ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಜರಾತ್‌ನಲ್ಲಿ ಸಿದ್ಧವಾಗುತ್ತಿದೆ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ

ಗುಜರಾತ್‌ನಲ್ಲಿ ಸಿದ್ಧವಾಗುತ್ತಿದೆ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ..! | Oneindia Kannada

ಅಹಮದಾಬಾದ್, ಜನವರಿ 7: ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಸೂರತ್‌ನಲ್ಲಿ ಅನಾವರಣ ಮಾಡಿದ್ದರು. 182 ಮೀಟರ್ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ಭಾರತದ ಹೆಮ್ಮೆಯ ಪ್ರತೀಕ ಎಂದೇ ಬಣ್ಣಿಸಲಾಗಿದೆ.

ಈಗ ಭಾರತ ಮತ್ತೊಂದು 'ಬೃಹತ್' ಸಾಧನೆಗೆ ಸಿದ್ಧವಾಗುತ್ತಿದೆ. ಈ ಗೌರವಕ್ಕೂ ಪಾತ್ರವಾಗುತ್ತಿರುವುದು ಗುಜರಾತ್ ರಾಜ್ಯ.

ಅಹಮದಾಬಾದ್‌ನ ಮೊಟೆರಾದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಹಳೆಯದಾಗಿದ್ದ ಮತ್ತು ಸೌಲಭ್ಯಗಳ ಕೊರತೆಯಿದ್ದ ಹಳೆಯ ಮೊಟೆರಾ ಕ್ರೀಡಾಂಗಣವನ್ನು ಕೆಡವಿ ಹೊಸದಾಗಿ ನಿರ್ಮಿಸಲಾಗುತ್ತಿದೆ. ವಿಶಾಲ ಕ್ರೀಡಾಂಗಣದಲ್ಲಿ ಅಧಿಕ ಕ್ರಿಕೆಟ್ ಪ್ರೇಮಿಗಳು ಸೇರಿಕೊಳ್ಳಬಹುದು. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳು ದೊರಕಲಿವೆ.

ಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶ ಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶ

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ ಜಗತ್ತಿನ ಅತಿ ದೊಡ್ಡ ಮೈದಾನ ಎನಿಸಿಕೊಂಡಿದೆ. ಆದರೆ, ಮೊಟೆರಾದ ಕ್ರೀಡಾಂಗಣ ಮೆಲ್ಬರ್ನ್ ಅನ್ನೂ ಮೀರಿಸಲಿದೆ.

1.10 ಲಕ್ಷ ಆಸನ ಸಾಮರ್ಥ್ಯ

ಈ ನೂತನ ಕ್ರೀಡಾಂಗಣದಲ್ಲಿ 1.10 ಲಕ್ಷ ಆಸನ ಸಾಮರ್ಥ್ಯ ಇರಲಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಪರಿಮಳ್ ನಥ್ವಾನಿ ಭಾನುವಾರ ಅದರ ಚಿತ್ರ ಸಹಿತ ಟ್ವೀಟ್ ಮಾಡಿದ್ದಾರೆ.

ಇದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕನಸಿನ ಯೋಜನೆ. ಇದು ಆಟಕ್ಕೆ ಮುಕ್ತವಾದ ಬಳಿಕ ದೇಶದ ಹೆಮ್ಮೆಯ ಸಂಕೇತವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ

700 ಕೋಟಿ ರೂಪಾಯಿ ವೆಚ್ಚ

700 ಕೋಟಿ ರೂಪಾಯಿ ವೆಚ್ಚ

ಈ ಕ್ರೀಡಾಂಗಣ 63 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರತಿಷ್ಠಿತ ಪಾಪ್ಯುಲಸ್ ಆರ್ಕಿಟೆಕ್ಟ್ ಕಂಪೆನಿ ಸ್ಟೇಡಿಯಂ ವಿನ್ಯಾಸದ ಜವಾಬ್ದಾರಿ ನಿರ್ವಹಿಸುತ್ತಿದೆ.

ಇದು 700 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಭಾರತದ ಅತಿ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಎಲ್‌ & ಟಿ, ಸ್ಟೇಡಿಯಂ ನಿರ್ಮಾಣದ ಟೆಂಡರ್ ಪಡೆದುಕೊಂಡಿದೆ. ಏಕತಾ ಪ್ರತಿಮೆಯ ನಿರ್ಮಾಣವನ್ನೂ ಇದೇ ಕಂಪೆನಿ ನಿರ್ವಹಿಸಿತ್ತು.

ಟೆಸ್ಟ್ ಸರಣಿಯಲ್ಲಿ 2-1 ಗೆಲುವು: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಸಾಧನೆ

ವಾಹನ ನಿಲುಗಡೆಗೆ ಸ್ಥಳ

ಗುಜರಾತ್ ಕ್ರಿಕೆಟ್ ಸಂಸ್ಥೆಯ ವೆಬ್‌ಸೈಟ್ ಮಾಹಿತಿ ಪ್ರಕಾರ ಸ್ಟೇಡಿಯಂನಲ್ಲಿ ಮೂರು ಅಭ್ಯಾಸ ಮೈದಾನಗಳು ಇರಲಿವೆ. ಇದರ ಜೊತೆ ಒಂದು ಒಳ ಕ್ರೀಡಾಂಗಣವೂ ಇರಲಿದೆ.

3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲದೆ, ವಾಹನಗಳ ಸಂಚಾರ ಮತ್ತು ಪಾದಚಾರಿ ಮಾರ್ಗಗಳ ಸಂಪರ್ಕಕ್ಕೆ ಯಾವುದೇ ಅಡೆ ತಡೆ ಇರುವುದಿಲ್ಲ.

55 ಸುಸಜ್ಜಿತ ಕೊಠಡಿಗಳ ಕ್ಲಬ್‌ ಮತ್ತು ಒಲಿಂಪಿಕ್ ಗಾತ್ರದ ಸ್ವಿಮ್ಮಿಂಗ್ ಪೂಲ್ ಇರಲಿದ್ದು, 76 ಕಾರ್ಪೊರೆಟ್ ಬಾಕ್ಸ್‌ಗಳಿರಲಿವೆ.

ಮೆಲ್ಬರ್ನ್ ಕ್ರೀಡಾಂಗಣ

ಮೆಲ್ಬರ್ನ್ ಕ್ರೀಡಾಂಗಣ

ಮೆಲ್ಬರ್ನ್ ಕ್ರಿಕೆಟ್ ಮೈದಾನ ಸಾಮರ್ಥ್ಯದ ಆಧಾರದಲ್ಲಿ ಅತಿ ದೊಡ್ಡ ಕ್ರೀಡಾಂಗಣವಾಗಿದ್ದು, 1 ಲಕ್ಷ ಜನರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಲು ಅವಕಾಶವಿದೆ. ಅದರ ನಂತರ ಎರಡನೆಯ ದೊಡ್ಡ ಕ್ರೀಡಾಂಗಣ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನವಾಗಿದ್ದು, 66 ಸಾವಿರ ಸಾಮರ್ಥ್ಯವಿದೆ.

54 ಸಾವಿರ ಸಾಮರ್ಥ್ಯವಿತ್ತು

54 ಸಾವಿರ ಸಾಮರ್ಥ್ಯವಿತ್ತು

ಇದಕ್ಕೂ ಮೊದಲು ಮೊಟೆರಾ ಕ್ರೀಡಾಂಗಣದಲ್ಲಿ 54 ಸಾವಿರ ಜನರು ಪಂದ್ಯ ವೀಕ್ಷಿಸಬಹುದಾಗಿತ್ತು. ಕ್ರೀಡಾಂಗಣವನ್ನು ನವೀಕರಿಸಿ ಇನ್ನಷ್ಟು ವಿಸ್ತರಿಸಲು 2016ರಲ್ಲಿ ಜಿಸಿಎ ಹಳೆಯ ಕ್ರೀಡಾಂಗಣವನ್ನು ಕೆಡವಿ ಹೊಸ ಕಾಮಗಾರಿ ಆರಂಭಿಸಿತ್ತು.

Story first published: Monday, January 7, 2019, 14:45 [IST]
Other articles published on Jan 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X