ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WPL Auction 2023: ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದ ಐವರು ಆಟಗಾರರು

WPL 2023: Know About 5 Players Who Can Get Big Amount In WPL Auction

ಮಹಿಳಾ ಪ್ರೀಮಿಯರ್ ಲೀಗ್‌ (WPL) ಮೊದಲನೇ ಆವೃತ್ತಿಗಾಗಿ ಸಿದ್ಧತೆ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್‌ನ 5 ತಂಡಗಳನ್ನು ಹರಾಜು ಮಾಡಿದೆ. ಐದು ಫ್ರಾಂಚೈಸಿಗಳ ಮಾರಾಟದಿಂದ ಬಿಸಿಸಿಐ 4,670 ಕೋಟಿ ರುಪಾಯಿ ಗಳಿಸಿದೆ.

ಅದಾನಿ ಸ್ಪೋರ್ಟ್ಸ್‌ಲೈನ್ ಪ್ರೈವೇಟ್ ಲಿಮಿಟೆಡ್ (ಅಹಮದಾಬಾದ್), ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಮುಂಬೈ), ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ದೆಹಲಿ), ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ (ಬೆಂಗಳೂರು), ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (ಲಕ್ನೋ) ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ.

Ind Vs Aus Test: ಟೆಸ್ಟ್ ಸರಣಿಗೆ ತಯಾರಿ: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್Ind Vs Aus Test: ಟೆಸ್ಟ್ ಸರಣಿಗೆ ತಯಾರಿ: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್

5 ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ತಂಡಗಳ ಹರಾಜಿನ ಬಳಿಕ ಬಿಸಿಸಿಐ ಫೆಬ್ರವರಿ 2ನೇ ವಾರ ಆಟಗಾರರ ಹರಾಜಿಗೆ ಸಿದ್ಧತೆ ಮಾಡಿಕೊಂಡಿದೆ. ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ತಂಡಗಳು ಲೆಕ್ಕಾಚಾರ ಆರಂಭಿಸಿದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಲವು ಆಟಗಾರರ ಮೇಲೆ ಈಗಾಗಲೇ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಪ್ರತಿ ತಂಡದಲ್ಲಿ 15-18 ಆಟಗಾರರನ್ನು ಹೊಂದಲು ಅವಕಾಶವಿದೆ. ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದದ ಆಟಗಾರ್ತಿಯರು ಇವರು.

ಯಾವ ತಂಡ ಸೇರ್ತಾರೆ ಸ್ಮೃತಿ ಮಂದಾನ

ಯಾವ ತಂಡ ಸೇರ್ತಾರೆ ಸ್ಮೃತಿ ಮಂದಾನ

ಭಾರತದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಸದ್ಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದವರಾಗಿದ್ದಾರೆ. ಇವರನ್ನು ತಂಡಕ್ಕೆ ಸೇರಿಸಿಕೊಂಡರೆ ತಂಡದ ಸ್ಟಾರ್ ಮೌಲ್ಯ ಕೂಡ ಹೆಚ್ಚಾಗುತ್ತದೆ. ಸ್ಮೃತಿ ಮಂದಾನ ಭಾರತ ತಂಡದ ಉಪನಾಯಕಿಯಾಗಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ನಾಯಕಿ ಸ್ಥಾನಕ್ಕಾಗಿ ಮಂದಾನರನ್ನು ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿವೆ.

ಇದುವರೆಗೂ 100 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಮಂದಾನ, 127 ಸ್ಟ್ರೈಕ್‌ರೇಟ್‌ನೊಂದಿಗೆ 2,474 ರನ್ ಗಳಿಸಿದ್ದಾರೆ. ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಕೂಡ ಆಡಿರುವ ಮಂದಾನ 132 ಸ್ಟ್ರೈಕ್‌ರೇಟ್‌ನಲ್ಲಿ 784 ರನ್ ಗಳಿಸಿದ್ದಾರೆ.

 ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್

ಭಾರತ ತಂಡದ ನಾಯಕಿಯಾಗಿರುವ ಹರ್ಮನ್‌ಪ್ರೀತ್ ಕೌರ್ ಕೂಡ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅತ್ಯುತ್ತಮ ಬ್ಯಾಟರ್ ಆಗಿರುವ ಅವರು ಭಾರತ ತಂಡವನ್ನು ಮುನ್ನಡೆಸುವ ಸಾಕಷ್ಟು ಅನುಭವ ಹೊಂದಿದ್ದು, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಆಕೆ ಸೇರುವ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

2017ರಲ್ಲಿ ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 171 ರನ್ ಗಳಿಸಿದ್ದು ಅವರ ಐತಿಹಾಸಿಕ ಇನ್ನಿಂಗ್ಸ್ ಆಗಿದೆ. ಅತ್ಯುತ್ತಮ ಫೀಲ್ಡರ್ ಕೂಡ ಆಗಿರುವ ಹರ್ಮನ್‌ಪ್ರೀತ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ನಿಶ್ಚಿತ.

ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್

ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್

ಸದ್ಯ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ಉತ್ತಮ ಆಲ್‌ರೌಂಡರ್‌ಗಳಲ್ಲಿ ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್ ಕೂಡ ಒಬ್ಬರು. ಪವರ್ ಹಿಟ್ಟರ್ ಕೂಡ ಆಗಿರುವ ಗಾರ್ಡ್ನರ್ ತನ್ನ ಸ್ಫೋಟಕ ಇನ್ನಿಂಗ್ಸ್‌ಗಳಿಂದ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 4 ಓವರ್ ಸಂಪೂರ್ಣವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

67 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 1,066 ರನ್‌ ಗಳಿಸಿದ್ದಾರೆ. 135 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿರುವ ಅವರು 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 43 ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅವರ ಎಕಾನಮಿ 6.07 ಆಗಿದೆ.

ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರ್ತಿ ಗಾರ್ಡ್ನರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಯೋಜನೆ ರೂಪಿಸಿರುತ್ತವೆ.

ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಸೋಫಿ

ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಸೋಫಿ

ಇಂಗ್ಲೆಂಡ್‌ನ ಎಡಗೈ ಸ್ಪಿನ್‌ ಬೌಲಿಂಗ್ ಆಲ್‌ರೌಂಡರ್ ಸೋಫಿ ಎಕ್ಲೆಸ್ಟೋನ್ ಕೂಡ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ಪರವಾಗಿ 65 ಪಂದ್ಯಗಳನ್ನಾಡಿರುವ ಅವರು, 16.48 ಸ್ಟ್ರೈಕ್‌ರೇಟ್‌ನೊಂದಿಗೆ 86 ವಿಕೆಟ್ ಪಡೆದಿದ್ದಾರೆ.

ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು, ಉತ್ತಮ ಹಿಟ್ಟರ್ ಆಗಿದ್ದಾರೆ. ಭಾರತದ ಸ್ಪಿನ್ ಪಿಚ್‌ಗಳಲ್ಲಿ ಅವರು ಮತ್ತಷ್ಟು ಮಾರಕವಾಗು ಸಾಧ್ಯತೆ ಇರುವುದರಿಂದ ಹರಾಜಿನಲ್ಲಿ ಅವರಿಗೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ.

ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ

ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ

ಆಫ್‌ ಬ್ರೇಕ್‌ ಬೌಲರ್ ದೀಪ್ತಿ ಶರ್ಮಾ ತನ್ನ ಕೇರಂ ಬಾಲ್ ಮತ್ತು ಆರ್ಮ್ ಬಾಲ್‌ನಿಂದ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ಅವರು ಉತ್ತಮ ಬ್ಯಾಟರ್ ಅಲ್ಲ ಎನ್ನುವ ಅಪವಾದ ಇತ್ತಾದರೂ, ಇತ್ತೀಚಿನ ದಿನಗಳಲ್ಲಿ ಅವರ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ಭಾರತಕ್ಕಾಗಿ 84 ಟಿ20 ಪಂದ್ಯಗಳನ್ನಾಡಿರುವ ಅವರು, 6.14 ಎಕಾನಮಿ ಮತ್ತು 19.34 ಸರಾಸರಿಯೊಂದಿಗೆ 92 ವಿಕೆಟ್ ಪಡೆದಿದ್ದಾರೆ. ಭಾರತ ತಂಡಕ್ಕಾಗಿ ಆಡುವಾಗ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ಉತ್ತಮ ಫಿನಿಶರ್ ಕೂಡ ಆಗುವ ಸಾಮರ್ಥ್ಯ ಹೊಂದಿದ್ದಾರೆ.

Story first published: Tuesday, January 31, 2023, 17:49 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X