ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಲಿದೆ ಭಾರತ vs ಬಾಂಗ್ಲಾದೇಶ ಪಂದ್ಯ!

World Cup: interesting nuggets about India vs Bangladesh match

ಬರ್ಮಿಂಗ್‌ಹ್ಯಾಮ್, ಜುಲೈ 2: ತೀವ್ರ ಕುತೂಹಲ ಮೂಡಿಸಿರುವ ಬಾಂಗ್ಲಾದೇಶ vs ಭಾರತ ವಿಶ್ವಕಪ್ ಪಂದ್ಯದಲ್ಲಿ ಬ್ಯಾಟ್ ಬೀಸಿದರೂ, ಬಾಲ್ ಎಸೆದರೂ ದಾಖಲೆಗಳ ಸುರಿಮಳೆ ಬೀಳಲಿದೆ. ವಿಶ್ವಕಪ್ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಲು ಎರಡೂ ತಂಡಗಳ ಆಟಗಾರರಿಗೆ ಈ ಹಣಾಹಣಿಯಲ್ಲಿ ಅವಕಾಶವಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2019ರ 40ನೇ ಪಂದ್ಯದಲ್ಲಿ ಯಾರು ಯಾರಿಗೆ? ಎಲ್ಲೆಲ್ಲಿ ದಾಖಲೆ ಬರೆಯಲು ಅವಕಾಶವಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಮಾಹಿತಿಗಳಿಗೆ. ಇತ್ತಂಡಗಳ ಈ ಕದನ ಎಂದಿನಂತೆ 3 pmಗೆ ಆರಂಭಗೊಳ್ಳಲಿದೆ.

ಭಾರತ vs ಬಾಂಗ್ಲಾದೇಶ, ಜುಲೈ 2, Live ಸ್ಕೋರ್‌ಕಾರ್ಡ್

1
43683

ಜುಲೈ 2ರ ಭಾರತ vs ಬಾಂಗ್ಲಾ ಪಂದ್ಯದಲ್ಲಿ ದಾಖಲೆಗಳನ್ನು ಬರೆಯಲು ಇರುವ ಅವಕಾಶಗಳು ಹೀಗಿವೆ

1. ಮಹಮದುಲ್ಲಾ ಅವರು ಏಕದಿನ ವೃತ್ತಿಜೀವನದಲ್ಲಿ 4000 ರನ್ ಪೂರ್ಣಗೊಳಿಸಲು 53 ರನ್ ಅಗತ್ಯವಿದೆ. ತಮೀಮ್ ಇಕ್ಬಾಲ್ (6841) ಮತ್ತು ಶಕೀಬ್-ಅಲ್-ಹಸನ್ (6193) ಮತ್ತು ಮುಶ್ಫಿಕರ್ ರಹೀಮ್ (5885) ನಂತರ ಈ ಮೈಲಿಗಲ್ಲು ಸ್ಥಾಪಿಸಿದ 4ನೇ ಬಾಂಗ್ಲಾ ಬ್ಯಾಟ್ಸ್‌ಮನ್‌ ಆಗಿ ಮೊಹಮದುಲ್ಲ ಗುರುತಿಸಿಕೊಳ್ಳಲಿದ್ದಾರೆ.

2. ಮುಶ್ಫಿಕರ್ ರಹೀಂ ಅವರು ಏಕದಿನ ವೃತ್ತಿಜೀವನದಲ್ಲಿ 6000 ರನ್ ಪೂರ್ಣಗೊಳಿಸಲು 115 ರನ್ ಗಳಿಸಬೇಕಾಗಿದೆ. ತಮೀಮ್ ಇಕ್ಬಾಲ್ (6841) ಮತ್ತು ಶಕೀಬ್-ಅಲ್-ಹಸನ್ (6193) ನಂತರ ಈ ಮೈಲಿಗಲ್ಲು ಪೂರ್ಣಗೊಳಿಸಿದ 3ನೇ ಬ್ಯಾಟ್ಸ್‌ಮನ್‌ ಮುಶ್ಫಿಕರ್ ದಾಖಲೆ ಪುಟ ಸೇರಲಿದ್ದಾರೆ.
3. ವಿಶ್ವಕಪ್‌ನಲ್ಲಿ ಬಾಂಗ್ಲಾ ಪರ ಅತ್ಯಧಿಕ ಸಿಕ್ಸರ್‌ಗಾಗಿ ಮಹಮದುಲ್ಲಾ (11) ಅವರನ್ನು ಮೀರಿಸಲು ಮುಷ್ಫಿಕರ್ ರಹೀಂ (10)ಗೆ ಇನ್ನೂ 2 ಸಿಕ್ಸರ್‌ಗಳು ಬೇಕಾಗಿವೆ.
4. 2019ರಲ್ಲಿ 1000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಲು ವಿರಾಟ್ ಕೊಹ್ಲಿಗೆ 7 ರನ್‌ಗಳ ಅಗತ್ಯವಿದೆ.
5. 2019 ರಲ್ಲಿ 1000 ಏಕದಿನ ರನ್‌ಗಳನ್ನು ಪೂರೈಸಲು ರೋಹಿತ್ ಶರ್ಮಾ ಅವರಿಗೆ 4 ರನ್‌ಗಳು ಬೇಕಾಗಿವೆ. ವಿಶ್ವಕಪ್‌ನಲ್ಲಿ 1000 ರನ್ ಪೂರ್ಣಗೊಳಿಸಲು ವಿರಾಟ್ ಕೊಹ್ಲಿಗೆ 31 ರನ್ ಬೇಕು.
6. ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನದಲ್ಲಿ 50 ಏಕದಿನ ವಿಕೆಟ್ ಪೂರ್ಣಗೊಳಿಸಲು 1 ವಿಕೆಟ್ ಅಗತ್ಯವಿದೆ.
7. ಹಾರ್ದಿಕ್ ಪಾಂಡ್ಯ ಏಕದಿನ ವೃತ್ತಿಜೀವನದಲ್ಲಿ 1000 ರನ್ ಪೂರ್ಣಗೊಳಿಸಲು 82 ರನ್ ಅಗತ್ಯವಿದೆ.
8. ತಮೀಮ್ ಇಕ್ಬಾಲ್ ಅವರು ಜುಲೈ 2, 2019 ರಂದು ಭಾರತ ವಿರುದ್ಧ ಪಂದ್ಯವನ್ನಾಡಿದರೆ ತಮ್ಮ 200ನೇ ಏಕದಿನ ಪಂದ್ಯವನ್ನು ಆಡಿದಂತಾಗುತ್ತದೆ. ಮಶ್ರಫ್ ಮುರ್ತಾಜಾ, ಮುಶ್ಫಿಕರ್ ರಹೀಮ್ ಮತ್ತು ಶಕೀಬ್-ಅಲ್-ಹಸನ್ ನಂತರ ಬಾಂಗ್ಲಾದೇಶ ಪರ 200 ಏಕದಿನ ಪಂದ್ಯಗಳನ್ನು ಆಡಿದ 4ನೇ ಬಾಂಗ್ಲಾದೇಶ ಆಟಗಾರನಾಗಿ ಇಕ್ಬಾಲ್ ಗುರುತಿಸಿಕೊಳ್ಳಲಿದ್ದಾರೆ.

{headtohead_cricket_10_3}

Story first published: Tuesday, July 2, 2019, 15:45 [IST]
Other articles published on Jul 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X