ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಸಂಪೂರ್ಣ ಮಾಹಿತಿ

World Test Championship: India vs New Zealand final on June 18th

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪರಿಚಯಿಸಿದ್ದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭಿಕ ಆವೃತ್ತಿಯ ಫೈನಲ್ ಪಂದ್ಯ ಕ್ರಿಕೆಟ್ ಕಾಶಿಯೆಂದು ಕರೆಯಲ್ಪಡುವ ಇಂಗ್ಲೆಂಡ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಜೂನ್ 18ರಿಂದ ಕುತೂಹಲಕಾರಿ ಪಂದ್ಯ ನಡೆಯಲಿದೆ.

ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲು ನಡೆದ ಕೊನೇ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 3-1ರ ಜಯ ಕಂಡಿದೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.

ಅಹ್ಮದಾಬಾದ್ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 25 ರನ್ ಜಯ ದಾಖಲಿಸಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಭಾರತ ಟೆಸ್ಟ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ವಾಷಿಂಗ್ಟನ್ ಸುಂದರ್ ಶತಕದಾಸೆ ಹಾಳುಗೆಡವಿದ ಸಿರಾಜ್, ಇಶಾಂತ್!ವಾಷಿಂಗ್ಟನ್ ಸುಂದರ್ ಶತಕದಾಸೆ ಹಾಳುಗೆಡವಿದ ಸಿರಾಜ್, ಇಶಾಂತ್!

ಇಂಗ್ಲೆಂಡ್-ಭಾರತ 4ನೇ ಟೆಸ್ಟ್‌ ಮುಕ್ತಾಯದ ಬಳಿಕ ಭಾರತ ತಂಡ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಒಟ್ಟು 17 ಪಂದ್ಯಗಳಲ್ಲಿ ಭಾರತ 12ರಲ್ಲಿ ಗೆಲುವು ಕಂಡಿದ್ದರಿಂದ ವಿನ್ನಿಂಗ್ ಪರ್ಸೆಂಟೇಜ್ ಆಧಾರದಲ್ಲಿ ಭಾರತ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

Story first published: Saturday, March 6, 2021, 17:25 [IST]
Other articles published on Mar 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X