ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3 ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ ರಾಹುಲ್

Would love to do it for my country: KL Rahul on keeping wickets in 3 World Cups

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಟೀಮ್ ಇಂಡಿಯಾದ ಉಪನಾಯಕನಾಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ತಮಗೆ ಸಿಕ್ಕ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ಪೂರೈಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಜವಾಬ್ಧಾರಿ ವಹಿಸಿಕೊಂಡ ರಾಹುಲ್ ನಿರ್ವಹಿಸಿದ ರೀತಿಗೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ತಮಗೆ ಸಿಕ್ಕ ಕರ್ತವ್ಯವನ್ನು ಕೆಎಲ್ ರಾಹುಲ್ ಉತ್ತಮವಾಗಿ ಆನಂದಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು ಮುಂದಿನ ಪ್ರಮುಖ ಮೂರು ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಮುಂದುವರಿಯುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯIndia vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಹಾಗಾದರೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯ ಬಗ್ಗೆ ಕೆಎಲ್ ರಾಹುಲ್ ಏನೆಲ್ಲಾ ವಿಚಾರಗಳನ್ನು ಮಾತನಾಡಿದ್ದಾರೆ. ಮುಂದಿನ ಮೂರು ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪಿಂಗ್ ಮಾಡುವ ಕನಸನ್ನು ಪೂರೈಸಲು ರಾಹುಲ್ ಯಾವ ರೀತಿ ಶ್ರಮವಹಿಸಲಿದ್ದಾರೆ ಮುಂದೆ ಓದಿ..

ಸತತ ಮೂರು ವರ್ಷ ವಿಶ್ವಕಪ್

ಸತತ ಮೂರು ವರ್ಷ ವಿಶ್ವಕಪ್

ಮುಂದಿನ ಮೂರು ವರ್ಷಗಳಲ್ಲಿ ಮೂರು ವಿಶ್ವಕಪ್‌ಗಳು ನಡೆಯಲಿದೆ. 2021 ಹಾಗೂ 2022ರಲ್ಲಿ ಟಿ20 ವಿಶ್ವಕಪ್ ಕ್ರಮವಾಗಿ ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಲಿದೆ. ಬಳಿಕ 2023ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಭಾರತವೇ ಇದನ್ನು ಆಯೋಜನೆ ಮಾಡಲಿದೆ.

ಒಂದೊಂದು ಪಂದ್ಯವನ್ನೇ ಪರಿಗಣಿಸುತ್ತೇನೆ

ಒಂದೊಂದು ಪಂದ್ಯವನ್ನೇ ಪರಿಗಣಿಸುತ್ತೇನೆ

"ನನಗೆ ಈ ಬಗ್ಗೆ ಏನನ್ನೂ ಹೇಳಲಾಗಿಲ್ಲ. ತಂಡವಾಗಿ ನಾವು ಅಷ್ಟು ದೂರದ ಆಲೋಚನೆಯನ್ನು ಮಾಡುವುದಿಲ್ಲ. ವಿಶ್ವಕಪ್ ಎಂಬುದು ಪ್ರತಿ ತಂಡಕ್ಕೂ ಮುಖ್ಯ ಹಾಗೂ ಆ ಬಗ್ಗೆ ಎಲ್ಲರೂ ಚಿತ್ತ ನೆಟ್ಟಿರುತ್ತಾರೆ. ಆದರೆ ನಾನು ಒಂದೊಂದು ಪಂದ್ಯವನ್ನೇ ಪರಿಗಣಿಸುತ್ತೇನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಸ್ಥಿರ ಪ್ರದರ್ಶನ ನೀಡುವ ಗುರಿ

ಸ್ಥಿರ ಪ್ರದರ್ಶನ ನೀಡುವ ಗುರಿ

"ಪ್ರತಿಯೊಂದು ಪಂದ್ಯದಲ್ಲೂ ನಾನು ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಆಗಿ ಸ್ಥಿರ ಪ್ರದರ್ಶನ ನೀಡುತ್ತಾ ಹೋದರೆ ಅದು ತಂಡಕ್ಕೆ ಇನ್ನೋರ್ವ ಬ್ಯಾಟ್ಸ್‌ಮನ್ ಅಥವಾ ಬೌಲರ್‌ನನ್ನು ಸೇರಿಸಿಕೊಳ್ಳಲು ಅವಕಾಶ ನೀಡುತ್ತದೆ. ಮುಂದಿನ ಮೂರು ವಿಶ್ವಕಪ್‌ಗಳಲ್ಲಿ ಕೀಪಿಂಗ್ ಮಾಡುವ ಅವಕಾಶ ದೊರೆತರೆ ನಾನು ಅದನ್ನು ದೇಶಕ್ಕಾಗಿ ನಿರ್ವಹಿಸಲು ಇಷ್ಟಪಡುತ್ತೇನೆ" ಎಂದು ಮಾಧ್ಯಮ ಸಂವಾದದಲ್ಲಿ ಕೆಎಲ್ ರಾಹುಲ್ ಹೇಳಿದ್ದಾರೆ.

ಮಾದರಿಗೆ ಅನುಗುಣವಾಗಿ ಕ್ರಮಾಂಕ

ಮಾದರಿಗೆ ಅನುಗುಣವಾಗಿ ಕ್ರಮಾಂಕ

ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳು ಎದುರಾಯಿತು. ಅದಕ್ಕೆ ಕೆಎಲ್ ರಾಹುಲ್ ತಂಡ ಆಡುವ ಮಾದರಿಗಳಿಗೆ ಅನುಗುಣವಾಗಿ ಆಟದ ಕ್ರಮಾಂಕವನ್ನು ನಿರ್ವಹಿಸಲಾಗುತ್ತದೆ ಎಂದರು. ಆಸ್ಟ್ರೇಲಿಯಾ ಹಾಗೂ ಭಾರತ ಮೂರು ಏಕದಿನ ಮೂರು ಟಿ20 ಹಾಗೂ ನಾಲ್ಕು ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ.

Story first published: Wednesday, November 25, 2020, 18:37 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X