ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃತ್ತಿ ಬದುಕಿನ ಏಳಿಗೆಯಲ್ಲಿ ಶೇನ್ ಬಾಂಡ್ ಪಾತ್ರ ದೊಡ್ಡದಿದೆ ಎಂದ ಜಸ್‌ಪ್ರೀತ್ ಬೂಮ್ರಾ

WTC final: He played a importent role in shaping my career: Jasprit Bumrah on Shane Bond

ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬೂಮ್ರಾ ಐಪಿಎಲ್ ಮೂಲಕವೇ ಬೆಳಕಿಗೆ ಬಂದ ಆಟಗಾರ. ಈಗ ಭಾರತದ ರಾಷ್ಟ್ರೀಯ ತಂಡದಲ್ಲಿ ಬೂಮ್ರಾ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪ್ರಗತಿಗೆ ಬೂಮ್ರಾ ಐಪಿಎಲ್‌ನಲ್ಲಿ ತಾನು ಪ್ರತಿನಿಧಿಸುವ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಕಾರಣ ಎಂದು ಬೂಮ್ರಾ ಹೇಳಿದ್ದಾರೆ.

ಶೇನ್ ಬಾಂಡ್ ಜೊತೆಗಿನ ತನ್ನ ಬಾಂಧವ್ಯವನ್ನು ಬೂಮ್ರಾ ಮನಬಿಚ್ಚಿ ಹೇಳಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ತನ್ನ ಬೌಲಿಂಗ್‌ನ ಪ್ರಗತಿಗೆ ಹಾಗೂ ಹೊಸ ಹೊಸ ಬದಲಾವಣೆಗಳಿಗೆ ಸಹಕಾರಿಯಾಗುದ್ದಾರೆ ಎಂದು ಬೂಮ್ರಾ ವಿವರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೂಮ್ರಾ ಈ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

"ನಾನು ಇಲ್ಲಿ ಇಲ್ಲದಿದ್ದಾಗಲೂ ಮತ್ತು ಭಾರತೀಯ ತಂಡದ ಜೊತೆಗಿದ್ದಾಗಲೂ ಅವರ ಬಳಿ ಯಾವಾಗಲೂ ಮಾತನಾಡುವ ಪ್ರಯತ್ನ ಮಾಡುತ್ತಿರುತ್ತೇನೆ. ಇದೊಂದು ಅದ್ಭುತವಾದ ಪ್ರಯಣ. ಪ್ರತಿ ಬಾರಿಯೂ ನಾನು ಹೊಸ ವಿಚಾರಗಳನ್ನು ಕಲಿಯುತ್ತಿರುತ್ತೇನೆ ಮತ್ತು ನನ್ನ ಬೌಲಿಂಗ್‌ನಲ್ಲಿ ಹೊಸತನ್ನು ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇನೆ"

"ಅದರಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಈವರೆಗೆ ಅವರೊಂದಿಗಿನ ಸಂಬಂಧ ಶ್ರೇಷ್ಠವಾಗಿದೆ. ಇದು ಮುಂದೆ ಸುದೀರ್ಘ ಕಾಲದವರೆಗೆ ಮುಂದುವರಿಯಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬೂಮ್ರಾ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Story first published: Friday, May 14, 2021, 15:14 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X