ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ 4ನೇ ಕ್ರಮಾಂಕಕ್ಕೆ ಅವನಂತ ಬ್ಯಾಟ್ಸ್‌ಮನ್ ಬೇಕು: ಅನಿಲ್ ಕುಂಬ್ಳೆ

‘Would like him at number 4’ - Anil Kumble backs young player ahead of ODI series

ಬೆಂಗಳೂರು, ಡಿಸೆಂಬರ್ 13: ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿರುವ ಟೀಮ್ ಇಂಡಿಯಾ, ಏಕದಿನ ಸರಣಿ ಗೆಲುವಿನತ್ತ ಕಣ್ಣಿಟ್ಟಿದೆ. ಈ ನಡುವೆ ಏಕದಿನಕ್ಕೆ ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯಾರು ಸೂಕ್ತ ಎಂಬ ಚರ್ಚೆಯೂ ಮತ್ತೆ ಶುರುವಾಗಿದೆ. ಭಾರತದ 4ನೇ ಕ್ರಮಾಂಕಕ್ಕೆ ಸಮರ್ಥ ಆಟಗಾರ ಯಾರೆಂಬುದನ್ನು ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.

ಕರ್ನಾಟಕ vs ತಮಿಳುನಾಡು ರಣಜಿ; ಟೀಮ್ ಇಂಡಿಯಾ ಆಟಗಾರರ ಮಧ್ಯೆ ಕಿತ್ತಾಟಕರ್ನಾಟಕ vs ತಮಿಳುನಾಡು ರಣಜಿ; ಟೀಮ್ ಇಂಡಿಯಾ ಆಟಗಾರರ ಮಧ್ಯೆ ಕಿತ್ತಾಟ

ವಿರಾಟ್ ಕೊಹ್ಲಿ ಪಡೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾಗ ಮೆನ್ ಇನ್ ಬ್ಲೂ ತಂಡದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್ ಆಡಿ ಸೈ ಎನಿಸಿದ್ದರು. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಶ್ರೇಯಸ್ ಅವರನ್ನು ಈ ಪ್ರಭಾವಶಾಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಸರಿಸಿದ್ದಾರೆ.

ಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋ

'ಶಿಖರ್ ಧವನ್ ತಂಡದಲ್ಲಿ ಇಲ್ಲದ್ದು ಆರಂಭಿಕರಾಗಿ ಆಡಲು ಕೆಎಲ್ ರಾಹುಲ್‌ಗೆ ಅವಕಾಶ ಮಾಡಿಕೊಟ್ಟಿದೆ. ಶ್ರೇಯಸ್ ಅಯ್ಯರ್ ಅವರಲ್ಲಿನ ಗುಣಮಟ್ಟವನ್ನು ನಾವು ನೋಡಿದ್ದೇವೆ. ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್‌ನಂತ ಆಟಗಾರನನ್ನು ನಾನು ನೋಡಬಯಸುತ್ತೇನೆ,' ಎಂದು ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಹೇಳಿಕೊಂಡಿದ್ದಾರೆ.

ಟಿ20ಯಲ್ಲೂ ಟಾಪ್10ರೊಳಗೆ ಸ್ಥಾನ ಪಡೆದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಟಿ20ಯಲ್ಲೂ ಟಾಪ್10ರೊಳಗೆ ಸ್ಥಾನ ಪಡೆದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಮಾತು ಮುಂದುವರೆಸಿದ ಕುಂಬ್ಳೆ, 'ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಬೌಲಿಂಗ್ ಪ್ರದರ್ಶನವೂ ಉತ್ತಮವಿರಬೇಕಿದೆ. ಯಾಕೆಂದರೆ ವಿಂಡೀಸ್ ಒಂದು ಸವಾಲಿನ ತಂಡ. ಅಲ್ಲಿ ಬಲಶಾಲಿ ದಾಂಡಿಗರಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೆ ಬೇಕಾದ ಮೈದಾನವೂ ಇದೆ. ಹೀಗಾಗಿ ಬೌಲರ್‌ಗಳೂ ಉತ್ತಮ ಪ್ರದರ್ಶನ ನೀಡಬೇಕು,' ಎಂದರು.

ಕೆಸ್ರಿಕ್‌ ಎಸೆತಕ್ಕೆ ಸಿಕ್ಸ್ ಚಚ್ಚಿ ಅಣಕಿಸಿದ ವಿರಾಟ್ ಕೊಹ್ಲಿ: ವೈರಲ್ ವೀಡಿಯೋಕೆಸ್ರಿಕ್‌ ಎಸೆತಕ್ಕೆ ಸಿಕ್ಸ್ ಚಚ್ಚಿ ಅಣಕಿಸಿದ ವಿರಾಟ್ ಕೊಹ್ಲಿ: ವೈರಲ್ ವೀಡಿಯೋ

ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಕೊಹ್ಲಿ ಪಡೆ 2-1ರಿಂದ ಗೆದ್ದುಕೊಂಡಿತ್ತು. ಇನ್ನು 3 ಪಂದ್ಯಗಳ ಏಕದಿನ ಸರಣಿ ಭಾನುವಾರ (ಡಿಸೆಂಬರ್ 15) ಆರಂಭಗೊಳ್ಳಲಿದೆ. ಮೊದಲ ಪಂದ್ಯ ಹೈದರಾಬಾದ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 2 pmಗೆ ಶುರುವಾಗಲಿದೆ.

Story first published: Friday, December 13, 2019, 14:59 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X