ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ 2ನೇ ಟೆಸ್ಟ್‌ಗೆ ಪಂತ್, ಸಹರಲ್ಲಿ ಕಿರ್ಮಾನಿ ಆಯ್ಕೆ ಯಾರು ಗೊತ್ತಾ?!

Wriddhiman Saha or Rishabh Pant? Syed Kirmani names his pick for 2nd Test

ನವದೆಹಲಿ, ಆಗಸ್ಟ್ 27: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು 318 ಬೃಹತ್ ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ದ್ವಿತೀಯ ಟೆಸ್ಟ್‌ಗೆ ರಿಷಬ್ ಪಂತ್ ಮತ್ತು ವೃದ್ಧಿಮಾನ್ ಸಹ ಇವರಲ್ಲಿ ಯಾರನ್ನು ಮೈದಾನಕ್ಕಿಳಿಸಬೇಕು ಎಂಬ ಬಗ್ಗೆ ಭಾರತದ ಶ್ರೇಷ್ಠ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿ ಮಾತನಾಡಿದ್ದಾರೆ.

ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!

ಭಾರತ-ವಿಂಡೀಸ್ ಮೊದಲ ಟೆಸ್ಟ್‌ನಲ್ಲಿ ವೃದ್ಧಿಮಾನ್ ಸಾಹ ಬದಲಾಗಿ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಪಂತ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಪಂತ್‌ ಬದಲು ಸಹಗೆ ಅವಕಾಶ ನೀಡಿದರೆ ಒಳ್ಳೆಯದು. ಯಾಕೆಂದರೆ ಪಂತ್‌ ಕಲಿಯೋದು ಇನ್ನೂ ಸಾಕಷ್ಟಿದೆ ಎಂದು ಕಿರ್ಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಸಯ್ಯದ್ ಕಿರ್ಮಾನಿ, 'ಪಂತ್ ಇನ್ನೂ ಚಿಕ್ಕವನು. ಆತನೊಂದು ದೇವರ ವರ. ಆದರೆ ಪಂತ್ ಕಲಿಯಲು ಇನ್ನೂ ಸಾಕಷ್ಟಿದೆ. ಮೈದಾನದಲ್ಲಿ ಕೀಪಿಂಗ್ ಮಾಡೋದು ಸುಲಭವಿಲ್ಲ. ಎರಡು ಗ್ಲೌಸ್ ಧರಿಸಿ ಎಲ್ಲರೂ ಕೀಪಿಂಗ್ ಮಾಡಲು ಸಾಧ್ಯವಿಲ್ಲ,' ಎಂದು ಕಿರ್ಮಾನಿ ಹೇಳಿದ್ದಾರೆ.

ವಿಂಡೀಸ್ ಮಣಿಸಿ ಟೀಂ ಇಂಡಿಯಾ, ಕೊಹ್ಲಿ ಸಾಧಿಸಿದ ದಾಖಲೆಗಳು ಹಲವುವಿಂಡೀಸ್ ಮಣಿಸಿ ಟೀಂ ಇಂಡಿಯಾ, ಕೊಹ್ಲಿ ಸಾಧಿಸಿದ ದಾಖಲೆಗಳು ಹಲವು

ಒಟ್ಟು 88 ಟೆಸ್ಟ್ ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಿದ್ದ ಕಿರ್ಮಾನಿ, 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದ ಟೀಮ್ ಇಂಡಿಯಾದಲ್ಲಿ ಆಡಿದ್ದವರು. ಗಾಯದ ಕಾರಣದಿಂದ ದೀರ್ಘಕಾಲ ತಂಡದಿಂದ ಹೊರಗಿದ್ದ ಸಾಹ ಅವರಿಗೂ ಪಂತ್ ಅವರಷ್ಟೇ ಅವಕಾಶ ನೀಡಬೇಕು ಎಂದು ಸೈಯ್ಯದ್ ಅಭಿಪ್ರಾಯಿಸಿದ್ದಾರೆ.

Story first published: Wednesday, August 28, 2019, 16:17 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X