ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಐತಿಹಾಸಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಐದು ಅಂಶಗಳು

WTC Final: Five Reasons for Team India defeat against new zealand

ಸೌಥಾಂಪ್ಟನ್, ಜೂನ್ 24: ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಆಘಾತಕಾರಿ ಸೋಲು ಕಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರನ್ನರ್‌ಅಪ್ ಸ್ಥಾನಕ್ಕೆ ವಿರಾಟ್ ಕೊಹ್ಲಿ ಬಳಗ ತೃಪ್ತಿ ಪಟ್ಟಿದೆ. ಮಳೆಯಿಂದಾಗಿ ಎರಡು ದಿನಗಳ ಪೂರ್ಣ ಪ್ರಮಾಣದ ಆಟ ವ್ಯರ್ಥವಾಗಿದ್ದರೂ ಮೀಸಲು ದಿನದ ಆಟದಲ್ಲಿ ನ್ಯೂಜಿಲೆಂಡ್ ತಂಡ 8 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.

ಸಾಕಷ್ಟು ವಿಶ್ವದರ್ಜೆಯ ಆಟಗಾರರನ್ನು ಒಳಗೊಂಡಿದ್ದರೂ ವಿರಾಟ್ ಕೊಹ್ಲಿ ಬಳಗ ಸೌಥಾಂಪ್ಟನ್‌ನ ಏಜಸ್‌ಬೌಲ್ ಕ್ರೀಡಾಂಗಣದಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿತು. ಎರಡೂ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಹೀನಾಯ ಆಟವನ್ನು ಪ್ರದರ್ಶಿಸಿತು. ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ಕಂಡ ಬರಲಿಲ್ಲ. ಬೌಲಿಂಗ್‌ನಲ್ಲಿ ಬೂಮ್ರಾ, ಜಡೇಜಾ ಅವರಂತಾ ಪ್ರಮುಖ ಬೌಲರ್‌ಗಳ ವೈಫಲ್ಯತೆ ತಂಡಕ್ಕೆ ದೊಡ್ಡ ಆಘಾತವನ್ನು ನೀಡಿದೆ.

WTC final: ಭಾರತ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ ನ್ಯೂಜಿಲೆಂಡ್!WTC final: ಭಾರತ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ ನ್ಯೂಜಿಲೆಂಡ್!

ಹಾಗಾದರೆ ಮಹತ್ವದ ಫೈನಲ್ ಪಂದ್ಯದಲ್ಲಿ ಟಿಮ್ ಇಂಡಿಯಾ ಎಡವಿದ್ದು ಎಲ್ಲಿ? ಮುಂದೆ ಓದಿ

ಸಮರ್ಥ ಆಡುವ ಬಳಗ ಆರಿಸುವಲ್ಲಿ ವಿಪಲವಾಯಿತಾ?

ಸಮರ್ಥ ಆಡುವ ಬಳಗ ಆರಿಸುವಲ್ಲಿ ವಿಪಲವಾಯಿತಾ?

ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಆರಿದ ತಂಡವನ್ನು ನೋಡಿದರೆ ಅತ್ಯಂತ ಬಲಿಷ್ಠ ತಂಡವಾಗಿ ಕಾಣಿಸುವುದರಲ್ಲಿ ಅನುಮಾನವೇ ಇಲ್ಲ. ಈ ಎಲ್ಲಾ ಆಟಗಾರರು ಕಳೆದ ಎರಡು ವರ್ಷಗಳಲ್ಲಿ ಟೀಮ್ ಇಂಡಿಯಾಗೆ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ. ಆದರೆ ಇಂಗ್ಲೆಂಡ್‌ನ ಪಿಚ್‌ನಲ್ಲಿ ತೀಕ್ಷ್ಣ ಸ್ವಿಂಗ್ ಬೌಲರ್‌ಗಳ ಕೊರತೆ ಎದ್ದುಕಂಡಿದೆ. ಭುವನೇಶ್ವರ್ ಕುಮಾರ್ ಅವರರಂತಾ ಆಟಗಾರರು ಈ ಪರಿಸ್ಥಿತಿಯಲ್ಲಿ ತಂಡದಲ್ಲಿದ್ದರೆ ಹೆಚ್ಚಿನ ಪರಿಣಾಮ ಬೀರುತ್ತಿತ್ತು. ಅಥವಾ ಶಾರ್ದೂಲ್ ಠಾಕೂರ್ ಅವರಂತಾ ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡುವ ಆಟಗಾರನಿಂದ ಕಾಂಬಿನೇನ್‌ಗೂ ಸಮಸ್ಯೆಯಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಕೈಕೊಟ್ಟ ಅನುಭವಿಗಳು

ಕೈಕೊಟ್ಟ ಅನುಭವಿಗಳು

ಇಂಗ್ಲೆಂಡ್‌ನ ಕಠಿಣ ಪಿಚ್‌ನಲ್ಲಿ ನ್ಯೂಜಿಲೆಂಡ್‌ನ ಅಪಾಯಕಾರಿ ವೇಗಿಗಳನ್ನು ಎದುರಿಸಲು ಅನುಭವ ಸಾಕಷ್ಟು ಮಹತ್ವದ ಪಾತ್ರವಹಿಸುತ್ತದೆ. ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ಬಳಗ ಅನುಭವಿಗಳ ದಂಡನ್ನೇ ಹೊಂದಿತ್ತು. ರೊಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಅಜಿಂಕ್ಯಾ ರಹಾನೆಯಂತಾ ಆಟಗಾರ ತಂಡಕ್ಕೆ ನಿರ್ಣಾಯಕ ಕೊಡುಗೆ ನೀಡುವ ಅಗತ್ಯವಿತ್ತು. ಅದರಲ್ಲೂ ಒಂದು ಉತ್ತಮ ಜೊತೆಯಾಟ ಫಲಿತಾಂಶವನ್ನು ಬದಲಾಯಿಸುವ ಅವಕಾಶವನ್ನು ಹೊಂದಿತ್ತು. ಇಲ್ಲಿ ಭಾರತ ಎಡವಿತ್ತು.

ಎಡವಿದ ಯುವ ಆಟಗಾರರು

ಎಡವಿದ ಯುವ ಆಟಗಾರರು

ಇನ್ನು ಭವಿಷ್ಯದ ತಾರೆಗಳು ಎನಿಸಿದ ಶುಬ್ಮನ್ ಗಿಲ್, ರಿಷಭ್ ಪಂತ್‌ರಂತಾ ಆಟಗಾರರು ಕೂಡ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಶುಬ್ಮನ್ ಗಿಲ್ ಎರಡೂ ಇನ್ನಿಂಗ್ಸ್‌ನಲ್ಲಿಯೂ ಪರಿಣಾಮಕಾರಿ ಆಟವನ್ನು ನೀಡುವಲ್ಲಿ ವಿಫಲರಾದರು. ರಿಷಭ್ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟ ಮನೋಭಾವ ತೋರಿದರಾದರೂ ಅವರಿಗೆ ಪೂರಕ ಸಾಥ್ ದೊರೆಯಲಿಲ್ಲ. ಇದು ಕೂಡ ನ್ಯೂಜಿಲೆಂಡ್‌ಗೆ ಸುಲಭ ಗುರಿಯನ್ನು ನೀಡಲು ಕಾರಣವಾಯಿತು.

ಮಹತ್ವದ ಪಾತ್ರವಹಿಸಿದ ಮೊದಲ ಇನ್ನಿಂಗ್ಸ್‌ನ ಹಿನ್ನೆಡೆ

ಮಹತ್ವದ ಪಾತ್ರವಹಿಸಿದ ಮೊದಲ ಇನ್ನಿಂಗ್ಸ್‌ನ ಹಿನ್ನೆಡೆ

ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್‌ಗಳ ಅಲ್ಪ ಮುನ್ನಡೆಯನ್ನು ಸಾಧಿಸಿತು. ಇದು ಕಿವೀಸ್ ಪಡೆಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿತು. ಉತ್ತಮ ಆರಂಭವನ್ನು ಪಡೆದ ನ್ಯೂಜಿಲೆಂಡ್‌ನ ಮಧ್ಯಮ ಕ್ರಮಾಂಕವನ್ನು ಕೆಡವುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದರು. ಆದರೆ ಬಾಲಂಗೋಚಿಗಳ ಆಟದಿಂದಾಗಿ ನ್ಯೂಜಿಲೆಂಡ್ ತಂಡ ಈ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಅದರಲ್ಲೂ ಕೊನೆಯ ನಾಲ್ಕು ವಿಕೆಟ್‌ಗೆ ನ್ಯೂಜಿಲೆಂಡ್ ತಂಡ 87 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.

ಕೈಕೊಟ್ಟ ಬೂಮ್ರಾ, ಜಡೇಜಾ

ಕೈಕೊಟ್ಟ ಬೂಮ್ರಾ, ಜಡೇಜಾ

ಟೀಮ್ ಇಂಡಿಯಾದ ಬೌಲಿಂಗ್‌ನಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ವೈಫಲ್ಯ ಎದ್ದು ಕಂಡಿತು. ತಂಡದ ಪರವಾಗಿ ಮಹತ್ವದ ಪಾತ್ರವಹಿಸಬೇಕಿದ್ದ ಬೂಮ್ರಾ ಎರಡು ಇನ್ನಿಂಗ್ಸ್‌ಗಳಲ್ಲಿ ಕನಿಷ್ಟ ಒಂದು ವಿಕೆಟ್ ಪಡೆಯುವಲ್ಲಿ ಕೂಡ ವಿಫಲರಾದರು. ಇದು ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ತಂಡಕ್ಕೆ ನೆರವಾಗಲಿಲ್ಲ.

Story first published: Thursday, June 24, 2021, 20:01 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X