ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC final: ಜೂನ್ 23ರಂದು ರಿಸರ್ವ್ ಡೇ, ಖಾತರಿಪಡಿಸಿದ ಐಸಿಸಿ

WTC final: ICC confirms reserve day (June 23rd) will have 98 overs

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಜೂನ್ 23ರಂದು ರಿಸರ್ವ್ ಡೇಯಲ್ಲೂ ನಡೆಯಲಿದೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ (ಜೂನ್ 22) ಖಾತರಿಪಡಿಸಿದೆ.

WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್

ಟೆಸ್ಟ್‌ ಚಾಂಪಿಯನ್‌ಶಿಪ್‌ ಅಸಲಿಗೆ ಜೂನ್ 18-22ರ ವರೆಗೆ ನಡೆಯಲಿತ್ತು. ಆಟಕ್ಕೆ ತೊಂದರೆಯಾದರೆ ಮಾತ್ರ ರಿಸರ್ವ್ ಡೇಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಐಸಿಸಿ ಈ ಮೊದಲೇ ಹೇಳಿತ್ತು. ಪಂದ್ಯಕ್ಕೆ ಮಳೆ ತೀವ್ರ ತೊಂದರೆ ನೀಡಿದ್ದರಿಂದ 2 ದಿನ ಆಟವೇ ನಡೆದಿಲ್ಲ. ಹೀಗಾಗಿ ಪಂದ್ಯವನ್ನು 6ನೇ ದಿನಕ್ಕೆ ಕೊಂಡೊಯ್ಯಲು ಐಸಿಸಿ ಯೋಚಿಸಿದೆ.

WTC Final: ಭಾರತ vs ಕಿವೀಸ್, Live ಸ್ಕೋರ್‌ಕಾರ್ಡ್

1
50883

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಬೇಕಿದ್ದ ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ತೀವ್ರ ಮಳೆಯಿದ್ದ ಕಾರಣ ಅಂದು ಪಂದ್ಯ ಆರಂಭಗೊಳ್ಳಲೇಯಿಲ್ಲ. ಅದಾಗಿ ಜೂನ್ 19, 20ರಂದು ಪಂದ್ಯ ನಡೆದಿತ್ತು. ಆದರೆ ಜೂನ್ 21ರಂದು ಮತ್ತೆ ಒಂದಿಡೀ ದಿನದಾಟ ನಡೆದಿರಲಿಲ್ಲ. ಹೀಗಾಗಿ ಜೂನ್ 23ರಂದು 98 ಓವರ್‌ಗಳ ವರೆಗೆ ಪಂದ್ಯ ನಡೆಸಲು ಐಸಿಸಿ ತೀರ್ಮಾನಿಸಿದೆ.

ಭರ್ಜರಿ ಸಿಕ್ಸ್ ಚಚ್ಚಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್‌ಮನ್‌: ವಿಡಿಯೋಭರ್ಜರಿ ಸಿಕ್ಸ್ ಚಚ್ಚಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್‌ಮನ್‌: ವಿಡಿಯೋ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ವಿರಾಟ್ ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 92.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 217 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ ಆಡುತ್ತಿರುವ ಕೇನ್ ವಿಲಿಯಮ್ಸನ್ ಬಳಗ 96.1ನೇ ಓವರ್‌ಗೆ 8 ವಿಕೆಟ್ ಕಳೆದು 234 ರನ್ ಗಳಿಸಿತ್ತು.

Story first published: Wednesday, June 23, 2021, 10:00 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X