ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್: ಕಂಚು ಗೆದ್ದು ಹೊಸ ಇತಿಹಾಸ ಬರೆದ ವಿನೇಶ್ ಫೋಗಟ್

World Wrestling Championships: Vinesh Phogat won bronze in 53kg category scripts history

ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿನೇಶ್ ಫೋಗಟ್ ಕಂಚಿನ ಪದಕವನ್ನು ಗೆದ್ದು ಹೊಸ ಇತಿಹಾಸವನ್ನು ಬರೆದಿದ್ದಾರೆ. ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿನೇಶ್ ಫೋಗಟ್ ಗೆದ್ದಿರುವ ಎರಡನೇ ಪದಕ ಇದಾಗಿದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ರೆಸ್ಲರ್ ಎನಿಸಿಕೊಂಡಿದ್ದಾರೆ.

ಬುಧವಾರ ಮಹಿಳೆಯರ 53 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಮಲ್ಮಗ್ರೆನ್ ವಿರುದ್ಧ ವಿನೇಶ್ ಫೋಗಟ್ ಸೆಣೆಸಾಟ ನಡೆಸಿದರು. ಕಂಚಿನ ಪದಕಕ್ಕಾಗಿ ನಡೆದ ಈ ಸೆಣೆಸಾಟದಲ್ಲಿ ವಿನೇಶ್ ಫೋಗಟ್ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ: ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಅಫ್ರಿದಿಗೆ ಅಮಿತ್ ಮಿಶ್ರಾ ಪಂಚ್!ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ: ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಅಫ್ರಿದಿಗೆ ಅಮಿತ್ ಮಿಶ್ರಾ ಪಂಚ್!

ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿನೇಶ್ ಫೋಗಟ್ ಹೋರಾಟ ಭಾರೀ ಸವಾಲಿನಿಂದ ಕೂಡಿತ್ತು. 2022 ರ ಏಷ್ಯನ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಮಂಗೋಲಿಯಾದ ಖುಲಾನ್ ಬತ್ಖುಯಾಗ್ ವಿರುದ್ಧ ಮೊದಲ ಸುತ್ತಿನಲ್ಲಿ ಆಘಾತಕಾರಿ 7-0 ಅಂತರದಿಂದ ಸೋಲು ಅನುಭವಿಸಿದ್ದರು. ನಂತರ ವಿನೇಶ್ ರೆಪೆಚೇಜ್ ಸುತ್ತಿನಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಪಡೆದರು. ಮೊದಲು ವಿಕ್ಟರಿ ಬೈ ಫಾಲ್‌ನಲ್ಲಿ ಕಜಕಿಸ್ತಾನ್‌ನ ಜುಲ್ಡಿಜ್ ಎಶಿಮೋವಾ ಅವರನ್ನು ಸೋಲಿಸಿದ ನಂತರ ಅಜರ್‌ಬೈಜಾನ್‌ನ ಲೈಲಾ ಗುರ್ಬನೋವಾ ಗಾಯದಿಂದಾಗಿ ಹೊರಗುಳಿದ ಕಾರಣದಿಂದಾಗಿ ಟೂರ್ನಿಯಲ್ಲಿ ಕಂಚಿನ ಪದಕ ಗೆಲ್ಲುವ ಸುತ್ತು ಪ್ರವೇಶಿಸಿದರು. ಇದರಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

2019ರಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ವಿನೀಶ್ ಫೋಗಟ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಇನ್ನು ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದ ಫ್ರಿ ಸ್ಟೈಲ್‌ನಲ್ಲಿ ಶ್ರೀಲಂಕಾದ ಚಮೋಡಿಯಾ ಕೆಶಾನಿ ಮದುರವಲಗೆ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನೀಲಂ ಮಂಗಳವಾರ ಗೆಲುವು ದಾಖಲಿಸಿದ ಏಕೈಕ ಭಾರತೀಯರಾಗಿದ್ದರು. 23 ವರ್ಷದೊಳಗಿನ ಏಷ್ಯನ್ ಬೆಳ್ಳಿ ಪದಕ ವಿಜೇತ ಭಾರತೀಯ ಆಟಗಾರ್ತಿ ಸ್ಜಿಮೊನೆಟ್ಟಾ ಟೈಮಾ ಸ್ಜೆಕರ್ ಅವರನ್ನು 4-2 ಅಂತರದಿಂದ ಸೋಲಿಸಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದರು. 65ಕೆಜಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಶೆಫಾಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತೆ ಫ್ರಾನ್ಸ್‌ನ ಕೌಂಬಾ ಸೆಲೆನೆ ಫಾಂಟಾ ಲಾರೊಕ್ ವಿರುದ್ಧ 10-0 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

IND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವುIND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವು

ಕಳೆದ ತಿಂಗಳು 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಪ್ರಿಯಾಂಕಾ 76 ಕೆಜಿಯ ಅರ್ಹತಾ ಸುತ್ತಿನಲ್ಲಿ ತಾಂತ್ರಿಕ ಶ್ರೇಷ್ಠತೆಯ ಮೂಲಕ ಮೂರು ಬಾರಿ ಪ್ಯಾನ್-ಅಮೆರಿಕನ್ ಬೆಳ್ಳಿ ಪದಕ ವಿಜೇತೆ ಈಕ್ವೆಡಾರ್‌ನ ಜೆನೆಸಿಸ್ ರೊಸಾಂಗೆಲಾ ರಿಯಾಸ್ಕೊ ವಾಲ್ಡೆಜಿನ್‌ಗೆ ಶರಣಾಗಿದ್ದಾರೆ.

Story first published: Thursday, September 15, 2022, 10:54 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X