ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಲ್ಡ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ ವ್ಯವಸ್ಥೆ ಹಾಸ್ಯಾಸ್ಪದ: ಹೋಲ್ಡಿಂಗ್

World Test Championships points system is ridiculous: Holding

ಪೋರ್ಟ್ ಆಫ್ ಸ್ಪೇನ್, ಮೇ 4: ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ವ್ಯವಸ್ಥೆ ಹಾಸ್ಯಾಸ್ಪದವಾಗಿದೆ ಎಂದು ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ ಹೇಳಿದ್ದಾರೆ. ಈ ವ್ಯವಸ್ಥೆ ಪಾಯಿಂಟ್‌ ಟೇಬಲ್‌ನಲ್ಲಿ ತೀರಾ ಕೆಳಗಿರುವ ತಂಡಗಳ ಆಸಕ್ತಿಯನ್ನೇ ಕಸಿದುಕೊಳ್ಳುತ್ತದೆ ಎಂದು ಹೋಲ್ಡಿಂಗ್ ಅಭಿಪ್ರಾಯಿಸಿದ್ದಾರೆ.

ಆತನ ಬೌಲಿಂಗ್‌ಗೆ ಬೆದರಿ ನಿದ್ದೆಗೆಟ್ಟಿದ್ದೆ: ರೋಹಿತ್ ಶರ್ಮಾ ಕಂಗೆಡಿಸಿದ್ದ ಆಸಿಸ್ ಬೌಲರ್ಆತನ ಬೌಲಿಂಗ್‌ಗೆ ಬೆದರಿ ನಿದ್ದೆಗೆಟ್ಟಿದ್ದೆ: ರೋಹಿತ್ ಶರ್ಮಾ ಕಂಗೆಡಿಸಿದ್ದ ಆಸಿಸ್ ಬೌಲರ್

ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಈಗಿನ ಪಾಯಿಂಟ್ ವ್ಯವಸ್ಥೆಯ ಪ್ರಕಾರ, ಎರಡು ಪಂದ್ಯಗಳ ಸರಣಿಯಾದರೆ ಗೆಲ್ಲುವ ಒಂದು ಪಂದ್ಯಕ್ಕೆ 60 ಪಾಯಿಂಟ್ ಲಭಿಸುತ್ತದೆ, ಅದೇ ಐದು ಪಂದ್ಯಗಳ ಸರಣಿಯಾದರೆ ಪ್ರತೀ ಪಂದ್ಯಕ್ಕೆ 24 ಅಂಕ ನೀಡಲಾಗುತ್ತದೆ. ಸರಣಿಗೆ ತಕ್ಕಂತೆ ಹೀಗೆ ಪಾಯಿಂಟ್ ಮೌಲ್ಯ ವಿಂಗಡಿಸುವ ರೀತಿಗೆ ಹೋಲ್ಡಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ವಿಶ್ವದಾಖಲೆ ಸರದಾರ ಲಾರಾಗೆ 51ನೇ ಹುಟ್ಟುಹಬ್ಬದ ಸಂಭ್ರಮಟೆಸ್ಟ್ ಕ್ರಿಕೆಟ್ ವಿಶ್ವದಾಖಲೆ ಸರದಾರ ಲಾರಾಗೆ 51ನೇ ಹುಟ್ಟುಹಬ್ಬದ ಸಂಭ್ರಮ

ಅಂದರೆ ಪ್ರತೀ ಟೆಸ್ಟ್‌ ಸರಣಿಗೂ ಒಟ್ಟಾರೆ 120 ಪಾಯಿಂಟ್‌ಗಳನ್ನು ನೀಡಲಾಗಿದೆ. ಸರಣಿಯ ಪಂದ್ಯಗಳಿಗನುಸಾರ ಪಾಯಿಂಟ್‌ಗಳನ್ನು ವಿಂಗಡಿಸಲಾಗುತ್ತದೆ. ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಎರಡು ತಂಗಳು ಫೈನಲ್‌ಗೆ ಆಯ್ಕೆಯಾಗುತ್ತದೆ. ಸದ್ಯದ ಪ್ರಕಾರ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ 2021ರ ಜೂನ್‌ನಲ್ಲಿ ನಡೆಯಲಿದೆ.

ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಕಾರಣಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಆಸಿಸ್ ಬ್ಯಾಟ್ಸ್‌ಮನ್ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಕಾರಣಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಆಸಿಸ್ ಬ್ಯಾಟ್ಸ್‌ಮನ್

ವಿಸ್ಡನ್ ಕ್ರಿಕೆಟ್‌ ಜೊತೆ ಮಾತನಾಡಿದ ಹೋಲ್ಡಿಂಗ್, 'ಟೆಸ್ಟ್ ಚಾಂಪಿಯನ್‌ಶಿಪ್‌ನ ಈ ವ್ಯವಸ್ಥೆ ಕೆಲಸಕ್ಕೆ ಬರಲ್ಲ. ಮುಖ್ಯವಾಗಿ ಈ ಪಾಯಿಂಟ್ ವ್ಯವಸ್ಥೆಯೇ ಹಾಸ್ಯಾಸ್ಪದವಾಗಿದೆ. ಐದು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡಕ್ಕೂ ಒಂದೇ ರೀತಿ ಪಾಯಿಂಟ್, 2 ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡಕ್ಕೂ ಅದೇ ಪಾಯಿಂಟ್ ಅಂದರೆ? ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ, ಇನ್ನು ಏನೇ ಆದರೂ ಟಾಪ್ 2ಕ್ಕೆ ಏರಲು ಸಾಧ್ಯವಿಲ್ಲ ಎನ್ನುವ ತಂಡಗಳು ಪಂದ್ಯ ಆಡುವ ಆಸಕ್ತಿ ಕಳೆದುಕೊಳ್ಳಬಹುದು. ಅಂಥ ಟೆಸ್ಟ್ ಪಂದ್ಯಗಳೇ ಅನೌಪಚಾರಿಕವೆನಿಸುತ್ತದೆ,' ಎಂದು ಹೋಲ್ಡಿಂಗ್ ವಿವರಿಸಿ ಹೇಳಿದ್ದಾರೆ.

Story first published: Monday, May 4, 2020, 10:27 [IST]
Other articles published on May 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X