ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

World Cup recap: Top five wicket-takers in World Cup history

ಬೆಂಗಳೂರು, ಮೇ 21: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪ್ರಿಯರಿಗೆ ಹಬ್ಬವೇ ಸರಿ. ಜಗತ್ತಿನ ಕ್ರಿಕೆಟ್‌ ದೈತ್ಯ ತಂಡಗಳ ನಡುವಣ ಹೋರಾಟವನ್ನು ವೀಕ್ಷಿಸಲು ಸಿಗುವ ಅದ್ಭುತ ವೇದಿಕೆ. ತಮ್ಮ ನೆಚ್ಚಿನ ಆಟಗಾರರು ಎಲ್ಲವನ್ನೂ ಪಣಕ್ಕಿಟ್ಟು ಹೋರಾಡುವುದನ್ನು ನೋಡುವುದೆಂದರೆ ಪ್ರೇಕ್ಷಕರಿಗೆ ಇನ್ನಿಲ್ಲದ ಸಂತಸ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ 12ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಮೇ 30 ರಂದು ತೆರೆ ಕಾಣಲಿರುವ ಕ್ರಿಕೆಟ್‌ ವಿಶ್ವ ಸಮರ ಈ ಬಾರಿ ಕ್ರಿಕೆಟ್‌ ಪ್ರಿಯರಿಗೆ ರಸದೌತಣ ಬಡಿಸಲು ಸಜ್ಜಾಗಿದೆ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು! World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಅಂದಹಾಗೆ ಆಧುನಿಕ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳದ್ದೇ ಅಬ್ಬರ. ಈಗಂತೂ ಒಡಿಐನಲ್ಲಿ 300 ರನ್‌ಗಳನ್ನು ಗಳಿಸುವುದು ಸಾಮಾನ್ಯವಾಗಿಬಿಟ್ಟಿದೆ. 400 ರನ್‌ಗಳನ್ನು ಗಳಿಸಿದರೂ ಗುರಿ ಬೆನ್ನತ್ತುವ ತಂಡಗಳು ಜಯ ದಾಖಲಿಸಿರುವ ಉದಾಹರಣಿಗಳಿವೆ. ಹೀಗಿದ್ದರೂ ವಿಶ್ವಕಪ್‌ ಅಂಗಣದಲ್ಲಿ ತಮ್ಮ ಪ್ರಭಾವಿ ಬೌಲಿಂಗ್‌ ಮೂಲಕ ವಿಕೆಟ್‌ಗಳನ್ನು ಉರುಳಿಸಿ ಮ್ಯಾಚ್‌ ವಿನ್ನರ್‌ಗಳೆನಿಸಿರುವ ಬೌಲರ್‌ಗಳಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಅಗ್ರ ಐವರು ಬೌಲರ್‌ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗ್ಲೆನ್ ಮೆಗ್ರಾತ್‌, (4 ವಿಶ್ವಕಪ್‌, 39 ಪಂದ್ಯ, 71 ವಿಕೆಟ್‌)

ಗ್ಲೆನ್ ಮೆಗ್ರಾತ್‌, (4 ವಿಶ್ವಕಪ್‌, 39 ಪಂದ್ಯ, 71 ವಿಕೆಟ್‌)

ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪೈಕಿ ಆಸ್ಟ್ರೇಲಿಯಾದ ವೇಗದ ಬೌಲಿಂಗ್‌ನ ದಂತಕತೆ ಗ್ಲೆನ್‌ ಮೆಗ್ರಾತ್‌ ಅಗ್ರಸ್ಥಾನದಲ್ಲಿದ್ದಾರೆ. ಆಡಿರುವ ನಾಲ್ಕು ವಿಶ್ವಕಪ್‌ಗಳಲ್ಲಿ 39 ಪಂದ್ಯಗಳಲ್ಲಿ 71 ವಿಕೆಟ್‌ಗಳನ್ನು ಉರುಳಿಸಿರುವ ಮೆಗ್ರಾತ್‌, 2 ಬಾರಿ 5 ವಿಕೆಟ್‌ ಪಡೆದ ಮತ್ತು 9 ಬಾರಿ 3 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾರೆ. 1996ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಮೆಗ್ರಾತ್‌, 7 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆಯಲು ಮಾತ್ರ ಶಕ್ತರಾದರು. 1999ರಲ್ಲಿ 18 ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯಾಗೆ 2 ಬಾರಿ ಚಾಂಪಿಯನ್‌ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ 2003ರ ವಿಶ್ವಕಪ್‌ನಲ್ಲೂ 21 ವಿಕೆಟ್‌ ಪಡೆದು ಮಿಂಚಿದ್ದರು. ಬಳಿಕ 2007ರ ವಿಶ್ವಕಪ್‌ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿ ವಿಶ್ವಕಪ್‌ನ ಆವೃತ್ತಿ ವೊಂದರಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು (26) ಪಡೆದ ವಿಶ್ವ ದಾಖಲೆ ಬರೆದರು. 1999-2007ರ ವರೆಗೆ ಆಸ್ಟ್ರೇಲಿಯಾ ತಂಡದ ಹ್ಯಾಟ್ರಕ್‌ ವಿಶ್ವಕಪ್‌ ಸಾಧನೆಯಲ್ಲಿ ಮೆಗ್ರಾತ್‌ ಪಾತ್ರ ಅಪಾರವಾದದ್ದು.

ಮುತ್ತಯ್ಯ ಮುರಳೀಧರನ್‌ (5 ವಿಶ್ವಕಪ್‌, 40 ಪಂದ್ಯ, 68 ವಿಕೆಟ್‌)

ಮುತ್ತಯ್ಯ ಮುರಳೀಧರನ್‌ (5 ವಿಶ್ವಕಪ್‌, 40 ಪಂದ್ಯ, 68 ವಿಕೆಟ್‌)

ಶ್ರೀಲಂಕಾದ ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸ್ಪಿನ್‌ಬೌಲರ್‌ ಮತ್ತು ಹೆಚ್ಚು ವಿಕೆಟ್‌ ಪಡೆದವರ ಪೈಕಿ ಎರಡನೇ ಬೌಲರ್‌. ಮುರಳಿ ಒಟ್ಟು 5 ವಿಶ್ವಕಪ್‌ ಟೂರ್ನಿಗಳನ್ನು ಆಡಿದ್ದು, 11 ಬಾರಿ 3ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದು ಒಟ್ಟಾರೆ 68 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 1996ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಮುರಳಿ ಪಡೆದದ್ದು 6 ವಿಕೆಟ್‌ಗಳನ್ನು ಮಾತ್ರ, 2011ರಲ್ಲಿ ತಮ್ಮ ಕೊನೆಯ ವಿಶ್ವಕಪ್‌ನಲ್ಲಿ 15 ವಿಕೆಟ್‌ಗಳನ್ನು ಉರುಳಿಸಿದ್ದರು. 2007ರಲ್ಲಿ 23 ವಿಕೆಟ್‌ಗಳನ್ನು ಉರುಳಿಸಿದ್ದು ಅವರ ಶ್ರೇಷ್ಠ ಪ್ರದರ್ಶನವಾಗಿದೆ.

ವಾಸಿಮ್‌ ಅಕ್ರಮ್‌ (5 ವಿಶ್ವಕಪ್‌, 38 ಪಂದ್ಯ, 55 ವಿಕೆಟ್‌)

ವಾಸಿಮ್‌ ಅಕ್ರಮ್‌ (5 ವಿಶ್ವಕಪ್‌, 38 ಪಂದ್ಯ, 55 ವಿಕೆಟ್‌)

ವಿಶ್ವಕಂಡ ಸಾರ್ವಕಾಲಿಕ ಶ್ರೇಷ್ಠ ಎಡಗೈ ವೇಗಿ ವಾಸಿಮ್‌ ಅಕ್ರಮ್‌. ಅಕ್ರಮ್‌, ಪಾಕಿಸ್ತಾನ ತಂಡವನ್ನು 5 ವಿಶ್ವಕಪ್‌ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. 2003ರ ವಿಶ್ವಕಪ್‌ ಟೂರ್ನಿ ವೇಳೆ ಒಡಿಐ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್‌ ಎಂಬ ಹಿರಿಮೆಗೆ ಅಕ್ರಮ್‌ ಪಾತ್ರರಾಗಿದ್ದರು. ಇನ್ನು ವಿಶ್ವಕಪ್‌ಗಳಲ್ಲಿ ಆಡಿರುವ ಒಟ್ಟು 38 ಪಂದ್ಯಗಳಲ್ಲಿ ಅಕ್ರಮ್‌ 55 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 1987ರಲ್ಲಿ ಮೊದಲ ವಿಶ್ವಕಪ್‌ ಆಡಿದ ಅಕ್ರಮ್‌, 2003ರಲ್ಲಿ ವಿಶ್ವಕಪ್‌ ಅಭಿಯಾನ ಅಂತ್ಯಗೊಳಿಸಿದರು. ಅದರಲ್ಲೂ 1992ರ ವಿಶ್ವಕಪ್‌ನಲ್ಲಿ 18 ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1999ರಲ್ಲೂ 15 ವಿಕೆಟ್‌ಗಳನ್ನು ಪಡೆದ ಅವರು ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು.

ಚಮಿಂಡಾ ವಾಸ್‌ (4 ವಿಶ್ವಕಪ್‌, 31 ಪಂದ್ಯ, 49 ವಿಕೆಟ್‌ಗಳು)

ಚಮಿಂಡಾ ವಾಸ್‌ (4 ವಿಶ್ವಕಪ್‌, 31 ಪಂದ್ಯ, 49 ವಿಕೆಟ್‌ಗಳು)

ಮತ್ತೊಬ್ಬ ವಿಶ್ವಶ್ರೇಷ್ಠ ಎಡಗೈ ವೇಗದ ಬೌಲರ್‌ ಶ್ರೀಲಂಕಾದ ಚಮಿಂಡಾ ವಾಸ್‌, ದ್ವೀಪ ರಾಷ್ಟ್ರದ ಪರ 1996-2007ರವರೆಗೆ 4 ವಿಶ್ವಕಪ್‌ ಟೂರ್ನಿಗಳನ್ನು ಆಡಿದ್ದಾರೆ. ತಮ್ಮ ಸ್ವಿಂಗ್‌ ಬೌಲಿಂಗ್‌ ಮೂಲಕ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸುತ್ತಿದ್ದ ವಾಸ್‌, ಆಡಿದ ಒಟ್ಟು 31 ವಿಶ್ವಕಪ್‌ ಪಂದ್ಯದಗಳಲ್ಲಿ 49 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. 2003ರಲ್ಲಿ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ 23 ವಿಕೆಟ್‌ಗಳನ್ನು ಉರುಳಿಸಿದ್ದು ವಾಸ್‌ ಅವರ ಶ್ರೇಷ್ಠ ಸಾಧನೆ.

ಜಹೀರ್‌ ಖಾನ್‌ (ವಿಶ್ವಕಪ್‌ 3, ಪಂದ್ಯ 23, ವಿಕೆಟ್‌ 44)

ಜಹೀರ್‌ ಖಾನ್‌ (ವಿಶ್ವಕಪ್‌ 3, ಪಂದ್ಯ 23, ವಿಕೆಟ್‌ 44)

ವಿಶ್ವಕಪ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ ಜಹೀರ್‌ ಖಾನ್‌. ಆದರೂ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪೈಕಿ ಭಾರತದವರೇ ಆದ ಅನುಭವಿ ವೇಗಿ ಕರ್ನಾಟಕದ ಜಾವಗಲ್‌ ಶ್ರೀನಾಥ್‌ ಅವರೊಟ್ಟಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಜಹೀರ್‌ ಆಡಿದ 3 ವಿಶ್ವಕಪ್‌ಗಳಲ್ಲಿ 23 ಪಂದ್ಯಗಳಿಂದ 44 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರೆ, ಶ್ರೀನಾತ್‌ 4 ವಿಶ್ವಕಪ್‌ಗಳನ್ನಾಡಿ 34 ಪಂದ್ಯಗಳಿಂದ 44 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2011ರಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದ ಟೂರ್ನಿಯಲ್ಲಿ ಜಹೀರ್‌ 21 ವಿಕೆಟ್‌ಗಳನ್ನು ಪಡೆದು ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದರು.

Story first published: Tuesday, May 21, 2019, 14:19 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X