ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಇತಿಹಾಸ ನಿರ್ಮಿಸಲಿದ್ದಾರೆ ದ.ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್!

ICC World Cup 2019 : ವಿಶ್ವಕಪ್ ನಲ್ಲಿ ತಾಹಿರ್ ಫುಲ್ ಮಿಂಚಿಂಗ್..! ಇದಕ್ಕೆ ಕಾರಣ IPL..? | Oneindia Kannada
World Cup: Imran Tahir two wickets away from scripting WC history

ಬರ್ಮಿಂಗ್‌ಹ್ಯಾಮ್, ಜೂನ್ 18: ಇಮ್ರಾನ್ ತಾಹಿರ್ ಅಂದ ಕೂಡಲೇ ವಿಕೆಟ್ ಸಿಕ್ಕಾಗ ಮೈದಾನದ ಆ ತುದಿಯಿಂದ ಈ ತುದಿವರೆಗೆ ಓಡಾಡಿ ಸಂಭ್ರಮಿಸುವ ಮುಖ ನೆನಪಾಗಿ ಮೊಗದಲ್ಲೊಂದು ನಗು ಮಿನುಗುತ್ತಲ್ಲಾ? ಅದೇ ಸ್ಪಿನ್ನರ್ ತಾಹಿರ್ ಈ ಬಾರಿಯ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸುವುದರಲ್ಲಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ತಾಹಿರ್‌ಗೆ ಇನ್ನೆರಡೇ ವಿಕೆಟ್ ಲಭಿಸಿದರೂ ಸಾಕು ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಲಿದೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಜೂನ್ 19ರಂದು ನಡೆಯಲಿರುವ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ದಾಖಲೆ ನಿರ್ಮಿಸಲು ತಾಹಿರ್‌ಗೆ ಅವಕಾಶವಿದೆ.

ವಿಶ್ವಕಪ್ ನಲ್ಲಿ ತ್ವರಿತಗತಿ 100, 4ನೇ ಸ್ಥಾನಕ್ಕೇರಿದ ಇಯಾನ್ ಮಾರ್ಗನ್ವಿಶ್ವಕಪ್ ನಲ್ಲಿ ತ್ವರಿತಗತಿ 100, 4ನೇ ಸ್ಥಾನಕ್ಕೇರಿದ ಇಯಾನ್ ಮಾರ್ಗನ್

ಬುಧವಾರ ನ್ಯೂಜಿಲೆಂಡ್ ವಿರುದ್ಧ ಎರಡು ವಿಕೆಟ್ ಲಭಿಸಿದೆ, ದಕ್ಷಿಣ ಆಫ್ರಿಕಾ ಪರ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ದಾಖಲೆಗೆ 40ರ ಹರೆಯದ ತಾಹಿರ್ ಕಾರಣರಾಗಲಿದ್ದಾರೆ.

ಮುಂಚೂಣಿ ಬೌಲರ್

ಮುಂಚೂಣಿ ಬೌಲರ್

ಈ ಬಾರಿಯ ವಿಶ್ವಕಪ್‌ನ ಒಟ್ಟು 5 ಪಂದ್ಯಗಳಲ್ಲಿ ತಾಹಿರ್ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಈ ವಿಶ್ವಕಪ್‌ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್ ಸರದಾರರಲ್ಲಿ ತಾಹಿರ್ ಮುಂಚೂಣಿಯಲ್ಲಿದ್ದಾರೆ. ಈವರೆಗೆ ತಾಹಿರ್ ವಿಶ್ವಕಪ್‌ನಲ್ಲಿ 37 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಫೇಮಸ್

ಐಪಿಎಲ್‌ನಲ್ಲಿ ಫೇಮಸ್

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ) ತಂಡ ಪ್ರತಿನಿಧಿಸಿದ್ದ ಇಮ್ರಾನ್ ತಾಹೀರ್ ವಿಕೆಟ್ ಲಭಿಸಿದಾಗ ಮೈದಾನದ ಆ ತುದಿಯಿಂದ ಈ ತುದಿಗೆ ಓಡಾಡಿ ಕ್ರಿಕೆಟ್ ಪ್ರೇಮಿಗಳಲ್ಲಿ ನಗು ತರಿಸಿದ್ದರು. ಆದರೆ ಈ ನಗುವಿನ ಹಿಂದೆ ಗೇಲಿಯಿರಲಿಲ್ಲ, ಬದಲಿಗೆ; ವಿಚಿತ್ರ ಸಂಭ್ರಮಾಚರಣೆಯನ್ನು ಪ್ರಿಕೆಟ್ ಪ್ರಿಯರು ನಕ್ಕು ಪ್ರತಿಕ್ರಿಯಿಸಿದ್ದರಷ್ಟೆ. ಐಪಿಎಲ್‌ನಲ್ಲೂ ಒಟ್ಟು 26 ವಿಕೆಟ್‌ಗಳೊಂದಿಗೆ ಅತ್ಯಧಿಕ ವಿಕೆಟ್ ಸಾಧಕರಲ್ಲಿ ತಾಹಿರ್ ಅಗ್ರ ಸ್ಥಾನ ಆವರಿಸಿಕೊಂಡಿದ್ದರು.

ಡೊನಾಲ್ಡ್ ಹೆಸರಲ್ಲಿ ದಾಖಲೆ

ಡೊನಾಲ್ಡ್ ಹೆಸರಲ್ಲಿ ದಾಖಲೆ

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್ ದಾಖಲೆ ಸದ್ಯ ಆಫ್ರಿಕಾ ವೇಗಿ ಅಲನ್ ಡೊನಾಲ್ಡ್ ಹೆಸರಲ್ಲಿದೆ. ಡೊನಾಲ್ಡ್ ಒಟ್ಟು 25 ಇನ್ನಿಂಗ್ಸ್‌ಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ತಾಹಿರ್ ಕೇವಲ 17 ಇನ್ನಿಂಗ್ಸ್‌ಗಳಲ್ಲಿ 37 ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ ಶಾನ್ ಪೊಲಾಕ್ (31 ಇನ್ನಿಂಗ್ಸ್, 31 ವಿಕೆಟ್), ಮಾರ್ನೆ ಮಾರ್ಕೆಲ್ (14 ಇನ್ನಿಂಗ್ಸ್, 26 ವಿಕೆಟ್‌), ಡೇಲ್ ಸ್ಟೇನ್ (14 ಇನ್ನಿಂಗ್ಸ್, 23 ವಿಕೆಟ್) ಇದ್ದಾರೆ.

8ನೇ ಸ್ಥಾನದಲ್ಲಿ ಪ್ರೋಟಿಯಾಸ್

8ನೇ ಸ್ಥಾನದಲ್ಲಿ ಪ್ರೋಟಿಯಾಸ್

ಈ ಬಾರಿಯ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ನಿರೀಕ್ಷೆಯ ಪ್ರದರ್ಶನ ನೀಡಿಲ್ಲ. ಒಂದಿಷ್ಟು ಪ್ರಮುಖ ಆಟಗಾರರು ಗಾಯಾಳಾಗಿ ತಂಡದಿಂದ ಹೊರ ಬಿದ್ದಿದ್ದೂ ಇದಕ್ಕೆ ಕಾರಣ. ಸದ್ಯ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಸವಾಲು ಸ್ವೀಕರಿಸಲಿದೆ. ಆಫ್ರಿಕಾ ಆಡಿರುವ ಐದು ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಇನ್ನೊಂದು ಪಂದ್ಯ ಫಲಿತಾಂಶವಿಲ್ಲದಾಗಿ ಘೋಷಿಸಲ್ಪಟ್ಟಿತ್ತು.

Story first published: Tuesday, June 18, 2019, 19:37 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X