ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಭಾರತದ ಕಮ್‌ಬ್ಯಾಕ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪಾಕಿಸ್ತಾನ ಮಾಜಿ ನಾಯಕ ರವೀಜ್ ರಾಜಾ

WTC Final: comeback in the game for India not Impossible says Ramiz Raja

ಸೌಥಾಂಪ್ಟನ್, ಜೂನ್ 21: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಆದರೆ ಈ ಹಿನ್ನೆಡೆಯಿಂದ ಚೇತರಿಸಿಕೊಳ್ಳುವುದು ಟೀಮ್ ಇಂಡಿಯಾಗೆ ಅಸಾಧ್ಯವೇನಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆಯನ್ನು ಅನುಭವಿಸಿದ ಪರಿಣಾಮವಾಗಿ 217 ರನ್‌ಗಳಿಗೆ ಆಲೌಟ್ ಆಯಿತು. ಅದಾದ ನಂತರ ಬ್ಯಾಟಿಂಗ್ ಆರಂಭಿಸಿದ ಕಿವಿಸ್ ಪಡೆ ಮೂರನೇ ದಿನದಂತ್ಯದಲ್ಲಿ 101/2 ರನ್‌ಗಳಿಸಿತ್ತು. ಆದರೆ ಭಾರತ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಅಂತರದ ಮುನ್ನಡೆಯನ್ನು ನೀಡದಿದ್ದರೆ ಪಂದ್ಯವನ್ನು ಪಂದ್ಯವನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

ದೊಡ್ಡ ಮುನ್ನಡೆ ಪಡೆಯದಂತೆ ನೋಡಿಕೊಳ್ಳಬೇಕು

ದೊಡ್ಡ ಮುನ್ನಡೆ ಪಡೆಯದಂತೆ ನೋಡಿಕೊಳ್ಳಬೇಕು

ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮೂರನೇ ದಿನದ ಪ್ರದರ್ಶನದ ಬಗ್ಗೆ ವಿಮರ್ಶೆಯನ್ನು ಮಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಭಾರತ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಮುನ್ನಡೆಯನ್ನು ಲಭಿಸದಂತೆ ನೋಡಿಕೊಳ್ಳಬೇಕಿದೆ. ನ್ಯೂಜಿಲೆಂಡ್ ಮೇಲೆ ನಿರಂತರವಾಗಿ ಒತ್ತಡವನ್ನು ಹೇರುತ್ತಾ ಸಾಗಬೇಕು ಹಾಗೂ ವಿಕೆಟ್ ಪಡೆಯುತ್ತಾ ಮುನ್ನಡೆಯಬೇಕು. ವಿರಾಟ್ ಕೊಹ್ಲಿ ನೇರ ಮತ್ತು ಸರಳವಾದ ಗೇಮ್‌ಪ್ಲಾನ್ ಹೊಂದುವ ಅಗತ್ಯವಿದೆ. ಜೊತೆಗೆ ಎಲ್ಲಾ ಆಟಗಾರರು ಕೂಡ ತಮ್ಮ ಕೊಡುಗೆಯನ್ನು ನೀಡಬೇಕು" ಎಂದು ರಮೀಜ್ ರಾಜಾ ಹೇಳಿದ್ದಾರೆ.

ಕಮ್‌ಬ್ಯಾಕ್ ಅಸಾಧ್ಯವಿಲ್ಲ

ಕಮ್‌ಬ್ಯಾಕ್ ಅಸಾಧ್ಯವಿಲ್ಲ

"ಭಾರತ ತಂಡ ಕಠಿಣ ಪರಿಸ್ಥಿತಿಯಲ್ಲಿದೆ ಹಾಗೂ ಒತ್ತಡದಲ್ಲಿದೆ. ಆದರೆ ಭಾರತ ತಂಡಕ್ಕೆ ಅಸಾಧ್ಯವಲ್ಲ. ಭಾರತ ತಂಡ ಭರ್ಜರಿ ಕಮ್‌ಬ್ಯಾಕ್ ಮಾಡುವ ಅವಕಾಶವನ್ನು ಹೊಂದಿದೆ. ಭಾರತ ತಂಡವಿನ್ನೂ ಎಲ್ಲವನ್ನೂ ಕಳೆದುಕೊಂಡಿಲ್ಲ. ಸ್ಪರ್ಧಾತ್ಯಕ ಪ್ರದರ್ಶನ ನೀಡುವ ಮೂಲಕ ಪಂದ್ಯಕ್ಕೆ ಅವರು ಮರಳಬಹುದು" ಎಂದು ರಮೀಜ್ ರಾಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತೀಯ ಬೌಲಿಂಗ್ ಪಡೆಯ ಬಗ್ಗೆ ಪ್ರಶಂಸೆ

ಭಾರತೀಯ ಬೌಲಿಂಗ್ ಪಡೆಯ ಬಗ್ಗೆ ಪ್ರಶಂಸೆ

ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ಬೌಲಿಂಗ್ ಪಡೆಯ ಬಗ್ಗೆಯೂ ರಮೀಜ್ ರಾಜಾ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಅದ್ಭುತವಾದ ಬೌಲಿಂಗ್ ಪಡೆಯನ್ನು ಹೊಂದಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 20 ವಿಕೆಟ್ ಪಡೆಯುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ. ಜೊತೆಗೆ ಭಾರತೀಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.

"ಸ್ಪಿನ್ನರ್‌ಗಳಿಂದಲೂ ಉತ್ತಮ ಪ್ರದರ್ಶನ"

"ಭಾರತ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಯಶಸ್ಸನ್ನು ಪಡೆದುಕೊಂಡಿರುವುದು ಅದರ ಬೌಲಿಂಗ್ ದಾಳಿಯ ಕಾರಣದಿಂದಾಗಿ. 20 ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ಬೌಲರ್‌ಗಳು ಅವರಲ್ಲಿದ್ದಾರೆ. ಪಿಚ್ ಒಣಗಿದಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ಜಡೇಜಾ ಅವರಿಂದ ಉತ್ತಮ ಪ್ರದರ್ಶನ ಬರುವ ನಿರೀಕ್ಷೆಯಿದೆ" ಎಂದಿದ್ದಾರೆ. ಇನ್ನು ನ್ಯೂಜಿಲೆಂಡ್ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿದ ರಾಜಾ "ನ್ಯೂಜಿಲೆಂಡ್ ಏಕಮುಖಿ ಬೌಲಿಂಗ್ ದಾಳಿಯನ್ನು ಹೊಂದಿದೆ. ಅವರ ಬೌಲಿಂಗ್ ಮೊದಲ ಇನ್ನಿಂಗ್ಸ್‌ಗೆ ಹೆಚ್ಚು ಸೂಕ್ತವಾಗಿದೆ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

Story first published: Monday, June 21, 2021, 15:20 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X