ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: 1ನೇ ಟೆಸ್ಟ್‌ಗೆ ಪಂತ್‌ ಬದಲು ಸಹಾಗೆ ಸ್ಥಾನ?!

ತಂಡದಿಂದ ಪಂತ್ ಗೆ ಕೋಕ್ ನೀಡಲು ನಿರ್ಧಾರ..? | Oneindia Kannada
Wriddhiman Saha may get the nod ahead of Rishabh Pant in first Test at Vizag

ನವದೆಹಲಿ, ಸೆಪ್ಟೆಂಬರ್ 26: ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 4, 19 ರನ್ ಗಳಿಸಿದ್ದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಅವಕಾಶಗಳು ದುಬಾರಿಯಾಗುವುದರಲ್ಲಿದೆ.

ICC T20I rankingನಲ್ಲಿ ಜಿಗಿತ ಕಂಡ ವಿರಾಟ್ ಕೊಹ್ಲಿ, ಶಿಖರ್ ಧವನ್ICC T20I rankingನಲ್ಲಿ ಜಿಗಿತ ಕಂಡ ವಿರಾಟ್ ಕೊಹ್ಲಿ, ಶಿಖರ್ ಧವನ್

ಇತ್ತಂಡಗಳ ಮೊದಲ ಟೆಸ್ಟ್‌ನಲ್ಲಿ 21ರ ಹರೆಯದ ರಿಷಬ್ ಪಂತ್‌ ಬದಲು ವೃದ್ಧಿಮಾನ್ ಸಹಾ ಅವರಿಗೆ ಅವಕಾಶ ಸಿಗಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ. ಮೊದಲ ಟೆಸ್ಟ್ ಪಂದ್ಯ ವಿಶಾಖಪಟ್ಟಣದಲ್ಲಿ ಅಕ್ಟೋಬರ್ 2ರಂದು ಆರಂಭವಾಗಲಿದೆ.

ಗುದ್ದಾಡುತ್ತ ರಿಂಗ್‌ನಲ್ಲೇ ಅಸುನೀಗಿದ ಬಲ್ಗೇರಿಯನ್ ಬಾಕ್ಸರ್: ವೈರಲ್ ವಿಡಿಯೋಗುದ್ದಾಡುತ್ತ ರಿಂಗ್‌ನಲ್ಲೇ ಅಸುನೀಗಿದ ಬಲ್ಗೇರಿಯನ್ ಬಾಕ್ಸರ್: ವೈರಲ್ ವಿಡಿಯೋ

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತದ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನಾಡಲಿದೆ. 3 ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲಗೊಂಡಿದೆ.

ಸಹಾಗೆ ಅವಕಾಶ

ಸಹಾಗೆ ಅವಕಾಶ

'ಆರಂಭಿಕ ಟೆಸ್ಟ್‌ನಲ್ಲಿ ರಿಷಬ್ ಪಂತ್‌ಗೆ ಕೊನೆಯ ಅವಕಾಶ ನೀಡಲು ಆಯ್ಕೆ ಸಮಿತಿಗೆ ಮನಸ್ಸಿದೆ. ಆದರೆ ತಂಡ ನಿರ್ವಹಣಾ ಸಮಿತಿ (ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ) ಈ ಬಾರಿ ವೃದ್ಧಿಮಾನ್ ಸಹಾ ಅವರನ್ನು ಸರಣಿ ಆರಂಭದಿಂದಲೂ ಆಡಿಸಲು ಬಯಸಿದೆ,' ಎಂದು ಮೂಲ ತಿಳಿಸಿದೆ.

ಪಂತ್‌ಗೆ ಹಿನ್ನಡೆ

ಪಂತ್‌ಗೆ ಹಿನ್ನಡೆ

ವೆಸ್ಟ್ ಇಂಡೀಸ್‌ ಪ್ರವಾಸ ಸರಣಿ ಮುಗಿಸಿ ಭಾರತ ತಂಡ ಅಲ್ಲಿಂದ ಹೊರಡುವಾಗ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್‌ಗೆ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಆಗಿ ಕಾಣಿಸಿದ್ದರು. ಆದರೆ ಈಗ ಪಂತ್‌ ಬಗೆಗಿನ ಆಯ್ಕೆ ಸಮಿತಿ ನಿಲುವು ಬದಲಾಗಿದೆ.

ಪಂತ್ ಅಪ್ರತಿಮ ಸಾಧನೆ

ಪಂತ್ ಅಪ್ರತಿಮ ಸಾಧನೆ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಿಂದ ಕೈಬಿಡಲಾಗುತ್ತದೆ ಎನ್ನಲಾಗುತ್ತಿರುವ ಪಂತ್ ಟೆಸ್ಟ್‌ನಲ್ಲಿ ಅಪರೂಪದ ಸಾಧಕನೂ ಹೌದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಏಕಮಾತ್ರ ಭಾರತೀಯ ವಿಕೆಟ್ ಕೀಪರ್ ಪಂತ್ ಎಂಬ ದಾಖಲೆ ಪಂತ್ ಹೆಸರಿನಲ್ಲಿದೆ.

ಪ್ರಭಾವಶಾಲಿಯಲ್ಲ

ಪ್ರಭಾವಶಾಲಿಯಲ್ಲ

'ಪಂತ್‌ ಸಮಸ್ಯೆಯೇನೆಂದರೆ ಅವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ವಿಕೆಟ್‌ ಕಾವಲು ಕಾಯುವಲ್ಲಿ ಅವರ ವಿಶ್ವಾಸವೂ ಕುಗ್ಗುತ್ತಿದೆ. ಅವರ ಡಿಆರ್‌ಎಸ್ ಸೇವೆಯೂ ಗಮನಾರ್ಹವೇನಿಲ್ಲ. ಭಾರತದ ಪರಿಸ್ಥಿತಿಯಲ್ಲಿ ವಿಕೆಟ್‌ ಪಡೆಯಲು ಕೆಲವು ಸಲ ಪರದಾಡುತ್ತಾರೆ. ಇವೆಲ್ಲದ್ದಕ್ಕೆ ಹೋಲಿಸಿದರೆ ಸಹ ಉತ್ತಮ ಆಟಗಾರ,' ಎಂದು ಮೂಲ ಹೇಳಿದೆ.

Story first published: Thursday, September 26, 2019, 15:42 [IST]
Other articles published on Sep 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X