ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಬದಲಿಗೆ ಸ್ಟೀವ್ ಸ್ಮಿತ್ ಆರಿಸುತ್ತೇನೆ: ಮಾಜಿ ವೇಗಿ ಬ್ರೆಟ್ ಲೀ

Would pick Steve Smith over Virat Kohli says Brett Lee

ಸಿಡ್ನಿ, ಮೇ 26: ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ತಮ್ಮ ಬದುಕಿನಲ್ಲಿ ಏರಿಳಿತಗಳ ಮಧ್ಯೆಯೂ ವೃತ್ತಿ ಬದುಕಿನಲ್ಲಿ ಯಶಸ್ವಿ ಕಂಡಿದ್ದಾರೆ. ಹೀಗಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಇಬ್ಬರಲ್ಲಿ ಯಾರನ್ನು ಆರಿಸುತ್ತೀರಿ ಎಂದು ನನ್ನಲ್ಲಿ ಕೇಳಿದರೆ ನಾನು ಸ್ಮಿತ್ ಅವರನ್ನು ಆರಿಸುತ್ತೇನೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ.

ಈ ದಿನ ಅಂದು 1999: ಲಂಕಾ ವಿರುದ್ಧ ಗಂಗೂಲಿ, ದ್ರಾವಿಡ್ 312 ರನ್‌ಗಳ ವಿಶ್ವದಾಖಲೆಯ ಜೊತೆಯಾಟಈ ದಿನ ಅಂದು 1999: ಲಂಕಾ ವಿರುದ್ಧ ಗಂಗೂಲಿ, ದ್ರಾವಿಡ್ 312 ರನ್‌ಗಳ ವಿಶ್ವದಾಖಲೆಯ ಜೊತೆಯಾಟ

ಸ್ಟೀವ್ ಸ್ಮಿತ್ ಅವರನ್ನು ಶ್ಲಾಘಿಸಿದ ಬ್ರೆಟ್ ಲೀಗ್, ಮುಂದೊಂದು ದಿನ ಬಲಗೈ ಬ್ಯಾಟ್ಸ್‌ಮನ್ ಸ್ಮಿತ್, ಡಾನ್ ಬ್ರಾಡ್ಮನ್ ಅವರಷ್ಟೇ ಉತ್ತಮ ಆಟಗಾರರಾಗುತ್ತಾರೆ ಎಂದಿದ್ದಾರೆ. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್ ಸದ್ಯ ಅಗ್ರ ಶ್ರೇಯಾಂಕ ಆವರಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಜಿಂಬಾಬ್ವೆ ಮಾಜಿ ವೇಗಿ ಪೊಮ್ಮಿ ಎಂಬಂಗ್ವಾ ಜೊತೆ ಬ್ರೆಟ್ ಲೀ, ಇನ್‌ಸ್ಟಾಗ್ರಾಮ್ ಲೈವ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಇವರಲ್ಲಿ ಯಾರನ್ನು ಆರಿಸುತ್ತೀರಿ ಎಂಬ ಪ್ರಶ್ನೆಯನ್ನು ಲೀಯತ್ತ ಎಂಬಂಗ್ವಾ ಎಸೆದರು. ಇದಕ್ಕೆ ಉತ್ತರಿಸಿದ ಲೀ ತನ್ನ ಉತ್ತರಕ್ಕೆ ವಿವರಣೆಯನ್ನೂ ನೀಡಿದರು.

ಬೂಮ್ರಾ ಸವಾಲು ಎದುರಿಸಲು ಕಾತರನಾಗಿದ್ದೇನೆ ಎಂದ ಪಾಕ್ ಬ್ಯಾಟ್ಸ್‌ಮನ್ಬೂಮ್ರಾ ಸವಾಲು ಎದುರಿಸಲು ಕಾತರನಾಗಿದ್ದೇನೆ ಎಂದ ಪಾಕ್ ಬ್ಯಾಟ್ಸ್‌ಮನ್

'ನೋಡಿ, ಇಬ್ಬರಲ್ಲಿ ಒಬ್ಬರನ್ನು ಆರಿಸೋದು ತುಂಬಾ ಕಷ್ಟ. ಯಾಕೆಂದರೆ ಇಬ್ಬರಲ್ಲೂ ಹಲವು ಒಳ್ಳೆಯ ಗುಣಗಳಿವೆ. ಇಬ್ಬರ ಆಟವೂ ನನಗಿಷ್ಟ. ಬೌಲಿಂಗ್ ದೃಷ್ಟಿಕೋನದಲ್ಲಿ ಏನಾದರೂ ಇಬ್ಬರಲ್ಲಿ ನ್ಯೂನ್ಯತೆಯಿದೆಯೋ ನೋಡಿದೆ; ಇಬ್ಬರೂ ಒಳ್ಳೆಯ ಬ್ಯಾಟ್ಸ್‌ಮನ್‌ಗಳು,' ಎಂದು ಲೀ ಹೇಳಿದ್ದಾರೆ.

ODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾಘಟಿಗಳದ್ದೇ ಸಿಂಹಪಾಲುODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾಘಟಿಗಳದ್ದೇ ಸಿಂಹಪಾಲು

'ಕೊಹ್ಲಿ ತಾಂತ್ರಿಕವಾಗಿ ಗಮನ ಸೆಳೆಯುತ್ತಾರೆ, ಅವರು ವಿ ಮೂಲಕ ಹೊಡೆಯುತ್ತಾರೆ. ಅವರು ಟೀಮ್ ಇಂಡಿಯಾದ ಶ್ರೇಷ್ಠ ನಾಯಕ. ಐಪಿಎಲ್‌ನಲ್ಲಿ ಗೆಲ್ಲಲು ಬಯಸಿದ್ದಾರೆ ಎಂದು ನನಗನ್ನಿಸುತ್ತಿದೆ,' ಎಂದು ಬ್ರೆಟ್ ಲೀ ಹೇಳಿದರು. 2018ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಒಂದು ವರ್ಷದ ನಿಷೇಧಕ್ಕೀಡಾಗಿದ್ದರೂ, ನಿಷೇಧದ ಬಳಿಕ ಅಷ್ಟೇ ವೇಗವಾಗಿ ಕ್ರಿಕೆಟ್‌ನಲ್ಲಿ ಮಿಂಚತೊಡಗಿದ್ದಾರೆ. ಇದನ್ನೇ ಪರಿಗಣಿಸಿ ಲೀ, ಸ್ಮಿತ್ ಅವರನ್ನು ಆರಿಸಿದ್ದಾರೆ.

Story first published: Tuesday, May 26, 2020, 15:25 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X