ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತ 10 ಟಿ20 ಪಂದ್ಯ ಗೆದ್ದ ಭಾರತ: ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆ

Team india

ಲಕ್ನೋ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ 62 ರನ್‌ಗಳ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳಲ್ಲಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜೊತೆಗೆ ಭಾರತ ಟಿ20 ಕ್ರಿಕೆಟ್‌ನಲ್ಲಿ ಸತತ 10 ಪಂದ್ಯ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ.

ಇದುವರೆಗೂ ಟಿ20 ಕ್ರಿಕೆಟ್‌ನಲ್ಲಿ ಸತತ 9 ಪಂದ್ಯ ಗೆದ್ದಿದ್ದ ತನ್ನದೇ ದಾಖಲೆಯನ್ನ ಅಳಿಸಿಹಾಕಿರುವ ಭಾರತ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 10 ಪಂದ್ಯ ಗೆದ್ದಿರುವ ಸಾಧನೆ ಮಾಡಿದೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ತಂಡವನ್ನ ಮೂರು ಟಿ20 ಪಂದ್ಯದಲ್ಲೂ ಸೋಲಿಸಿದ ಭಾರತ ಸತತ 9ನೇ ಟಿ20 ಪಂದ್ಯವನ್ನ ಜಯಿಸಿದ ಸಾಧನೆ ಮಾಡಿತ್ತು. ಇದೀಗ ಲಂಕಾ ವಿರುದ್ಧ ಮೊದಲ ಪಂದ್ಯ ಗೆಲ್ಲುವ ಮೂಲಕ ಆ ಸಂಖ್ಯೆಯನ್ನ 10ಕ್ಕೆ ಏರಿಸಿದೆ.

ಸತತ 10 ಪಂದ್ಯಗಳಲ್ಲಿ ಗೆಲುವು

ಸತತ 10 ಪಂದ್ಯಗಳಲ್ಲಿ ಗೆಲುವು

ಈ ಹಿಂದೆ ಭಾರತ 2022ರ ಜನವರಿಯಿಂದ ಡಿಸೆಂಬರ್‌ವರೆಗೆ 9 ಟಿ20 ಪಂದ್ಯಗಳನ್ನ ಗೆದ್ದಿತ್ತು. ಆದ್ರೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದು 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 10 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಸತತ 12 ಪಂದ್ಯ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದ್ದು, 11 ಪಂದ್ಯ ಗೆದ್ದಿರುವ ಪಾಕಿಸ್ತಾನ ಎರಡನೇ ಸ್ಥಾನ ಅಲಂಕರಿಸಿದೆ.

ರೋಹಿತ್ ಶರ್ಮಾ ವಿಶ್ವದಾಖಲೆ

ರೋಹಿತ್ ಶರ್ಮಾ ವಿಶ್ವದಾಖಲೆ

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್‌ ಸ್ಕೋರ್ ಗಳಿಸಿದ ಆಟಗಾರ ಎಂಬ ಸಾಧನೆಯನ್ನ ಮಾಡಿದ್ದಾರೆ. 123 ಟಿ20 ಪಂದ್ಯವನ್ನಾಡುತ್ತಿರುವ ರೋಹಿತ್ ಶರ್ಮಾ 140.66ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು, 33.33 ಸರಾಸರಿಯಲ್ಲಿ 3300 ರನ್ ಕಲೆಹಾಕಿದ್ದಾರೆ. ನಾಲ್ಕು ಅಮೋಘ ಶತಕಗಳು ಮತ್ತು 26 ಅರ್ಧಶತಕಗಳಿಸಿರುವ ರೋಹಿತ್ 155 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ.

ರೋಹಿತ್ ಈ ಸಾಧನೆ ಮಾಡುವ ಮೊದಲು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 3,296 ರನ್ ಹಾಗೂ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್‌ 3299 ರನ್ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ವಿಕೆಟ್ ಪಡೆದಿದ್ದಕ್ಕೆ ಪುಷ್ಪ ಸ್ಟೈಲ್ ಮಾಡಿ ಸಂಭ್ರಮಿಸಿದ ಜಡೇಜಾ‌ ವಿಡಿಯೋ ಫುಲ್ ವೈರಲ್ | Oneindia Kannada
ದಾಖಲೆ ಬರೆದ ಇಶಾನ್ ಕಿಶನ್

ದಾಖಲೆ ಬರೆದ ಇಶಾನ್ ಕಿಶನ್

56 ಎಸೆತಗಳಲ್ಲಿ 89 ರನ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತ ಪರ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂಬ ಸಾಧನೆ ಮಾಡಿದ್ದಾರೆ. ಕಿಶನ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು.

ಭಾರತ ನೀಡಿದ 200 ರನ್ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿ 62 ರನ್‌ಗಳಿಂದ ಸೋಲನ್ನಪ್ಪಿತು.

Story first published: Friday, February 25, 2022, 9:43 [IST]
Other articles published on Feb 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X