ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಅಂಕಪಟ್ಟಿ: ಲಂಕಾ ಸೋಲಿಸಿ ಮತ್ತಷ್ಟು ಮೇಲೇರಿದ ಪಾಕಿಸ್ತಾನ; ಟೀಮ್ ಇಂಡಿಯಾಗೆ ಇದು ಹಿನ್ನಡೆ

World Test championship points table standings after Pakistan vs Sri Lanka first test

ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಕಂಡ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಎರಡನೇ ಆವೃತ್ತಿಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕಾಗಿದ್ದು, ಟೀಂ ಇಂಡಿಯಾ ಸದ್ಯ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಜತೆಗೆ ಇತರೆ ತಂಡಗಳು ಕೆಲ ಪಂದ್ಯಗಳಲ್ಲಿ ಸೋಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತದ ಈ ಮೈನಸ್ ಪಾಯಿಂಟ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ; ಎಚ್ಚರಿಕೆ ನೀಡಿದ ವಿಂಡೀಸ್ ನಾಯಕಭಾರತದ ಈ ಮೈನಸ್ ಪಾಯಿಂಟ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ; ಎಚ್ಚರಿಕೆ ನೀಡಿದ ವಿಂಡೀಸ್ ನಾಯಕ

ಅದರಲ್ಲಿಯೂ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾದ ಅಂಕಗಳ ಆಸುಪಾಸಿನಲ್ಲಿರುವ ಪಾಕಿಸ್ತಾನ ಸೋತಷ್ಟು ಟೀಮ್ ಇಂಡಿಯಾಗೆ ಅನುಕೂಲವಾಗಲಿದೆ. ಹೀಗಿರುವಾಗ ಪಾಕಿಸ್ತಾನ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಬ್ಬರದ ಜಯ ಸಾಧಿಸುವುದರ ಮೂಲಕ ಮತ್ತಷ್ಟು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಜಿಗಿತವನ್ನು ಕಂಡಿದೆ. ಪಾಕಿಸ್ತಾನದ ಈ ಏರಿಕೆ ಟೀಮ್ ಇಂಡಿಯಾಗೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ.

ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡ ಖರೀದಿಸಿದ ಚೆನ್ನೈ, ಮುಂಬೈ & ಇತರೆ 4 ಐಪಿಎಲ್ ತಂಡಗಳ ಮಾಲೀಕರುದ.ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡ ಖರೀದಿಸಿದ ಚೆನ್ನೈ, ಮುಂಬೈ & ಇತರೆ 4 ಐಪಿಎಲ್ ತಂಡಗಳ ಮಾಲೀಕರು

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌ನಲ್ಲಿ 222 ರನ್ ಕಲೆಹಾಕಿದರೆ, ಪ್ರವಾಸಿ ಪಾಕಿಸ್ತಾನ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 218 ರನ್‌ ಕಲೆ ಹಾಕಿ ತುಸು ಹಿನ್ನಡೆಯನ್ನು ಅನುಭವಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 337 ರನ್ ಕಲೆಹಾಕಿ ಆಲೌಟ್ ಆಗುವುದರ ಮೂಲಕ ಪಾಕಿಸ್ತಾನಕ್ಕೆ 342 ರನ್‌ಗಳ ಗುರಿಯನ್ನು ನೀಡಿತ್ತು. ಇತ್ತ ಪಾಕಿಸ್ತಾನ ಅಬ್ದುಲ್ಲಾ ಶಫೀಕ್ ಅವರ ಅಜೇಯ ಶತಕದಾಟದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 344 ರನ್ ಕಲೆಹಾಕಿ 4 ವಿಕೆಟ್‍ಗಳ ಗೆಲುವನ್ನು ಸಾಧಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ಪಡೆದುಕೊಂಡಿರುವ ಅಂಕಗಳು ಮತ್ತು ಗೆಲುವಿನ ನಂತರ ಅಂಕಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಕೆಳಗಿನಂತಿದೆ.

ಅಂಕಪಟ್ಟಿಯಲ್ಲಿ ಮತ್ತಷ್ಟು ಅಂಕ ಕಲೆಹಾಕಿದ ಪಾಕಿಸ್ತಾನ

ಅಂಕಪಟ್ಟಿಯಲ್ಲಿ ಮತ್ತಷ್ಟು ಅಂಕ ಕಲೆಹಾಕಿದ ಪಾಕಿಸ್ತಾನ

ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯ ಮುಕ್ತಾಯವಾಗುವುದಕ್ಕೂ ಮುನ್ನ 52.38ರಷ್ಟು ಗೆಲುವಿನ ಶೇಕಡಾಂಶವನ್ನು ಹೊಂದಿದ್ದ ಪಾಕಿಸ್ತಾನ ಈ ಜಯದ ನಂತರ 58.33 ಗೆಲುವಿನ ಶೇಕಡಾಂಶವನ್ನು ಹೊಂದಿದೆ. ಈ ಮೂಲಕ ಟೀಮ್ ಇಂಡಿಯಾಗಿಂತ ಶೇ.6ಕ್ಕೂ ಹೆಚ್ಚಿನ ಗೆಲುವಿನ ಶೇಕಡಾಂಶವನ್ನು ಪಾಕಿಸ್ತಾನ ಪಡೆದುಕೊಂಡಿದ್ದು, ಟೀಮ್ ಇಂಡಿಯಾಗೆ ಹಿನ್ನಡೆ ಉಂಟಾಗಿದೆ.

ಅಂಕ ಪಟ್ಟಿ ಹೀಗಿದೆ

ಅಂಕ ಪಟ್ಟಿ ಹೀಗಿದೆ

ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮುಕ್ತಾಯವಾದ ನಂತರ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಟಾಪ್ 5 ಸ್ಥಾನ ಪಡೆದುಕೊಂಡಿರುವ ತಂಡಗಳ ವಿವರ ಕೆಳಕಂಡಂತಿದೆ.


1. ದಕ್ಷಿಣ ಆಫ್ರಿಕಾ - ಪ್ರಥಮ - 71.43 ಗೆಲುವಿನ ಶೇಕಡಾಂಶ ಮತ್ತು 60 ಅಂಕಗಳು

2. ಆಸ್ಟ್ರೇಲಿಯಾ - ದ್ವಿತೀಯ ಸ್ಥಾನ - ಶೇ. 70 ಗೆಲುವಿನ ಶೇಕಡಾಂಶ ಮತ್ತು 84 ಅಂಕಗಳು

3. ಪಾಕಿಸ್ತಾನ - ತೃತೀಯ ಸ್ಥಾನ - ಶೇ. 58.33 ಗೆಲುವಿನ ಶೇಕಡಾಂಶ - 56 ಅಂಕಗಳು

4. ಭಾರತ - ನಾಲ್ಕನೇ ಸ್ಥಾನ - ಶೇ. 52.08 ಗೆಲುವಿನ ಶೇಕಡಾಂಶ ಮತ್ತು 75 ಅಂಕಗಳು

5. ವೆಸ್ಟ್ ಇಂಡೀಸ್ - ಐದನೇ ಸ್ಥಾನ - ಶೇ. 50 ಗೆಲುವಿನ ಶೇಕಡಾಂಶ ಮತ್ತು 54 ಅಂಕಗಳು

ಟೀಮ್ ಇಂಡಿಯಾ ಫೈನಲ್ ತಲುಪಲು ಇರುವ ಹಾದಿ

ಟೀಮ್ ಇಂಡಿಯಾ ಫೈನಲ್ ತಲುಪಲು ಇರುವ ಹಾದಿ

ಪಾಕಿಸ್ತಾನದ ಗೆಲುವಿನ ನಂತರ ಅಂಕಪಟ್ಟಿಯಲ್ಲಿ ಮತ್ತಷ್ಟು ಮಂಕಾಗಿರುವ ಟೀಂ ಇಂಡಿಯಾ ಯಶಸ್ವಿಯಾಗಿ ಫೈನಲ್ ತಲುಪಬೇಕೆಂದರೆ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎಲ್ಲ ಪಂದ್ಯಗಳು ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋಲುವುದರ ಜೊತೆಗೆ ಉಳಿದ ತನ್ನ 6 ಟೆಸ್ಟ್ ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯವನ್ನು ಡ್ರಾ ಮಾಡಿಕೊಂಡರೆ ಟೀಂ ಇಂಡಿಯಾ ಯಶಸ್ವಿಯಾಗಿ ಫೈನಲ್ ತಲುಪಲಿದೆ.

Story first published: Wednesday, July 20, 2022, 18:01 [IST]
Other articles published on Jul 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X