ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆ

World XI v Asia XI Matches Postponed Amid Coronavirus Fears

ಢಾಕಾ: ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ವಿಶ್ವ XI vs ಏಷ್ಯಾXI ನಡುವಿನ ಪಂದ್ಯ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಕರಿಛಾಯೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಬಾಂಗ್ಲಾದೇಶ ಆತಿಥ್ಯವನ್ನು ವಹಿಸಿಕೊಂಡಿರುವ ಈ ಬಹುನಿರೀಕ್ಷಿತ ಪಂದ್ಯ ಮಾರ್ಚ್ 21 ಮತ್ತು 22 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಈ ಪಂದ್ಯವನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

ಬಾಂಗ್ಲಾದೇಶದ ಪಿತಾಮಹ ಎನಿಸಿರುವ ಶೇಖ್ ಮುಜಿಬುರ್ ರಹ್ಮಾನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಬಾಂಗ್ಲಾದೇಶ ಈ ಟೂರ್ನಿಯನ್ನು ಆಯೋಜನೆ ಮಾಡಿದೆ. ಈಗಾಗಲೆ ಈ ಟೂರ್ನಿಗೆ ಈಗಾಗಲೆ ತಂಡಗಳನ್ನೂ ಅಂತಿಮಗೊಳಿಸಲಾಗಿತ್ತು.

ಟೀಮ್ ಇಂಡಿಯಾದ ಆರು ಮಂದಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದರು. ಢಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯಾವಳಿ ನಿಯೋಜನೆಯಾಗಿತ್ತು. ಪಾಕಿಸ್ತಾನವನ್ನು ಹೊರತುಪಡಿಸಿ ಎಳಿದ ಏಷ್ಯಾ ಖಂಡದ ಕ್ರಿಕೆಟ್‌ ಆಡುವ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಅಪ್ಘಾನಿಸ್ತಾನ ತಂಡದ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವವರಿದ್ದರು. ಮತ್ತೊಂದೆಡೆ ವಿಶ್ವ ಇಲವೆನ್ ತಂಡದಿಂದ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಪಾಲ್ಗೊಳ್ಳುವವರಿದ್ದರು.

ಐಪಿಎಲ್ 2020: ಆರ್‌ಸಿಬಿ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲ್ಲ!?ಐಪಿಎಲ್ 2020: ಆರ್‌ಸಿಬಿ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲ್ಲ!?

ಕೊರೊನಾ ಭೀತಿಯಿಂದ ಸದ್ಯ ಬಿಸಿಬಿ ಕ್ರಿಕೆಟ್‌ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಮುಂದೆ ಯಾವಾಗ ಈ ಟೂರ್ನಿ ಆಯೋಜನೆಯಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಪ್ರಸಕ್ತ ಜಿಂಬಾಬ್ವೆ ಸರಣಿ ನಡೆಯುತ್ತಿದ್ದು ಕೊರೊನಾ ಭೀತಿಯಿಂದ ಟಿಕೆಟ್‌ಗೆ ಸಾಕಷ್ಟು ನಿರ್ಬಂಧವನ್ನು ವಿಧಿಸಿದೆ.

Story first published: Wednesday, March 11, 2020, 19:17 [IST]
Other articles published on Mar 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X