸೆಯಿಂದ ಅವರು ಇಂಗ್ಲೆಂಡ್‌ ತಂಡವನ್ನು ತೊರೆದರು. 2007ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಪರ ಆಡಿದ್ದ ಜಾಯ್ಸ್‌, ಬಳಿಕ ಐಸಿಸಿ ನೀಡಿದ ವಿಶೇಷ ಅನುಮತಿ ಮೇರೆಗೆ 2011ರಲ್ಲಿ ಐರ್ಲೆಂಡ್‌ ತಂಡವನ್ನು ಪ್ರತಿನಿಧಿಸಿದರು. 2015ರ ವಿಶ್ವಕಪ್‌ನಲ್ಲೀ ಜಾಯ್ಸ್‌ ಐರ್ಲೆಂಡ್‌ ಪರ ಸೇವೆ ಸಲ್ಲಿಸಿದ್ದರು.

Story first published: Thursday, May 30, 2019, 16:55 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X