ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!

WTC 2021-23: Here is how India can still qualify for Wotld test championship 2021-23 final match

ಟೀಮ್ ಇಂಡಿಯಾ ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಎಡ್ಜ್ ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಸೋಲುವುದರ ಮೂಲಕ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ತನ್ನ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ.

ಕೊಹ್ಲಿ ಕೊನೆ ಶತಕದ ಬಳಿಕ ಆಡಿರುವ ಪಂದ್ಯ, ಗಳಿಸಿದ ರನ್ ಮತ್ತು ಅರ್ಧಶತಕಗಳು ಎಷ್ಟು?ಕೊಹ್ಲಿ ಕೊನೆ ಶತಕದ ಬಳಿಕ ಆಡಿರುವ ಪಂದ್ಯ, ಗಳಿಸಿದ ರನ್ ಮತ್ತು ಅರ್ಧಶತಕಗಳು ಎಷ್ಟು?

ಕಳೆದ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ನ್ಯೂಜಿಲೆಂಡ್ ವಿರುದ್ಧ ಸೋತು ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಅಂತಿಮ ಹಂತದಲ್ಲಿ ಕೈ ತಪ್ಪಿಸಿಕೊಂಡಿದ್ದ ಟೀಮ್ ಇಂಡಿಯಾಗೆ ಈ ಬಾರಿ ಫೈನಲ್ ಪ್ರವೇಶಿಸುವ ಹಾದಿ ಸುಲಭವಾಗಿಲ್ಲ. ಇಂಗ್ಲೆಂಡ್ ವಿರುದ್ಧ ಸೋಲುವುದರ ಮೂಲಕ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಕುಸಿತ ಕಂಡಿರುವ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳ ಹಂತಕ್ಕೆ ತಲುಪಿದೆ.

6 ವರ್ಷಗಳ ಬಳಿಕ ಟೆಸ್ಟ್ ರ್‍ಯಾಂಕಿಂಗ್‌ನ ಟಾಪ್ 10 ಪಟ್ಟಿಯಿಂದ ಹೊರಬಿದ್ದ ಕೊಹ್ಲಿ! ದೊಡ್ಡ ಏರಿಕೆ ಕಂಡ ಪಂತ್6 ವರ್ಷಗಳ ಬಳಿಕ ಟೆಸ್ಟ್ ರ್‍ಯಾಂಕಿಂಗ್‌ನ ಟಾಪ್ 10 ಪಟ್ಟಿಯಿಂದ ಹೊರಬಿದ್ದ ಕೊಹ್ಲಿ! ದೊಡ್ಡ ಏರಿಕೆ ಕಂಡ ಪಂತ್

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋಲುವುದರ ಜತೆಗೆ 2 ಅಂಕಗಳನ್ನು ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ದಂಡವಾಗಿ ಕಳೆದುಕೊಂಡಿರುವ ಟೀಮ್ ಇಂಡಿಯಾ 75 ಅಂಕಗಳು ಹಾಗೂ 52.08ರಷ್ಟು ಗೆಲುವಿನ ಶೇಕಡಾಂಶವನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 52.38ರಷ್ಟು ಗೆಲುವಿನ ಶೇಕಡಾಂಶ ಹೊಂದಿರುವ ಪಾಕಿಸ್ತಾನ ತೃತೀಯ ಸ್ಥಾನದಲ್ಲಿದ್ದರೆ, 71.43ರಷ್ಟು ಗೆಲುವಿನ ಶೇಕಡಾಂಶ ಹೊಂದಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನ ಹಾಗೂ 77.78ರಷ್ಟು ಶೇಕಡಾಂಶವನ್ನು ಹೊಂದಿರುವ ಆಸ್ಟ್ರೇಲಿಯ ಅಗ್ರ ಸ್ಥಾನದಲ್ಲಿದೆ. ಹೀಗೆ ಸದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಾಪ್ 2 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು ಟೀಮ್ ಇಂಡಿಯಾ ಯಶಸ್ವಿಯಾಗಿ ಫೈನಲ್ ಪ್ರವೇಶಿಸಲು ಅರ್ಹತೆ ಗಿಟ್ಟಿಸಿಕೊಳ್ಳಬೇಕೆಂದರೆ, ಈ ಕೆಳಕಂಡ ಮಾರ್ಗ ಮಾತ್ರ ಬಾಕಿ ಉಳಿದಿದೆ.

ಉಳಿದ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕು

ಉಳಿದ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕು

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಮುಕ್ತಾಯಗೊಳಿಸಿರುವ ಟೀಮ್ ಇಂಡಿಯಾ ತನ್ನ ಮುಂದಿನ ಟೆಸ್ಟ್ ಸರಣಿಗಳಲ್ಲಿ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳು ಹಾಗೂ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳನ್ನು ಆಡಲಿದೆ. ಟೀಮ್ ಇಂಡಿಯಾ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಈ ಎಲ್ಲಾ 6 ಪಂದ್ಯಗಳಲ್ಲಿಯೂ ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಅಂದರೆ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ವೈಟ್ ವಾಷ್ ಮಾಡಲೇಬೇಕಿದೆ. ಹೀಗೆ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಯಾವುದೇ ಪೆನಾಲ್ಟಿ ಅಂಕಗಳನ್ನು ಕಳೆದುಕೊಳ್ಳದೇ ಇದ್ದರೆ ಟೀಮ್ ಇಂಡಿಯಾ ಗೆಲುವಿನ ಶೇಕಡಾಂಶವು 68.05 ಆಗಲಿದ್ದು, ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಲು ಸಹಕಾರಿಯಾಗಲಿದೆ.

ಆಸ್ಟ್ರೇಲಿಯಾ ಸೋಲಬೇಕು

ಆಸ್ಟ್ರೇಲಿಯಾ ಸೋಲಬೇಕು

ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಡಲಿದ್ದು, ಟೀಮ್ ಇಂಡಿಯಾ ಈ ಎಲ್ಲಾ ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾಗೆ ಸೋಲುಣಿಸುವುದರ ಜತೆಗೆ, ಆಸ್ಟ್ರೇಲಿಯಾ ಉಳಿದ ತನ್ನ 6 ಟೆಸ್ಟ್ ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯವನ್ನು ಡ್ರಾ ಮಾಡಿಕೊಂಡರೆ ಟೀಂ ಇಂಡಿಯಾ ಯಶಸ್ವಿಯಾಗಿ ಫೈನಲ್ ತಲುಪಲಿದೆ.

MS Dhoni turns 41 ಬ್ರಿಟನ್ ನಲ್ಲಿ ಧೋನಿ ಹುಟ್ಟು ಹಬ್ಬ !! | *Cricket | Oneindia Kannada
ದಕ್ಷಿಣ ಆಫ್ರಿಕಾದಿಂದಲೂ ಸಮಸ್ಯೆ

ದಕ್ಷಿಣ ಆಫ್ರಿಕಾದಿಂದಲೂ ಸಮಸ್ಯೆ

ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವುದಕ್ಕೆ ದೊಡ್ಡಮಟ್ಟದ ಅಡ್ಡಿಯನ್ನುಂಟುಮಾಡುವ ತಂಡವಾಗಿ ಪರಿಣಮಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತನ್ನ ಮುಂದಿನ ಟೆಸ್ಟ್ ಸರಣಿಗಳಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸುವುದರಿಂದ ಫೈನಲ್ ಪ್ರವೇಶಿಸುವ ದಕ್ಷಿಣ ಆಫ್ರಿಕಾದ ಹಾದಿ ಸುಲಭವಾಗಿಲ್ಲ. ಟೀಮ್ ಇಂಡಿಯಾ ತನ್ನ ಉಳಿದ 6 ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆದ್ದು, ದಕ್ಷಿಣ ಆಫ್ರಿಕಾ ತನ್ನ ಮುಂದಿನ 8 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಸೋಲಲೇಬೇಕಿದೆ. ಹೀಗಾದರೆ ಟೀಂ ಇಂಡಿಯಾ ಯಶಸ್ವಿಯಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ.

Story first published: Thursday, July 7, 2022, 15:31 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X