ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಐದನೇ ದಿನದಾಟಕ್ಕೆ ಅವಕಾಶ ನೀಡುತ್ತಾನಾ ಮಳೆರಾಯ?

WTC Final, day 5: weather Update, Southampton rain update, June 22

ಸೌಥಾಂಪ್ಟನ್ ಜೂನ್ 22: ಸಾಕಷ್ಟು ಸಮಯಗಳಿಂದ ನಿರೀಕ್ಷೆಯಿಟ್ಟು ಕಾಯುತ್ತಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನೀರಸವಾಗಿದೆ. ಅದಕ್ಕೆ ಕಾರಣ ಮಳೆ. ಪಂದ್ಯದ ಆರಂಭದಿಂದಲೂ ಮಳೆರಾಯ ಅಭಿಮಾನಿಗಳ ಆಸೆಗೆ ತಣ್ಣೀರೆರಚುತ್ತಿದ್ದಾನೆ. ನಾಲ್ಕು ದಿನಗಳಲ್ಲಿ ಎರಡು ದಿನಗಳನ್ನು ಸಂಪೂರ್ಣವಾಗಿ ಮಳೆ ಆಹುತಿ ಪಡೆದುಕೊಂಡಾಗಿದೆ. ಉಳಿದ ಎರಡು ದಿನಗಳಲ್ಲಿ ಒಟ್ಟು ನಡೆದಿರುವುದು 141.1 ಓವರ್‌ಗಳ ಆಟ ಮಾತ್ರ. ಹೀಗಾಗಿ ಅಭಿಮಾನಿಗಳು ಪಂದ್ಯವನ್ನು ನೋಡಿದ್ದಕ್ಕಿಂತ ಹೆಚ್ಚಾಗಿ ಪಂದ್ಯದ ಆರಂಭಕ್ಕೆ ನಿರೀಕ್ಷೆಯಿಂದ ಕಾದಿದ್ದೇ ಹೆಚ್ಚಾಗಿದೆ.

ಮಂಗಳವಾರ ಪಂದ್ಯದ ಐದನೇ ಹಾಗೂ ಅಂತಿಮ ದಿನ. ಆದರೆ ಮಳೆಯ ಕಾರಣದಿಂದಾಗಿ ಮೀಸಲು ದಿನವನ್ನು ನಿಗದಿಪಡಿಸಿರುವ ಕಾರಣ ಬುಧವಾರವಾರವೂ ಪಂದ್ಯ ನಡೆಯಲಿದೆ. ಆದರೆ ಮಲೆ ಅದಕ್ಕೆ ಅವಕಾಶ ನೀಡಬೇಕಷ್ಟೆ. ಹಾಗಿದ್ದರೂ ಬಹುತೇಕ ಕಾಲ ಮಳೆಯಿಂದ ವ್ಯರ್ಥವಾಗಿರುವ ಕಾರಣ ಫಲಿತಾಂಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.

ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್

ನಾಲ್ಕನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಕೊಚ್ಚಿ ಹೋದ ನಂತರ ಐದನೇ ದಿನ ಸೌಥಾಂಪ್ಟನ್ ಹವಾಮಾನ ಹೇಗಿದೆ ಎಂಬುದು ಪ್ರಶ್ನೆಯಾಗಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆಗಾಗ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಆದರೆ ಪ್ರಥಮ ಸೆಶನ್‌ನಲ್ಲಿ ಆಟಕ್ಕೆ ಹೆಚ್ಚಿನ ಅಡ್ಡಿಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ ಎನ್ನಲಾಗಿದೆ.

ಆದರೆ ಭೋಜನದ ಅವಧಿಯ ನಂತರ ಮತ್ತೆ ಮಳೆ ಬಂದು ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸಾಧ್ಯತೆಯಿದೆ. ಅಂದರೆ ಸೌಥಾಂಪ್ಟನ್‌ನ ಸ್ಥಳೀಯ ಕಾಲಮಾನ 1 ಗಂಟೆಯಿಂದ 4 ಗಂಟೆಯವರೆಗಿನ ಅವಧಿಯಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಅದು ಪಂದ್ಯವನ್ನು ಮುಂದುವರಿಸಲು ಅಡ್ಡಿಯಾಗಬಹುದು.

ಆದರೆ ಸಂಜೆ ಐದು ಗಂಡೆಯ ಬಳಿಕ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹವಾಮಾನ ಮುನ್ಸೂಚನೆ ಮಾಹಿತಿ ನೀಡುತ್ತಿದೆ. ಆದರೆ ಮೋಡ ಕವಿದ ವಾತಾವರಣ 94 ಶೇಕಡಾ ಇರುವ ಕಾರಣ ಮಂದಬೆಳಕು ಪಂದ್ಯ ಮುಂದುವರಿಯಲು ಅಡ್ಡಿಯಾಗಬಹುದು. ಒಟ್ಟಾರೆ ಇಂದು ಕೂಡ ಪೂರ್ಣ ಪ್ರಮಾಣದ ಆಟ ನಡೆಯಲು ವಾತಾವರಣ ಅವಕಾಶ ಮಾಡಿಕೊಡುವ ಸಾಧ್ಯತೆ ತೀರಾ ವಿರಳ.

Story first published: Tuesday, June 22, 2021, 12:17 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X