ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್: ಹೇಗಿದೆ ಗೊತ್ತಾ ಕೊಹ್ಲಿ vs ಕೇನ್ ಟೆಸ್ಟ್ ನಾಯಕತ್ವದ ದಾಖಲೆ, ಅಂಕಿಅಂಶ!

WTC Final: Comparision between Kane Williamson and Virat Kohli, Test captaincy statistics and records
WTC Final : ಜಿದ್ದಾಜಿದ್ದಿನ ಯುದ್ಧದಲ್ಲಿ ಕೊಹ್ಲಿಯೇ ಕಿಂಗ್ | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ನ್ಯೂಜಿಲೆಂಡ್ ಹಾಗೂ ಟೀಮ್ ಇಂಡಿಯಾ ತಂಡಗಳು ಈ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇಬ್ಬರು ಕೂಡ ತಮ್ಮ ತಂಡಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಗಾಯಗೊಂಡಿದ್ದ ಕಾರಣ ಕೇನ್ ವಿಲಿಯಮ್ಸನ್ WTC ಫೈನಲ್ ಪಂದ್ಯದಲ್ಲಿ ಭಾಗಿಯಾಗುವ ವಿಚಾರವಾಗಿ ಅನುಮಾನಗಳಿದ್ದವು. ಆದರೆ ಐತಿಹಾಸಿಕ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದ್ದು ಕೀವಿಸ್ ನಾಯಕ ಈ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಈ ಎಲ್ಲಾ ಅನುಮಾನಗಳಿಗೂ ಉತ್ತರ ದೊರೆತಿದೆ.

WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ತವರು ಹಾಗೂ ವಿದೇಶದಲ್ಲಿ ಎರಡು ತಂಡಗಳೂ ಕೂಡ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರಿದೆ. ಈ ಸಂದರ್ಭದಲ್ಲಿ ಎರಡು ತಂಡಗಳ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರ ನಾಯಕತ್ವದ ಹೋಲಿಕೆ ಇಲ್ಲಿದೆ. ಮುಂದೆ ಓದಿ..

ವಿರಾಟ್ ಕೊಹ್ಲಿ ಒಟ್ಟಾರೆ ಟೆಸ್ಟ್ ನಾಯಕತ್ವ ಅಂಕಿಅಂಶ

ವಿರಾಟ್ ಕೊಹ್ಲಿ ಒಟ್ಟಾರೆ ಟೆಸ್ಟ್ ನಾಯಕತ್ವ ಅಂಕಿಅಂಶ

ನಾಯಕತ್ವ ಹೊರತುಪಡಿಸಿ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಇಬ್ಬರು ಕೂಡ ತಮ್ಮ ತಂಡಗಳ ಪ್ರಮುಖ ಬ್ಯಾಟಿಂಗ್ ಅಸ್ತ್ರಗಳಾಗಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ 60 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 36 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ 14 ಪಂದ್ಯಗಳಲ್ಲಿ ಸೋಲು ಕಂಡಿದೆ. 10 ಪಂದ್ಯಗಳು ಡ್ರಾ ಮೂಲಕ ಅಂತ್ಯವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವೀ ನಾಯಕ ಎನಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಮೂಲಕ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಭಾರತ ತಂಡದ ನಾಯಕ ಎನಿಸಲಿದ್ದಾರೆ.

ಕೇನ್ ವಿಲಿಯಮ್ಸನ್ ಒಟ್ಟಾರೆ ಟೆಸ್ಟ್ ನಾಯಕತ್ವ ಅಂಕಿಅಂಶ

ಕೇನ್ ವಿಲಿಯಮ್ಸನ್ ಒಟ್ಟಾರೆ ಟೆಸ್ಟ್ ನಾಯಕತ್ವ ಅಂಕಿಅಂಶ

ಮತ್ತೊಂದೆಡೆ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ನಾಯಕನಾಗಿ 36 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ 21 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿದ್ದರೆ ಕೇವಲ 8 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. 7 ಪಂದ್ಯಗಳೂ ಡ್ರಾ ಫಲಿತಾಂವನ್ನು ಕಂಡಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಪಟ್ಟಿಯಲ್ಲಿ ಕೇನ್ ಎರಡನೇ ಸ್ಥಾನದಲ್ಲಿದ್ದಾರೆ. 80 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿರುವ ಸ್ಟೀಫನ್ ಫ್ಲೆಮಿಂಗ್ ಮೊದಲ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಬ್ಯಾಟಿಂಗ್ ದಾಖಲೆ-ವಿರಾಟ್ ಕೊಹ್ಲಿ

ನಾಯಕನಾಗಿ ಬ್ಯಾಟಿಂಗ್ ದಾಖಲೆ-ವಿರಾಟ್ ಕೊಹ್ಲಿ

ಟೀಮ್ ಇಂಡಿಯಾವನ್ನು ಮುನ್ನಡೆಸಿದ 60 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 5,392 ರನ್ ಬಾರಿಸಿದ್ದಾರೆ. ಇದರಲ್ಲಿ 20 ಶತಕಗಳನ್ನು ಬಾರಿಸಿದ್ದಾರೆ. 58.60 ಸರಾಸರಿಯಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧ 2019ರಲ್ಲಿ ಅಜೇಯ 254 ರನ್ ಸಿಡಿಸಿ ತಮ್ಮ ಜೀವನ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಸಿಡಿಸಿದ ಶತಕಗಳಲ್ಲಿ 10 ತವರಿನಲ್ಲಿ ದಾಖಲಾಗಿದ್ದರೆ ನಾಲ್ಕು ಶತಕ ಆಸ್ಟ್ರೇಲಿಯಾದಲ್ಲಿ ಹಾಗೂ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ತಲಾ 2 ಶತಕ ದಾಖಲಿಸಿದ್ದಾರೆ.

ನಾಯಕನಾಗಿ ಬ್ಯಾಟಿಂಗ್ ದಾಖಲೆ-ಕೇನ್ ವಿಲಿಯಮ್ಸನ್

ನಾಯಕನಾಗಿ ಬ್ಯಾಟಿಂಗ್ ದಾಖಲೆ-ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್ ನಾಯಕನಾಗಿ ಮುನ್ನಡೆಸಿದ 36 ಟೆಸ್ಟ್ ಪಂದ್ಯಗಳಲ್ಲಿ 60.62ರ ಸರಾಸರಿಯಲ್ಲಿ 3092 ರನ್ ಬಾರಿಸಿದ್ದಾರೆ. ಕೇನ್ ವಿಲಿಯಮ್ಸನ್ ಸಿಡಿಸಿದ 24 ಶತಕಗಳ ಪೈಕಿ 11 ಶತಕಗಳನ್ನು ನಾಯಕನಾಗಿ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 2020ರಲ್ಲಿ ಸಿಡಿಸಿದ 251 ರನ್ ಕೇನ್ ವಿಲಿಯಮ್ಸನ್ ಅವರ ಜೀವನಶ್ರೇಷ್ಠ ಸಾಧನೆಯಾಗಿದ್ದು ಇದು ಕೂಡ ನಾಯಕನಾಗಿಯೇ ದಾಖಲಿಸಿದ್ದಾರೆ. ಇನ್ನು ನಾಯಕನಾಗಿ ಕೇನ್ ವಿಲಿಯಮ್ಸನ್ ಸಿಡಿಸಿದ 11 ಶತಕಗಳ ಪೈಕಿ 9 ತವರಿನಲ್ಲಿ ದಾಖಲಿಸಿದ್ದರೆ ಒಂದು ಜಿಂಬಾಬ್ವೆಯಲ್ಲಿ ಹಾಗೂ ಮತ್ತೊಂದು ಯುಎಇನಲ್ಲಿ ಪಾಕಿಸ್ತಾನ ವಿರುದ್ಧ ಸಿಡಿದ್ದಾರೆ.

ಗೆಲುವಿನ ಪಂದ್ಯಗಳಲ್ಲಿ ಇಬ್ಬರು ನಾಯಕರ ಸಾಧನೆ

ಗೆಲುವಿನ ಪಂದ್ಯಗಳಲ್ಲಿ ಇಬ್ಬರು ನಾಯಕರ ಸಾಧನೆ

ಇನ್ನು ಈ ಇಬ್ಬರು ನಾಯಕರ ಗೆದ್ದ ಪಂದ್ಯಗಳ ಸಾಧನೆಯತ್ತ ಗಮನಹರಿಸೋಣ. ವಿರಾಟ್ ಕೊಹ್ಲಿ ನಾಯಕನಾಗಿ ಗೆದ್ದ 36 ಟೆಸ್ಟ್ ಪಂದ್ಯಗಳಲ್ಲಿ 61.62ರ ಸರಾಸರಿಯಲ್ಲಿ 3328 ರನ್‌ ಬಾರಿಸಿದ್ದಾರೆ. ನಾಯಕನಾಗಿ ಸಿಡಿಸಿದ 20 ಶತಕಗಳ ಪೈಕಿ 11 ಶತಕಗಳು ಗೆಲುವಿಗೆ ಕಾರಣವಾಗಿದೆ. ಮತ್ತೊಂದೆಡೆ ಕೇನ್ ವಿಲಿಯಮ್ಸನ್ ನಾಯಕನಾಗಿ ಗೆಲುವು ಸಾಧಿಸಿದ 21 ಪಂದ್ಯಗಳಲ್ಲಿ 2210 ರನ್ ಬಾರಿಸಿದ್ದಾರೆ. ನಾಯಕನಾಗಿ ಸಿಡಿಸಿದ 11 ಶತಕಗಳಲ್ಲಿ 8 ಶತಕಗಳು ಗೆಲುವಿಗೆ ಕಾರಣವಾಗಿದೆ.

ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ದಾಖಲೆ

ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ದಾಖಲೆ

ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಮೂರು ಗೆಲುವುಗಳು ನ್ಯೂಜಿಲೆಂಡ್ ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿದ್ದ ವೇಳೆ ದಾಖಲಾಗಿದ್ದರೆ ಎರಡು ಸೋಲು ಕೀವಿಸ್ ತವರಿನಲ್ಲಿ ದಾಖಲಾಗಿದೆ. ಈ ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕ 34.70 ಸರಾಸರಿಯಲ್ಲಿ 347 ರನ್ ಬಾರಿಸಿದ್ದಾರೆ. ಒಂದು ದ್ವಿಶತಕ ಇದರಲ್ಲಿ ಸೇರಿದೆ.

ಭಾರತದ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ದಾಖಲೆ

ಭಾರತದ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ದಾಖಲೆ

ಇನ್ನು ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಭಾರತದ ವಿರುದ್ಧ ನಾಲ್ಕು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಎರಡು ಗೆಲುವು ಹಾಗೂ ಎರಡು ಸೋಲಿನ ರುಚಿ ಕಂಡಿದ್ದಾರೆ. ಗೆಲುವು ತವರಿನಲ್ಲಿ ದಾಖಲಾಗಿದ್ದರೆ ಸೋಲು ಭಾರತದ ನೆಲದಲ್ಲಿ ದಾಖಲಾಗಿದೆ. ಈ ನಾಲ್ಕು ಪಂದ್ಯಗಳಲ್ಲಿ ಕೇನ್ 33.14ರ ಸರಾಸರಿಯಲ್ಲಿ 232 ರನ್ ಬಾರಿಸಿದ್ದರೆ. 89 ರನ್ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧ ಸಿಡಿಸಿದ ಅತಿ ಹೆಚ್ಚಿನ ಸ್ಕೋರ್ ಆಗಿದೆ.

Story first published: Wednesday, June 16, 2021, 9:09 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X