ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?

World Cup hopes still strong: Morgan post Australia loss

ಲಂಡನ್‌, ಜೂನ್‌ 26: ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ 64 ರನ್‌ಗಳ ಹೀನಾಯ ಸೋಲನುಭವಿಸಿದ ಆತಿಥೇಯ ಇಂಗ್ಲೆಂಡ್‌ ತಂಡ, ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಹಂತಕ್ಕೇರಬೇಕಾದರೆ ತನ್ನ ಪಾಲಿನ ಉಳಿದ ಮೂರು ಲೀಗ್‌ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದ ಸ್ಥಿತಿಗೆ ತಲುಪಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಪ್ರಕಾರ ಆತಿಥೇಯ ತಂಡ ಯಾವುದೇ ಒತ್ತಡವಿಲ್ಲದೆ ಈಗಲೂ ಕೂಡ ಸೆಮಿಫೈನಲ್ಸ್‌ ಹಂತಕ್ಕೇರುವ ಉತ್ತಮ ಅವಕಾಶವನ್ನು ಹೊಂದಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಆದರೂ, ಮಂಗಳವಾರ ನಡೆದ ಬಹುನಿರೀಕ್ಷಿತ ಆಸೀಸ್‌ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ 64 ರನ್‌ಗಳ ಸೋಲನುಭವಿಸಿತು. ಶ್ರೀಲಂಕಾ ವಿರುದ್ಧ ಆಘಾತ ಅನುಭವಿಸಿದ ಬಳಿಕ ಇಂಗ್ಲೆಂಡ್‌ ಸತತ ಎರಡನೇ ಸೋಲುಂಡಿದೆ.

ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!

ಆಸೀಸ್‌ ವಿರುದ್ಧದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್‌ ನಾಯಕ ಮಾರ್ಗನ್‌, ಆಸ್ಟ್ರೇಲಿಯಾ ಎದುರು 286 ರನ್‌ಗಳ ಗುರಿ ಬೆನ್ನತ್ತಲು ಸಾಧ್ಯವಾಗದೇ ಹೋಗಿರುವುದು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

"ಇದರಿಂದ ನಮ್ಮ ತಂಡದ ಆತ್ಮವಿಶ್ವಾಸ ಕೊಂಚ ತಗ್ಗಿದೆ. ಆದರೂ ಇದರಿಂದ ತಂಡದ ಯಾವ ಆಟಗಾರನೂ ಅಚ್ಚರಿಗೆ ಒಳಗಾಗಿಲ್ಲ. ಸಾಮಾನ್ಯವಾಗಿ ಪಂದ್ಯ ಸೋತ ಬಳಿಕ ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವ ಕಡೆಗೆ ಆಲೋಚಿಸುತ್ತೇವೆ. ಭಾನುವಾರದ ಪಂದ್ಯವನ್ನು ಗೆಲ್ಲುವುದರ ಕಡೆಗೆ ಎದುರು ನೋಡುತ್ತಿದ್ದೇವೆ,'' ಎಂದು ಮಾರ್ಗನ್‌ ಹೇಳಿದ್ದಾರೆ. ಇಂಗ್ಲೆಂಡ್‌ ತನ್ನ ಮುಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಪೈಪೋಟಿ ನಡೆಸಲಿದೆ.

ವಿಶ್ವಕಪ್‌ 2019: ಪಂದ್ಯ ಸೋತರೂ, ಹೃದಯ ಗೆದ್ದ ಅಫಘಾನಿಸ್ತಾನವಿಶ್ವಕಪ್‌ 2019: ಪಂದ್ಯ ಸೋತರೂ, ಹೃದಯ ಗೆದ್ದ ಅಫಘಾನಿಸ್ತಾನ

ಇನ್ನು ವಿಶ್ವಕಪ್‌ನಲ್ಲಿ ತಂಡದ ಭವಿಷ್ಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾರ್ಗನ್‌, "ಆಟಗಾರ ಆತ್ಮಸ್ಥೈರ್ಯ ಅದ್ಭುತವಾಗಿದೆ. ಈಗಲೂ ಅವಕಾಶ ನಮ್ಮ ಕೈಲಿದೆ. ಎಲ್ಲವೂ ನಮ್ಮ ನಿಯಂತ್ರಣದಲ್ಲೇ ಇದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ ಮುಂದಿನ ಪಂದ್ಯಗಳನ್ನು ಗೆಲ್ಲಬೇಕಿದೆ,'' ಎಂದು ಹೇಳಿದ್ದಾರೆ.

Story first published: Wednesday, June 26, 2019, 17:03 [IST]
Other articles published on Jun 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X