ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌

ಧೋನಿ ಅಲ್ಲದೇ ಬೇರೆ ಯಾರೆ ಆಗಿದ್ರು ತಂಡದಿಂದ ಕಿತ್ತು ಹಾಕುತ್ತಿದ್ದರು..! | Oneindia Kannada
Wouldve been dropped by now in other teams: Watson

ಚೆನ್ನೈ, ಏಪ್ರಿಲ್‌ 24: ಅಮೋಘ 96 ರನ್‌ ಸಿಡಿಸಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಯ ತಂದುಕೊಟ್ಟ ಆರಂಭಿಕ ಬ್ಯಾಟ್ಸ್‌ಮನ್‌ ಶೇನ್‌ ವ್ಯಾಟ್ಸನ್‌, ಬೇರೆ ತಂಡದಲ್ಲಿ ತಮ್ಮ ಕಳಪೆ ಫಾರ್ಮ್‌ ಕಂಡು ಆಡುವ 11ರ ಬಳಗದಿಂದ ಇಷ್ಟೊತ್ತಿಗೆ ಕಿತ್ತೊಗೆಯುತ್ತಿದ್ದರು ಎಂದು ಅಭಿಪ್ರಾಪಟ್ಟಿದ್ದಾರೆ.

 ಐಪಿಎಲ್‌: ಸನ್‌ರೈಸರ್ಸ್‌ ವಿರುದ್ಧ ಸೂಪರ್‌ ಕಿಂಗ್ಸ್‌ಗೆ ಜಯ ಐಪಿಎಲ್‌: ಸನ್‌ರೈಸರ್ಸ್‌ ವಿರುದ್ಧ ಸೂಪರ್‌ ಕಿಂಗ್ಸ್‌ಗೆ ಜಯ

ಪ್ರಸಕ್ತ ಐಪಿಎಲ್‌ನಲ್ಲಿ ವ್ಯಾಟ್ಸನ್‌ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಆದರೆ, ಸನ್‌ರೈಸರ್ಸ್‌ ಎದುರು ಮಂಗಳವಾರ ನಡೆದ ಪಂದ್ಯದಲ್ಲಿ ದಿಟ್ಟ ಆಟವಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಮ್ಮ ಮೇಲೆ ಭರವಸೆಯಿಟ್ಟು ತಂಡದಲ್ಲಿ ಮುಂದುವರಿಯುವ ಅವಕಾಶ ನೀಡಿದ ನಾಯಕ ಎಂ.ಎಸ್‌ ಧೋನಿ ಮತ್ತು ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ಗೆ ಧನ್ಯವಾದ ತಿಳಿಸಿದ್ದಾರೆ.

ಐಪಿಎಲ್‌ 2019: ತಾಯ್ನಾಡಿಗೆ ಹಿಂದಿರುಗಿದ ಕೇನ್‌ ವಿಲಿಯಮ್ಸನ್‌!ಐಪಿಎಲ್‌ 2019: ತಾಯ್ನಾಡಿಗೆ ಹಿಂದಿರುಗಿದ ಕೇನ್‌ ವಿಲಿಯಮ್ಸನ್‌!

ಪಂದ್ಯದಲ್ಲಿ 176 ರನ್‌ಗಳ ಗುರಿ ಬೆನ್ನತ್ತಿದ ಸೂಪರ್‌ ಕಿಂಗ್ಸ್‌ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಸಂಪಾದಿಸಿತ್ತು. ವ್ಯಾಟ್ಸನ್‌, 53 ಎಸೆತಗಳಲ್ಲಿ 9 ಫೋರ್‌ ಮತ್ತು 6 ಸ್ಫೋಟಕ ಸಿಕ್ಸರ್‌ಗಳೊಂದಿಗೆ 96 ರನ್‌ಗಳನ್ನು ಸಿಡಿಸಿ ಶತಕ ವಂಚಿತರಾದರು.

ಮುಂದಿನ ವಿಶ್ವಕಪ್ ಭಾರತ ಗೆಲ್ಲಲಿದೆ- ದ್ರಾವಿಡ್ ಭವಿಷ್ಯಮುಂದಿನ ವಿಶ್ವಕಪ್ ಭಾರತ ಗೆಲ್ಲಲಿದೆ- ದ್ರಾವಿಡ್ ಭವಿಷ್ಯ

ಈ ಇನಿಂಗ್ಸ್‌ಗೂ ಮೊದಲು ಪ್ರಸಕ್ತ ಐಪಿಎಲ್‌ನಲ್ಲಿ ವ್ಯಾಟ್ಸನ್‌ ಅವರ ಶ್ರೇಷ್ಠ ಸ್ಕೋರ್‌ 44. ಹೀಗಾಗಿ ಇನ್ನೊಂದು ಪಂದ್ಯದಲ್ಲಿ ವ್ಯಾಟ್ಸನ್‌ ವಿಫಲರಾಗಿದ್ದರೂ ಅವರ ಸ್ಥಾನದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ ಸ್ಯಾಮ್‌ ಬಿಲ್ಲಿಂಗ್ಸ್‌ ಆಡುವ 11ರ ಬಳಗೆ ಸೇರಿಕೊಳ್ಳುತ್ತಿದ್ದರು.

"ನಾನು ಆಡಿರುವ ಉಳಿದೆಲ್ಲಾ ತಂಡಗಳಲ್ಲಿ ನನ್ನ ಈ ರೀತಿಯ ಕಳಪೆ ಫಾರ್ಮ್‌ಗೆ ಇಷ್ಟೊತ್ತಿಗೆ ಆಡುವ 11ರ ಬಳಗದಿಂದ ಹೊರಗಿರುತ್ತಿದ್ದರು. ಆದರೆ, ಸೂಪರ್ ಕಿಂಗ್ಸ್‌ ನನ್ನ ಮೇಲೆ ಭರವಸೆ ಕಾಯ್ದುಕೊಂಡಿದೆ,'' ಎಂದು 37 ವರ್ಷದ ಆಲ್‌ರೌಂಡರ್‌ ವ್ಯಾಟ್ಸನ್‌ ಹೇಳಿದ್ದಾರೆ.

ಇದೇ ವೇಳೆ ಧೋನಿ ಕೂಡ ಆಸ್ಟ್ರೇಲಿಯಾದ ಹಿರಿಯ ಆಲ್‌ರೌಂಡರ್‌ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

"ಪ್ರತಿಯೊಬ್ಬರಿಗೂ ಒಂದಷ್ಟು ಪಂದ್ಯಗಳನ್ನು ನೀಡಬೇಕು. ವ್ಯಾಟ್ಸನ್‌ ನಮ್ಮ ಪಾಲಿಗೆ ಮ್ಯಾಚ್‌ ವಿನ್ನರ್‌. ನೆಟ್ಸ್‌ನಲ್ಲಿ ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಕೊಂಚ ಪರದಾಟ ನಡೆಸಿದರೂ ಈವರೆಗೆ ಆಡಿರುವ ಎಲ್ಲ ಪಂದ್ಯಗಳಲ್ಲಿ ಅವರು ಉತ್ತಮ ಹೊಡೆತಗಳನ್ನಾಡುತ್ತಿದ್ದರು. ಹೀಗಾಗಿ ಅವರಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ನೀಡುವ ಕಡೆಗೆ ತಂಡ ಆಲೋಚಿಸಿತ್ತು,'' ಎಂದು ಧೋನಿ ಹೇಳಿದ್ದಾರೆ.

Story first published: Wednesday, April 24, 2019, 16:50 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X