ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ಓಪನಿಂಗ್ ಪಾರ್ಟ್ನರ್ ರಾಹುಲ್ ಬಗ್ಗೆ ತುಟಿ ಬಿಚ್ಚಿದ ರೋಹಿತ್ ಶರ್ಮಾ

ICC World Cup 2019: ತಮ್ಮ ಹೊಸ ಓಪನಿಂಗ್ ಪಾರ್ಟ್ನರ್ ರಾಹುಲ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
World Cup: Rohit Sharma speaks about new role with KL Rahul as opening partner

ಲಂಡನ್, ಜೂನ್ 18: ಯಶಸ್ವಿ ಆರಂಭಿಕ ಆಟಗಾರರಾಗಿ ತನ್ನ ಮತ್ತು ಶಿಖರ್ ಧವನ್ ಮಧ್ಯೆ ಸಂವಹನ ಮಹತ್ವದ ಪಾತ್ರ ವಹಿಸಿತ್ತು. ವಿಶ್ವಕಪ್‌ನಲ್ಲಿನ ಹೊಸ ಓಪನಿಂಗ್ ಪಾರ್ಟ್ನರ್ ಕೆಎಲ್ ರಾಹುಲ್ ನಡುವೆಯೂ ಇದೇ ರೀತಿಯ ಸಂವಹನ, ಪರಸ್ಪರ ಆಟವನ್ನು ಅರ್ಥೈಸುವಿಕೆ ಗುಣ ನಿರ್ಮಾಣವಾಗಬೇಕೆಂದು ಬಯಸಿದ್ದೇನೆ ಎಂದು ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಎಡ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ಸದ್ಯ ಭಾರತ ತಂಡದಿಂದ ಹೊರಗಿದ್ದಾರೆ. ತೆರವಾಗಿರುವ ಆರಂಭಿಕ ಆಟಗಾರನ ಸ್ಥಾನಕ್ಕೆ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿದ್ದ ರಾಹುಲ್ ಅವರನ್ನು ತರಲಾಗಿದೆ. ಹೀಗಾಗಿ ವಿಶ್ವಕಪ್‌ನಂತ ದೊಡ್ಡ ಟೂರ್ನಿಯಲ್ಲಿ ಜಯಿಸಲು ಆರಂಭಿಕ ಆಟಗಾರರ ನಡುವೆ ಉತ್ತಮ ಸಂವಹನ ಬೇಕು. ಆ ವಿಶ್ವಾಸವೂ ಇದೆ ಎಂದು ಶರ್ಮಾ ತಿಳಿಸಿದ್ದಾರೆ.

ವಿಶ್ವಕಪ್: ಸಾನಿಯಾ ಮಿರ್ಝಾ, ವೀಣಾ ಮಲಿಕ್ ನಡುವೆ ಟ್ವೀಟ್ ಜಟಾಪಟಿ!ವಿಶ್ವಕಪ್: ಸಾನಿಯಾ ಮಿರ್ಝಾ, ವೀಣಾ ಮಲಿಕ್ ನಡುವೆ ಟ್ವೀಟ್ ಜಟಾಪಟಿ!

12ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟಿಂಗ್ ಬಗ್ಗೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮಾತುಗಳು ಇಲ್ಲಿವೆ

ಆಟದಲ್ಲಿ ಬಹಳ ಪ್ರಮುಖ ಅಂಶ

ಆಟದಲ್ಲಿ ಬಹಳ ಪ್ರಮುಖ ಅಂಶ

ಆರಂಭಿಕ ಜೊತೆಯಾಟದ ಬಗ್ಗೆ ಮಾತನಾಡುತ್ತ ರೋಹಿತ್, 'ಹೌದು, ರಾಹುಲ್ ಆರಂಭಿಕ ಆಟಗಾರರಾಗಿ ಹೊಂದಿಕೊಳ್ಳುತ್ತಿದ್ದಾರೆ. ಹೊಂದಿಕೊಳ್ಳಲು ಅವಕಾಶ ನೀಡಬೇಕು ಕೂಡ. ಯಾಕೆಂದರೆ ಆರಂಭಿಕರಾಗಿ ಹೊಂದಿಕೊಳ್ಳೋದು, ಮೊದಲ ಎಸೆತವನ್ನು ಸ್ವೀಕರಿಸಲು ತಯಾರಾಗೋದು ಆಟದಲ್ಲಿ ಪ್ರಮುಖವಾದುದು' ಎಂದು ಹೇಳಿದ್ದಾರೆ.

ರಾಹುಲ್-ರೋಹಿತ್ ಭರ್ಜರಿ ಜೊತೆಯಾಟ

ರಾಹುಲ್-ರೋಹಿತ್ ಭರ್ಜರಿ ಜೊತೆಯಾಟ

ಪಾಕಿಸ್ತಾನ vs ಭಾರತ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಕೆಎಲ್ ರಾಹುಲ್-ರೋಹಿತ್ ಶರ್ಮಾ ಜೋಡಿ ಉತ್ತಮ ಆರಂಭಿಕ ಜೊತೆಯಾಟ ನೀಡಿತ್ತು. ರಾಹುಲ್ 57, ಶರ್ಮಾ 140 ರನ್ ಬಾರಿಸಿದ್ದರು. ರಾಹುಲ್ ಅವರ ಮೊದಲ ವಿಕೆಟ್ ಪತನಗೊಳ್ಳುವಾಗ ಭಾರತದ ಖಾತೆಯಲ್ಲಿ 136 ರನ್‌ಗಳಿದ್ದವು. ಈ ಉತ್ತಮ ಆರಂಭ ತಂಡಕ್ಕೆ ಧೈರ್ಯ ತುಂಬಿ, ಗೆಲುವಿನ ನೆಲೆಯಲ್ಲಿ ತಂಡಕ್ಕೆ ನೆರವಾಗಿತ್ತು. ಭಾರತ ಈ ಕುತೂಹಲಕಾರಿ ಪಂದ್ಯವನ್ನು 89 ರನ್‌ಗಳಿಂದ (ಡಿಎಲ್‌ಎಂ) ಗೆದ್ದಿತ್ತು.

ನನಗೆ ಖುಷಿಯಿದೆ

ನನಗೆ ಖುಷಿಯಿದೆ

ಕೆಎಲ್ ರಾಹುಲ್ ಕೂಡ ಈ ಬಗ್ಗೆ ಮಾತನಾಡಿ, 'ಕಳೆದ 3-4 ವರ್ಷಗಳಿಂದಲೂ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಭಾರತದ ಅಪಯಾಕಾರಿ ಆರಂಭಕ ಆಟಗಾರರಾಗಿ ಗುರುತಿಸಿಕೊಂಡವರು. ಆ ಸ್ಥಾನಕ್ಕೆ ಅವರು ಪರಿಣಾಮಕಾರಿಯಾಗಿ ಹೊಂದಿಕೊಂಡಿದ್ದರು. ನನಗೆ ಆರಂಭಿಕ ಬ್ಯಾಟ್ಸ್ಮನ್ ಅವಕಾಶ ಲಭಿಸಿದೆ. ಈಗ ನಾನು ಇನ್ನಷ್ಟು ಬಲಗೊಳ್ಳಬೇಕಿದೆ. ನನಗಿದಕ್ಕೆ ಖುಷಿಯೂ ಇದೆ' ಎಂದಿದ್ದಾರೆ.

ಗೆದ್ದು ಮಿನುಗಲು ಸಹಕಾರಿ

ಗೆದ್ದು ಮಿನುಗಲು ಸಹಕಾರಿ

ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದು, ಯುವ ಬ್ಯಾಟ್ಸ್ಮನ್, ಕನ್ನಡಿಗ ರಾಹುಲ್ ಅವರನ್ನು ಸಜ್ಜುಗೊಳಿಸುವ, ಬೆಂಬಲಿಸುವ ಹೊಣೆಗಾರಿಕೆ ಶರ್ಮಾ ಮೇಲೆದೆ. ಆರಂಭಿಕ ಜೊತೆಯಾಟಗಾರರು ಗಟ್ಟಿಯಾಗಿಬಿಟ್ಟರೆ ವಿಶ್ವಕಪ್‌ನಂತ ಪ್ರತಿಷ್ಠಿತ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆದ್ದು ಮಿನುಗಲು ಸಹಕಾರಿಯಾಗಲಿದೆ. ಮುಂದಿನ ಸ್ಪರ್ಧೆಯಾಗಿ ಕೊಹ್ಲಿ ಬಳಗ ಜೂನ್ 22ರಂದು ಅಫ್ಘಾನಿಸ್ತಾನದ ಸವಾಲು ಸ್ವೀಕರಿಸಲಿದೆ.

Story first published: Tuesday, June 18, 2019, 13:41 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X