ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಮೀಸಲು ದಿನದ ನಿಯಮಗಳೇನು? ಇಲ್ಲಿದೆ ಮಾಹಿತಿ

World Test Championship Final: Reserve Day Rules Explained in Kannada
WTC ಫೈನಲ್ ಪಂದ್ಯ ಡ್ರಾ ಆದ್ರೆ ಏನಾಗುತ್ತೆ ಗೊತ್ತಾ..? | Oneindia Kannada

ಸೌಥಾಂಪ್ಟನ್, ಜೂನ್ 23: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಎರಡು ದಿನಗಳ ಆಟವನ್ನು ಪೂರ್ಣ ಪ್ರಮಾಣದಲ್ಲಿ ಮಳೆ ಆಹುತಿ ಪಡೆದುಕೊಂಡಿದೆ. ಉಳಿದ ದಿನಗಳಲ್ಲೂ ಸಂಪೂರ್ಣ ಆಟಕ್ಕೆ ಅವಕಾಶ ನೀಡದ ಕಾರಣ ಮೀಸಲು ದಿನಕ್ಕೆ ಮಹತ್ವದ ಪಂದ್ಯ ಕಾಲಿಟ್ಟಿದೆ.

ಸೌಥಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಆರಂಭವಾದಾಗಿನಿಂದಲೂ ಮಳೆಯಾಗುತ್ತಿದೆ. ಮೊದಲ ದಿನವೇ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನದಂದು ಪಂದ್ಯದ ಪ್ರಾರಂಭಕ್ಕೆ ಅವಕಾಶ ದೊರೆಯಿತಾದರೂ ಮಳೆ ಹಾಗೂ ಮಂದ ಬೆಳಕು ಅಡ್ಡಿಯಾಗಿ ಪೂರ್ಣ ಪ್ರಮಾಣದ ಆಟ ನಡೆಯಲು ಸಾಧ್ಯವಾಗಲಿಲ್ಲ. ಮೂರನೇ ದಿನವೂ ನಿಗದಿತ ಪ್ರಮಾಣದ ಆಟಕ್ಕೆ ಅವಕಾಶ ದೊರೆಯಲಿಲ್ಲ. ಮತ್ತೆ ನಾಲ್ಕನೇ ದಿನ ಸಂಪೂರ್ಣವಾಗಿ ಮಳೆಯಿಂದಾಗಿ ರದ್ದಾಯಿತು. ಐದನೇ ದಿನ ಆರಂಭದ ಒಂದು ಗಂಟೆ ತಡವಾಗಿ ಆರಂಭವಾದರೂ ನಂತರ ಅದೃಷ್ಟವಶಾತ್ ಮಳೆ ಅಡ್ಡಿ ಮಾಡಿಲ್ಲ.

WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್

ಯಾಕೆ ಮೀಸಲು ದಿನ?

ಯಾಕೆ ಮೀಸಲು ದಿನ?

ಜೂನ್ 23 ಬುಧವಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮೀಸಲು ದಿನ ಎಂದು ನಿಗದಿಪಡಿಸಲಾಗಿದೆ. ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಮಳೆಯಿಂದಾಗಿ ವ್ಯರ್ಥವಾದ ಅವಧಿಯನ್ನು ಈ ಮೀಸಲು ದಿನದಲ್ಲಿ ಸರಿದೂಗಿಸಲು ಮೀಸಲಿಡಲಾಗಿದೆ. 2018ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭಕ್ಕೂ ಮುನ್ನವೇ ಮೀಸಲು ದಿನವನ್ನು ನಿಗದಿಪಡಿಸುವ ನಿರ್ಧಾರ ಮಾಡಲಾಗಿತ್ತು. ಕಳೆದ ಮೇ 28ರಂದು ಇದನ್ನು ಅಧಿಕೃತವಾಗಿ ಘೋಷಿಸಲಾಯಿತು.

ಎಷ್ಟು ಹೊತ್ತಿಗೆ ಪಂದ್ಯ ಆರಂಭವಾಗಲಿದೆ?

ಎಷ್ಟು ಹೊತ್ತಿಗೆ ಪಂದ್ಯ ಆರಂಭವಾಗಲಿದೆ?

ಮೀಸಲು ದಿನದ ಪಂದ್ಯ ಸ್ಥಳೀಯ ಕಾಲಮಾನ ಎಂದಿನಂತೆಯೇ 10.30ಕ್ಕೆ ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 12:30ಕ್ಕೆ(ಭಾರತೀಯ ಕಾಲಮಾನ ಸಂಜೆ 5 ಗಂಟೆ) ಭೋಜನ ವಿರಾಮ ಹಾಗೂ 3:25ಕ್ಕೆ(ಭಾರತೀಯ ಕಾಲಮಾನ 7:55) ಟೀ ವಿರಾಮವಿರುತ್ತದೆ.

ಎಷ್ಟು ಓವರ್‌ಗಳು ಆಡಿಸಲಾಗುತ್ತದೆ?

ಎಷ್ಟು ಓವರ್‌ಗಳು ಆಡಿಸಲಾಗುತ್ತದೆ?

ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ವ್ಯರ್ಥವಾದ ಓವರ್‌ಗಳನ್ನು ಸರಿದೂಗಿಸಲು ಈ ಮೀಸಲು ದಿನವನ್ನು ಬಳಸಲಾಗುತ್ತದೆ. ಗರಿಷ್ಠ 98 ಓವರ್‌ಗಳ ಆಟವನ್ನು ಆಡಿಸುವ ಅವಕಾಶವಿರುತ್ತದೆ. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಈ ಗರಿಷ್ಠ ಅವಧಿಯನ್ನು ಬಳಸಿಕೊಳ್ಳಲು ಐಸಿಸಿ ನಿರ್ಧರಿಸಿದೆ. ಕೊನೆಯ ಒಂದು ಗಂಟೆಗಳ ಅವಧಿಯನ್ನು ಅಂಪಾಯರ್‌ಗಳು ಸೂಚನೆ ನೀಡುತ್ತಾರೆ.

ಫಲಿತಾಂಶ ಬಾರದಿದ್ದರೆ?

ಫಲಿತಾಂಶ ಬಾರದಿದ್ದರೆ?

ಇನ್ನು ಮೀಸಲು ದಿನದಲ್ಲಿಯೂ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದೆ ಡ್ರಾ ಅಥವಾ ಟೈನಲ್ಲಿ ಅಂತ್ಯವಾದರೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಇಬ್ಬರು ನಾಯಕರು ಕೊನೆಯ ಅವಧಿಗೂ ಮುನ್ನವೇ ಪಂದ್ಯವನ್ನು ಡ್ರಾ ಎಂದು ಘೋಷಿಸಲು ಒಪ್ಪಿಕೊಂಡರೆ ಯಾವುದೇ ಅವಧಿಯಲ್ಲಾದರೂ ಪಂದ್ಯವನ್ನು ಡ್ರಾ ಎಂದು ಘೋಷಿಸುವ ಅವಕಾಶ ಮೀಸಲು ದಿನದಲ್ಲಿ ಇದೆ.

Story first published: Wednesday, June 23, 2021, 14:30 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X