ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!

ICC World Cup 2019:ಸಚಿನ್ ತೆಂಡೂಲ್ಕರ್ ಹಾಗು ಬ್ರಿಯಾನ್ ಲಾರಾ ದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ
World Cup: Virat Kohli on verge of breaking Tendulkar, Lara’s World Record

ಸೌತಾಂಪ್ಟನ್, ಜೂನ್ 21: ಯಾವುದೇ ಕ್ರೀಡೆಯನ್ನೇ ತೆಗೆದುಕೊಳ್ಳಿ; ಒಬ್ಬ ಪ್ರತಿಭಾನ್ವಿತ ಕ್ರೀಡಾಪಟುವಿನ ಫಾರ್ಮ್ ಆಗಲಿ, ಆತ ಸೃಷ್ಠಿಸಿದ ದಾಖಲೆಯಾಗಲಿ ಕೊನೆವರೆಗೂ ಇರಲಿದೆ ಎನ್ನಲಾಗೋಲ್ಲ. ಹೀಗೆಯೇ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಇನ್ನೊಂದಿಷ್ಟು ವಿಶ್ವದಾಖಲೆ ನಿರ್ಮಿಸಲಿದ್ದಾರೆ, ಹಳೆ ದಾಖಲೆ ಮುರಿಯಲಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾಕ್ಕೆ ಮುಂದೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯವಿದೆ. ಜೂನ್ 22ರಂದು ನಡೆಯುವ ಈ ಪಂದ್ಯದಲ್ಲಿ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಏನಾದರೂ 104+ ರನ್ ಗಳಿಸಿದರೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆ ಮುರಿದುಹೋಗಲಿದೆ.

ಟೀಮ್ ಇಂಡಿಯಾದ ಒಳ್ಳೆಯ, ಕೆಟ್ಟ ಫೀಲ್ಡರ್‌ಗಳ ಹೆಸರಿಸಿದ ಫೀಲ್ಡಿಂಗ್ ಕೋಚ್!ಟೀಮ್ ಇಂಡಿಯಾದ ಒಳ್ಳೆಯ, ಕೆಟ್ಟ ಫೀಲ್ಡರ್‌ಗಳ ಹೆಸರಿಸಿದ ಫೀಲ್ಡಿಂಗ್ ಕೋಚ್!

ಭಾರತ vs ಅಘ್ಫಾನಿಸ್ತಾನ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಲಿರುವ ಕೊಹ್ಲಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಅಂಕಿ-ಅಂಶಗಳಿವೆ.

ಕೊಹ್ಲಿ ಮತ್ತೊಂದು ವಿಶ್ವದಾಖಲೆ

ಕೊಹ್ಲಿ ಮತ್ತೊಂದು ವಿಶ್ವದಾಖಲೆ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 11,000 ರನ್ ಪೂರೈಸುವ ಮೂಲಕ ಏಕದಿನದಲ್ಲಿ ವೇಗವಾಗಿ 11 ಸಾವಿರ ರನ್ ಪೂರೈಸಿದ ವಿಶ್ವದಾಖಲೆ ನಿರ್ಮಿಸಿದ್ದರು. ಈ ವೇಳೆ ಸಚಿನ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದರು. ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ 104ಕ್ಕೂ ಹೆಚ್ಚಿನ ರನ್ ಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಸಾಧನೆಗಾಗಿ ಗುರುತಿಸಿಕೊಳ್ಳಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 12ನೇ ಬ್ಯಾಟ್ಸ್ಮನ್ ಆಗಿ ಮತ್ತು ಭಾರತದ 3ನೇ ಆಟಗಾರನಾಗಿ ವಿರಾಟ್ ದಾಖಲೆ ನಿರ್ಮಿಸಲಿದ್ದಾರೆ.

ಸಚಿನ್, ದ್ರಾವಿಡ್ ಹೆಸರಲ್ಲಿ ದಾಖಲೆ

ಸಚಿನ್, ದ್ರಾವಿಡ್ ಹೆಸರಲ್ಲಿ ದಾಖಲೆ

ಭಾರತೀಯರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಿದ ದಾಖಲೆ ಸಚಿನ್ ತೆಂಡೂಲ್ಕರ್ ( 34,357 ರನ್) ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ (24,208 ರನ್) ಹೆಸರಿನಲ್ಲಿದೆ. ಕೊಹ್ಲಿ ಈಗ ಅಂತಾರಾಷ್ಟ್ರೀಯ ಏಕದಿನದಲ್ಲಿ 11020 ರನ್, ಟೆಸ್ಟ್ ನಲ್ಲಿ 6613 ರನ್, ಟಿ20ಯಲ್ಲಿ 2263 ರನ್ ಹೀಗೆ ಒಟ್ಟಾರೆ 11,896 ರನ್ ಬಾರಿಸಿದ್ದಾರೆ.

ವೇಗದ 20,000 ರನ್ ಮೈಲಿಗಲ್ಲು

ವೇಗದ 20,000 ರನ್ ಮೈಲಿಗಲ್ಲು

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ನಿರೀಕ್ಷೆಯಂತೆ ಏನಾದರೂ 104+ ರನ್ ಬಾರಿಸಿದರೆ 20,000 ರನ್ ದಾಖಲೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 20 ಸಾವಿರ ರನ್ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. 20,000 ರನ್ ಗೆರೆ ದಾಟಲು ಕ್ರಿಕೆಟ್ ದಿಗ್ಗಜರಾದ ಸಚಿನ್ ಮತ್ತು ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಇಬ್ಬರೂ ತಲಾ 453 ಇನ್ನಿಂಗ್ಸ್‌ಗಳನ್ನು ಬಳಿಸಿಕೊಂಡಿದ್ದರು. ಕೊಹ್ಲಿ ಸದ್ಯ, 131 ಟೆಸ್ಟ್, 222 ಏಕದಿನ ಮತ್ತು 62 ಟಿ20 ಸೇರಿ ಒಟ್ಟು 415 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.

ರಿಕಿ ಪಾಂಟಿಂಗ್‌ ತೃತೀಯ

ರಿಕಿ ಪಾಂಟಿಂಗ್‌ ತೃತೀಯ

453 ಇನ್ನಿಂಗ್ಸ್‌ಗಳಲ್ಲಿ 20 ಸಾವಿರ ರನ್ ಬಾರಿಸಿ ಮೊದಲೆರಡೂ ಸ್ಥಾನಗಳಲ್ಲಿ ಸಚಿನ್, ಲಾರಾ ಇದ್ದರೆ, ಈ ಯಾದಿಯಲ್ಲಿ ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿದೆ. ಪಾಂಟಿಂಗ್ ಒಟ್ಟು 468 ಇನ್ನಿಂಗ್ಸ್‌ಗಳಲ್ಲಿ 20,000 ರನ್ ಬಾರಿಸಿದ್ದರು. ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 82 ರನ್, ಪಾಕಿಸ್ತಾನ ವಿರುದ್ಧ 77 ರನ್ ಬಾರಿಸಿದ್ದ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧವೂ ಉತ್ತಮ ರನ್ ಗಳಿಸುವ ನಿರೀಕ್ಷೆಯಿದೆ. ಅಂದ್ಹಾಗೆ ಈ ವಿಶ್ವಕಪ್ ಆವೃತ್ತಿಯಲ್ಲಿ ಅಫ್ಘಾನ್ ಆಡಿರುವ ಐದು ಪಂದ್ಯಗಳನ್ನು ಸೋತಿದೆ.

Story first published: Friday, June 21, 2019, 18:07 [IST]
Other articles published on Jun 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X