ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: ಸಹಾ ಬದಲು ಮೈದಾನಕ್ಕಿಳಿದ ರಿಷಬ್ ಪಂತ್‌!

Wriddhiman Saha has been replaced by Rishabh Pant

ರಾಂಚಿ, ಅಕ್ಟೋಬರ್ 21: ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಮೈದಾನಕ್ಕಿಳಿದಿದ್ದಾರೆ. ಇತ್ತಂಡಗಳ 3ನೇ ಟೆಸ್ಟ್‌ನಲ್ಲಿ ಪಂತ್‌ ಭಾರತದ ಪ್ಲೇಯಿಂಗ್ XI ಪರ ಅಂಗಣಕ್ಕಿಳಿದಿದ್ದಾರೆ.

ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!

ಸೋಮವಾರ (ಅಕ್ಟೋಬರ್ 21) ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ವೇಳೆ ಆರ್ ಅಶ್ವಿನ್ ಓವರ್‌ನಲ್ಲಿ ವೃದ್ಧಿಮಾನ್ ಸಹಾ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸಹಾ ಬದಲಿಗೆ ಪಂತ್, ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅತ್ತ ಆಫ್ರಿಕಾದ ಓಪನರ್ ಡೀನ್ ಎಲ್ಗರ್ ಕೂಡ ಗಾಯಾಳಾಗಿ ತಂಡದಿಂದ ಹೊರ ಬಿದ್ದಿದ್ದು, ಥ್ಯೂನಿಸ್ ಡಿ ಬ್ರೂಯಿನ್‌ ತಂಡ ಸೇರಿಕೊಂಡಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46115

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ರೋಹಿತ್ ಶರ್ಮಾ 212, ಅಜಿಂಕ್ಯ ರಹಾನೆ 115, ವಿರಾಟ್ ಕೊಹ್ಲಿ 12, ರವೀಂದ್ರ ಜಡೇಜಾ 51, ವೃದ್ಧಿಮಾನ್ ಸಹಾ 24, ಉಮೇಶ್ ಯಾದವ್ 31, ರವಿಚಂದ್ರನ್ ಅಶ್ವಿನ್ 14 ರನ್‌ನೊಂದಿಗೆ 116.3 ಓವರ್‌ಗೆ 9 ವಿಕೆಟ್‌ ಕಳೆದು 497 ರನ್ ಪೇರಿಸುವುದರೊಂದಿಗೆ ಡಿಕ್ಲೇರ್ ಘೋಷಿಸಿತ್ತು.

10 ಎಸೆತಗಳಲ್ಲಿ 5 ಸಿಕ್ಸ್‌ ಚಚ್ಚಿದ ವೇಗಿ ಉಮೇಶ್ ಯಾದವ್: ವೈರಲ್ ವೀಡಿಯೋ10 ಎಸೆತಗಳಲ್ಲಿ 5 ಸಿಕ್ಸ್‌ ಚಚ್ಚಿದ ವೇಗಿ ಉಮೇಶ್ ಯಾದವ್: ವೈರಲ್ ವೀಡಿಯೋ

ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ 2, ಉಮೇಶ್ ಯಾದವ್ 3, ಶಹಬಾಝ್ ನದೀಮ್ 2, ರವೀಂದ್ರ ಜಡೇಜಾ 2 ವಿಕೆಟ್‌ ಪಡೆದು ಕಾಡಿದ್ದರಿಂದ ಪ್ರವಾಸಿಗರು 162 ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ದಾರೆ. ಕೊಹ್ಲಿ ಪಡೆ, ದಕ್ಷಿಣ ಆಫ್ರಿಕಾಕ್ಕೆ ಫಾಲೋ ಆನ್ ನೀಡಿದ್ದು, ದ್ವಿತೀಯ ಇನ್ನಿಂಗ್ಸ್‌ನಲ್ಲೂ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ ತೋರಿಸಿಕೊಂಡಿದ್ದು, ಸೋಲಿನಂಚಿನಲ್ಲಿದೆ.

Story first published: Monday, October 21, 2019, 19:31 [IST]
Other articles published on Oct 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X