ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ಮಹಿಳೆಯರಿಂದ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ

By Mahesh
ಪುರುಷರೂ ಮಾಡದ ಸಾಧನೆಯನ್ನ ಈ ಮಹಿಳೆಯರು ಮಾಡಿದ್ದಾರೆ | Oneindia kannada
World Record: New Zealand women score mammoth 490/4 vs Ireland, highest ever in ODIs

ಡಬ್ಲಿನ್, ಜೂನ್ 08: ನ್ಯೂಜಿಲೆಂಡ್ ಮಹಿಳೆಯರ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಐರ್ಲೆಂಡ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 490/4 ಸ್ಕೋರ್ ಮಾಡಿದೆ. ಕಿವೀಸ್ ನಾಯಕಿ ಸೂಜಿ ಬೇಟ್ಸ್ 151ರನ್ ಚೆಚ್ಚಿ ತಂಡವನ್ನು ಮುನ್ನಡೆಸಿದರು.

ನ್ಯೂಜಿಲೆಂಡ್ ತಂಡ ಗಳಿಸಿದ ಈ ಮೊತ್ತವು ಪುರುಷರ ತಂಡ ಸೇರಿದಂತೆ ತಂಡವೊಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಪುರುಷರ ಕ್ರಿಕೆಟ್ ನಲ್ಲಿ 444/3 ಅತ್ಯಧಿಕ ಮೊತ್ತವಾಗಿದ್ದು, ನ್ಯಾಟಿಂಗ್ ಹ್ಯಾಮ್ ನಲ್ಲಿ ಆಗಸ್ಟ್ 2016ರಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗಳಿಸಿದ ಮೊತ್ತ ಇದಾಗಿದೆ.

ಹೊಸ ದಾಖಲೆ: ಮಹಿಳೆಯರ ಕ್ರಿಕೆಟ್ ನಲ್ಲಿ 21 ವರ್ಷಗಳ ಹಿಂದೆ ತಂಡವೊಂದು ಗಳಿಸಿದ ಅತ್ಯಧಿಕ ರನ್ ದಾಖಲೆಯನ್ನು ಮತ್ತೊಮ್ಮೆ ನ್ಯೂಜಿಲೆಂಡ್ ತಂಡವೇ ಮುರಿದಿದೆ. 1997ರ ಜನವರಿಯಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ 455/5 ಸ್ಕೋರ್ ಮಾಡಿ ದಾಖಲೆ ಬರೆದಿತ್ತು. ಇದಲ್ಲದೆ, 400 ಪ್ಲಸ್ ರನ್ ಗಳನ್ನು ಮೂರು ಬಾರಿ ಗಳಿಸಿದ ಏಕೈಕ ತಂಡ ಎನಿಸಿದೆ. ಪುರುಷರ ಏಕದಿನ ಕ್ರಿಕೆಟ್ ನಲ್ಲಿ 18 ಬಾರಿ 400 ಪ್ಲಸ್ ರನ್ ಗಳಿಸಲಾಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌‌ ಮಾಡಿದ ನ್ಯೂಜಿಲೆಂಡ್‌ ತಂಡದ ಪರ ನಾಯಕಿ ಸೂಜಿ ಬೇಟ್ಸ್(151 ರನ್, 94 ಎಸೆತ, 24 ಬೌಂಡರಿ, 2 ಸಿಕ್ಸರ್), ಜೆಸ್ ವಾಟ್ಕಿನ್(62), ಮ್ಯಾಡಿ ಗ್ರೀನ್(121ರನ್, 105ಎಸೆತಗಳು, 17 ಬೌಂಡರಿ, 2ಸಿಕ್ಸರ್) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 490/4 ಸ್ಕೋರ್ ಮಾಡಿತು.

Story first published: Saturday, June 9, 2018, 0:14 [IST]
Other articles published on Jun 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X