ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ದ್ವಿತೀಯ ಆವೃತ್ತಿ: 14 ಅಂಕ ಪಡೆದ ಭಾರತಕ್ಕೆ ಎರಡನೇ ಸ್ಥಾನ, ಕೇವಲ 12 ಅಂಕ ಪಡೆದ ತಂಡಕ್ಕೆ ಪ್ರಥಮ ಸ್ಥಾನ!

WTC 2021-23: This is how points table looks like after Indias victory against England at Lords

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮೊದಲನೇ ಆವೃತ್ತಿಯಲ್ಲಿ ಯಶಸ್ವಿಯಾಗಿ ಲೀಗ್ ಹಂತದ ಪಂದ್ಯಗಳನ್ನು ಗೆಲ್ಲುವುದರ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಪಂದ್ಯವನ್ನು ಪ್ರವೇಶಿಸಿದ್ದವು. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇತ್ತೀಚೆಗಷ್ಟೇ ಇಂಗ್ಲೆಂಡ್ ನೆಲದಲ್ಲಿ ನಡೆಯಿತು. ಮಳೆರಾಯನ ಅಡ್ಡಿಯ ನಡುವೆಯೂ ಫಲಿತಾಂಶದೊಂದಿಗೆ ಅಂತ್ಯಕಂಡ ಮೊದಲನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಜಯ ಸಾಧಿಸುವುದರ ಮೂಲಕ ನೂತನ ಇತಿಹಾಸ ನಿರ್ಮಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಇತ್ತ ಮೊದಲನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯ ಕೊನೆಯ ಹಂತದಲ್ಲಿ ಮುಗ್ಗರಿಸಿದ ವಿರಾಟ್ ಕೊಹ್ಲಿ ಪಡೆ ಇದೀಗ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯ ಉದ್ಘಾಟನಾ ಸರಣಿಯಲ್ಲಿ ಭಾಗವಹಿಸಿದೆ. ಹೌದು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಟೌಡಿ ಟೆಸ್ಟ್ ಸರಣಿಯ ಮೂಲಕ ಆರಂಭವಾಗಿದೆ. ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳು ನಡೆಯಲಿದ್ದು ಈಗಾಗಲೇ 2 ಟೆಸ್ಟ್ ಪಂದ್ಯಗಳು ಮುಗಿದಿವೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯ ಮಳೆಗೆ ಆಹುತಿಯಾಗಿ ಯಾವುದೇ ಫಲಿತಾಂಶವಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿತು. ಇನ್ನು ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.

ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಜೊತೆ ಈ ತಂಡ ಫೈನಲ್ ಪ್ರವೇಶಿಸಲಿದೆ ಎಂದ ದಿನೇಶ್ ಕಾರ್ತಿಕ್ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಜೊತೆ ಈ ತಂಡ ಫೈನಲ್ ಪ್ರವೇಶಿಸಲಿದೆ ಎಂದ ದಿನೇಶ್ ಕಾರ್ತಿಕ್

ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಹಂಚಿಕೆಯ ಪ್ರಕಾರ 12 ಅಂಕಗಳನ್ನು ಪಡೆದುಕೊಂಡಿದೆ. ಹಾಗೂ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಡ್ರಾ ಆದ ಕಾರಣ ಇಂಗ್ಲೆಂಡ್ ಮತ್ತು ಭಾರತ ತಂಡಕ್ಕೆ ತಲಾ 4 ಅಂಕಗಳನ್ನು ನೀಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಎರಡೂ ತಂಡಗಳೂ ಸಹ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ತಲಾ 2 ಅಂಕಗಳನ್ನು ಐಸಿಸಿ ನಿಯಮದ ಪ್ರಕಾರ ಕಡಿತಗೊಳಿಸಲಾಗಿದೆ. ಹೀಗಾಗಿ ಟೀಮ್ ಇಂಡಿಯಾ 2 ಟೆಸ್ಟ್ ಪಂದ್ಯಗಳಿಂದ ಒಟ್ಟು 14 ಅಂಕಗಳನ್ನು ಪಡೆದರೂ ಸಹ ಅಂಕಪಟ್ಟಿಯಲ್ಲಿ ಮಾತ್ರ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೆ 12 ಅಂಕಗಳನ್ನು ಪಡೆದಿರುವ ವೆಸ್ಟ್ ಇಂಡೀಸ್ ತಂಡ ಅಗ್ರಸ್ಥಾನದಲ್ಲಿದೆ.

ಅಗ್ರಸ್ಥಾನದಲ್ಲಿ ವಿಂಡೀಸ್

ಅಗ್ರಸ್ಥಾನದಲ್ಲಿ ವಿಂಡೀಸ್

ಪಾಕಿಸ್ತಾನ ತಂಡ 4 ಟಿ ಟ್ವೆಂಟಿ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದೆ. ಇತ್ತೀಚಿಗಷ್ಟೆ 4 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ 1-0 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. 4 ಟಿ ಟ್ವೆಂಟಿ ಪಂದ್ಯಗಳ ಪೈಕಿ 3 ಟಿ ಟ್ವೆಂಟಿ ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡರೆ 1 ಟಿ ಟ್ವೆಂಟಿ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿದೆ.

ಇನ್ನು 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ ತಂಡ 1 ವಿಕೆಟ್ ರೋಚಕ ಜಯ ಗಳಿಸುವುದರ ಮೂಲಕ 12 ಅಂಕಗಳನ್ನು ಪಡೆದುಕೊಂಡು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಆಡಿರುವ 1 ಪಂದ್ಯದಲ್ಲಿ ಜಯ ಸಾಧಿಸಿ 12 ಅಂಕದ ಜೊತೆಗೆ 100% ಗೆಲುವಿನ ಶೇಕಡಾಂಶವನ್ನು ಹೊಂದಿರುವ ಕಾರಣಕ್ಕೆ ವೆಸ್ಟ್ ಇಂಡೀಸ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ನಿಧಾನಗತಿಯ ಬೌಲಿಂಗ್ ಮಾಡಿ ಅಂಕ ಕಳೆದುಕೊಂಡ ಕೊಹ್ಲಿ ಪಡೆ

ನಿಧಾನಗತಿಯ ಬೌಲಿಂಗ್ ಮಾಡಿ ಅಂಕ ಕಳೆದುಕೊಂಡ ಕೊಹ್ಲಿ ಪಡೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮಳೆ ಅಡ್ಡಿಯುಂಟು ಮಾಡಿದ ಕಾರಣ ಯಾವುದೇ ಫಲಿತಾಂಶ ಬರದೇ ಪಂದ್ಯ ಡ್ರಾ ಎಂದು ಘೋಷಿಸಲ್ಪಟ್ಟಿತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ 4 ಅಂಕಗಳನ್ನು ಪಡೆದುಕೊಂಡರು. ಆದರೆ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಹ ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ 2 ಅಂಕಗಳ ದಂಡವನ್ನು ತೆರಬೇಕಾಯಿತು. ಹೀಗಾಗಿ ಡ್ರಾನಿಂದ ಬಂದಿದ್ದ 4 ಅಂಕಗಳಲ್ಲಿ ಎರಡೂ ತಂಡಗಳಿಗೂ 2 ಅಂಕಗಳನ್ನು ಕಡಿತಗೊಳಿಸಿ ಉಳಿದ 2 ಅಂಕಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಈ ಮೂಲಕ ಎರಡನೇ ಪಂದ್ಯದ 12 ಅಂಕ ಮತ್ತು ಮೊದಲನೇ ಪಂದ್ಯ ಡ್ರಾ ಆಗಿದ್ದ ಕಾರಣ 4 ಅಂಕಗಳನ್ನು ಸೇರಿಸಿ ಒಟ್ಟು 16 ಅಂಕಗಳನ್ನು ಪಡೆದುಕೊಳ್ಳಬೇಕಾಗಿದ್ದ ಟೀಮ್ ಇಂಡಿಯಾ ಅಂಕಗಳ ದಂಡ ತೆತ್ತ ನಂತರ ಇದೀಗ 14 ಅಂಕಗಳನ್ನು ಪಡೆದುಕೊಂಡು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.


ಟೀಮ್ ಇಂಡಿಯಾ 14 ಅಂಕಗಳನ್ನು ಪಡೆದುಕೊಂಡರೂ ಸಹ ಎರಡನೇ ಸ್ಥಾನವನ್ನು ಪಡೆದುಕೊಳ್ಳಲು ಕಾರಣ ಗೆಲುವಿನ ಶೇಕಡಾಂಶ! ಹೌದು ಟೀಮ್ ಇಂಡಿಯಾ ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೂ ಸಹ ಮೊದಲನೇ ಪಂದ್ಯ ಡ್ರಾ ಆದ ಕಾರಣ ಗೆಲುವಿನ ಶೇಕಡಾಂಶದಲ್ಲಿ ಕುಸಿತ ಕಂಡಿದೆ. 2 ಟೆಸ್ಟ್ ಪಂದ್ಯಗಳ ನಂತರ 58.33 ರಷ್ಟು ಗೆಲುವಿನ ಶೇಕಡಾಂಶವನ್ನು ಟೀಮ್ ಇಂಡಿಯಾ ಹೊಂದಿದ್ದರೆ, ಆಡಿರುವ ಒಂದು ಪಂದ್ಯದಲ್ಲಿ ಜಯ ಸಾಧಿಸಿರುವ ವೆಸ್ಟ್ ಇಂಡೀಸ್ ತಂಡ 100 ರಷ್ಟು ಗೆಲುವಿನ ಶೇಕಡಾಂಶವನ್ನು ಹೊಂದಿದೆ. ಹೀಗಾಗಿ ವೆಸ್ಟ್ ಇಂಡೀಸ್ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೆ ಹೆಚ್ಚು ಅಂಕ ಪಡೆದಿದ್ದರೂ ಸಹ ಟೀಮ್ ಇಂಡಿಯಾ ಎರಡನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಗಳ ವಿವರ

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಗಳ ವಿವರ

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಗಳಲ್ಲಿ ಭಾಗವಹಿಸುವ ತಂಡಗಳಿಗೆ ಅಂಕಗಳ ಹಂಚಿಕೆ ಈ ಕೆಳಕಂಡಂತಿರುತ್ತದೆ

ಗೆಲುವು: 12 ಅಂಕಗಳು

ಪಂದ್ಯ ಟೈ ಆದರೆ: ಎರಡೂ ತಂಡಗಳಿಗೂ ತಲಾ 6 ಅಂಕಗಳು

ಪಂದ್ಯ ಡ್ರಾ ಆದರೆ: ಎರಡೂ ತಂಡಗಳಿಗೂ ತಲಾ 4 ಅಂಕಗಳು

ಸೋಲು: ಯಾವುದೇ ಅಂಕ ಸಿಗುವುದಿಲ್ಲ

Story first published: Wednesday, August 18, 2021, 14:03 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X