ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ 2019: ಭಾರತ ತಂಡದ ಶಕ್ತಿಯ ಗುಟ್ಟು ಬಿಚ್ಚಿಟ್ಟ ರಾಹುಲ್ ದ್ರಾವಿಡ್

world cup: Presence of wicket-takers in middle overs will benefit India: Dravid

ಮುಂಬೈ, ಮೇ 18: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್, ಹೈ ಸ್ಕೋರಿಂಗ್ ವಿಶ್ವಕಪ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಿದ್ದೂ ಟೀಮ್ ಇಂಡಿಯಾವು ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಇರುವ ಅವಕಾಶವನ್ನು ಭಾರತದ ಬ್ಯಾಟಿಂಗ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ವಿಶ್ವಕಪ್: ಅದ್ದೂರಿ ಕ್ರಿಕೆಟ್ ಹಬ್ಬಕ್ಕೆ ಐಸಿಸಿಯಿಂದ ಅಧಿಕೃತ ಗೀತೆ ಬಿಡುಗಡೆವಿಶ್ವಕಪ್: ಅದ್ದೂರಿ ಕ್ರಿಕೆಟ್ ಹಬ್ಬಕ್ಕೆ ಐಸಿಸಿಯಿಂದ ಅಧಿಕೃತ ಗೀತೆ ಬಿಡುಗಡೆ

ಬ್ಯಾಟಿಂಗ್ ಪಿಚ್‌ನಲ್ಲಿ ಪಂದ್ಯವಿರುವಾಗ ಎದುರಾಳಿ ಬ್ಯಾಟ್ಸ್ಮನ್‌ಗಳನ್ನು ಕಟ್ಟಿ ಹಾಕಲು ನಮ್ಮ ಬೌಲಿಂಗ್ ವಿಭಾಗ ಸಮರ್ಥವಿರಬೇಕು. ಆದ್ದರಿಂದ ಬಲಿಷ್ಠ ಬೌಲಿಂಗ್ ವಿಭಾಗ ಈ ಸಾರಿಯ ವಿಶ್ವಕಪ್‌ನಲ್ಲಿ ತಂಡದ ನೆರವಿಗೆ ಬರಲಿದೆ ಎಂದು 'ಗ್ರೇಟ್ ವಾಲ್ ಆಫ್ ಇಂಡಿಯಾ' ಅಭಿಪ್ರಾಯಿಸಿದ್ದಾರೆ.

'ಕಳೆದ ವರ್ಷ 'ಎ' ತಂಡದ ಪ್ರವಾಸದ ವೇಳೆ ಇಂಗ್ಲೆಂಡ್ ಪರಿಸ್ಥಿತಿಯನ್ನು ನಾನು ಗಮನಿಸಿದಂತೆ, ಈ ಬಾರಿಯದ್ದು ಹೈ ಸ್ಕೋರಿಂಗ್ ವಿಶ್ವಕಪ್ ಅನ್ನಿಸಲಿದೆ. ಹಾಗಾಗಿ ಪಂದ್ಯದ ಮಧ್ಯ ಭಾಗದಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್‌ಗಳು ನಮ್ಮ ಪಾಲಿಗೆ ಪ್ರಮುಖರಾಗಿ ಕಾಣಿಸುತ್ತಾರೆ' ಎಂದು ದ್ರಾವಿಡ್ ನುಡಿದರು.

ಕುಂಬ್ಳೆ ಪ್ರಕಾರ ವಿಶ್ವಕಪ್‌ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆಕುಂಬ್ಳೆ ಪ್ರಕಾರ ವಿಶ್ವಕಪ್‌ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆ

ಮಾತು ಮುಂದುವರೆಸಿದ ಮಾಜಿ ನಾಯಕ, 'ಎದುರಾಳಿ ತಂಡ ರನ್ ಕದಿಯುವಿಕೆಗೆ ಕಡಿವಾಣ ಹಾಕಬಲ್ಲ ಬೌಲರ್‌ಗಳಿರುವುದರಿಂದ ಈ ವಿಚಾರದಲ್ಲಿ ಭಾರತ ತಂಡ ಅದೃಷ್ಠಶಾಲಿ. ವಿಕೆಟ್ ಪಡೆಯಬಲ್ಲ ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಅವರಂತ ಬೌಲರ್‌ಗಳನ್ನು ನಾವು ಹೊಂದಿದ್ದೇವೆ' ಎಂದು ವಿವರಿಸಿದರು.

Story first published: Saturday, May 18, 2019, 12:21 [IST]
Other articles published on May 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X