ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಭಾರತ ಬೆಂಬಲಿಸಲು ಪಾಕ್ ಅಭಿಮಾನಿಗಳಿಗೆ ಅಖ್ತರ್ ಕರೆ!

ICC World Cup 2019 : ಭಾರತವನ್ನು ಬೆಂಬಲಿಸುವಂತೆ ಕರೆಕೊಟ್ಟ ಪಾಕಿಸ್ತಾನ ಕ್ರಿಕೆಟಿಗ..! | IND vs ENG
World Cup: Shoaib Akhtar urges Pakistan fans to back India against England

ಬರ್ಮಿಂಗ್‌ಹ್ಯಾಮ್, ಜೂನ್ 30: ಭಾನುವಾರ (ಜೂನ್ 30) ನಡೆಯುವ ಭಾರತ vs ಇಂಗ್ಲೆಂಡ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೆಂಬಲಿಸುವಂತೆ ಪಾಕಿಸ್ತಾನ ಅಭಿಮಾನಿಗಳಿಗೆ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕರೆ ನೀಡಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸಲು ಅವಕಾಶವಿದೆ. ಸದ್ಯ 8 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ 9 ಅಂಕಗಳನ್ನು ಕಲೆಹಾಕಿದೆ. ಇನ್ನು ಪಾಕಿಸ್ತಾನಕ್ಕೆ ಬಾಂಗ್ಲಾ ವಿರುದ್ಧ ಕೊನೇ ಪಂದ್ಯವಿದ್ದು, ಅದರಲ್ಲೂ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲು ಸಾಧ್ಯತೆಯಿದೆ.

ಭಾರತ vs ಇಂಗ್ಲೆಂಡ್‌, ಜೂನ್ 30, Live ಸ್ಕೋರ್‌ಕಾರ್ಡ್

1
43681

'ಪಾಕಿಸ್ತಾನಿ ಆಗಿ ನಾನಿದನ್ನು ಹೇಳೋದು ಸರಿಯಲ್ಲ. ಆದರೂ ಹೇಳುತ್ತಿದ್ದೇನೆ. ಪಾಕಿಸ್ತಾನಿಗರೆ ಮತ್ತು ವಿದೇಶಗಳಲ್ಲಿರುವ ದೇಸಿಗರೆ ನಿಮಗೆ ಯಾವುದು ಸರಿ ಅನ್ನಿಸುತ್ತದೋ ಅದಕ್ಕೆ ಬಂಬಲಿಸಿ. ಆದರೆ ನೀವು ಯಾವ ದೇಶದ ನೀರು ಕುಡಿಯುತ್ತೀರೋ ಆ ದೇಶವನ್ನು ಬೆಂಬಲಿಸಿ' ಎಂದು ಅಖ್ತರ್ ಹೇಳಿದ್ದಾರೆ.

'ನೀವು ಇಂಗ್ಲೆಂಡ್‌ನಲ್ಲಿದ್ದರೆ ಇಂಗ್ಲೆಂಡ್ ಬೆಂಬಲಿಸಿ. ನೀವು ಇಂಗ್ಲೆಂಡ್ ಆಹಾರ ಸೇವಿಸುತ್ತೀರಾದರೆ ಆಂಗ್ಲರಿಗೆ ಬೆಂಬಲ ನೀಡಿ. ಹಾಗೇ ನೀವು ಪಾಕಿಸ್ತಾನದವರಾಗಿದ್ದರೆ ನಮಗೆ ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ವಾಲಿಫೈ ಆಗೋದು ಬೇಕಿದೆ. ನಾಕೌಟ್ ಹಂತದಲ್ಲಿ ಇಂಗ್ಲೆಂಡ್ ಹೊರ ಬಿದ್ದರೆ, ಬಾಂಗ್ಲಾ ವಿರುದ್ಧ ನಾವು ಗೆದ್ದರೆ ಪ್ರಶಸ್ತಿ ಸುತ್ತಿಗೇರಲು ನಮಗೆ ದಾರಿಯಿದೆ' ಎಂದು ಅಖ್ತರ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!

'ನಾವು ಇಡೀ ಪಾಕಿಸ್ತಾನದವರು ಭಾರತವನ್ನು ಬೆಂಬಲಿಸೋದನ್ನು ನಾನು ಬಯಸುತ್ತೇನೆ. ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ಸುದ್ದಿ ವಿಚಾರದಲ್ಲಿ ನಮಗೆ ಇಂಗ್ಲೆಂಡ್ ಟೂರ್ನಿಯಿಂದ ಹೊರ ಹೋಗೋದು ಕೇಳಬೇಕಿದೆ. ಯಾಕೆಂದರೆ ಇಂಗ್ಲೆಂಡ್ ಹೊರ ಬಿದ್ದರೆ, ಪಾಕಿಸ್ತಾನಕ್ಕೆ ಅವಕಾಶವಿದೆ' ಎಂದು ಶೊಯೇಬ್ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ.

Story first published: Sunday, June 30, 2019, 15:14 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X