WTC Final: ಐತಿಹಾಸಿಕ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಲು ಈ ಆಟಗಾರರು ಸಜ್ಜು

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಪಂದ್ಯದ ಆರಂಭದ ದಿನವೇ ಮಳೆ ಅಡ್ಡಿಯಾಗಿದ್ದು ಮೊದಲ ಸೆಶನ್ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಈ ಮೂಲಕ ಮಹತ್ವದ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಆರಂಭದಲ್ಲಿಯೇ ನಿರಾಸೆಯುಂಟಾಗಿದೆ.

ಈ ಐತಿಹಾಸಿಕ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎರಡೂ ತಂಡಗಳಲ್ಲಿ ಸಾಕಷ್ಟು ಅನುಭವಿ ಹಾಗೂ ಬಲಿಷ್ಠ ಆಟಗಾರರು ಇದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಎಲ್ಲರೂ ತಮ್ಮ ಶ್ರೇಷ್ಠ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಈ ವಿಶೇಷ ಕ್ಷಣದಲ್ಲಿ ಎರಡೂ ತಂಡಗಳ ಆಟಗಾರರು ಕೆಲ ಮಹತ್ವದ ಮೈಲಿಗಲ್ಲುಗಳ ಸನಿಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಈ ಮೈಲಿಗಲ್ಲುಗಳನ್ನು ನೆಡುವ ಸಾಧ್ಯತೆ ಹೆಚ್ಚಿದೆ. ಹಾಗಾದರೆ ಯಾವೆಲ್ಲಾ ಆಟಗಾರರು ಈ ಮಹತ್ವದ ಪಂದ್ಯದಲ್ಲಿ ದಾಖಲೆಯನ್ನು ಬರೆಯಲಿದ್ದಾರೆ. ಯಾವೆಲ್ಲಾ ಮೈಲಿಗಲ್ಲುಗಳನ್ನು ನೆಡಲಿದ್ದಾರೆ ಎಂಬುದನ್ನು ಮುಂದೆ ನೋಡೋಣ.

WTC final: ಭಾರತ vs ನ್ಯೂಜಿಲೆಂಡ್ ಪಂದ್ಯದ ಮೊದಲ ಸೆಶನ್ ಮಳೆಗೆ ಆಹುತಿ!WTC final: ಭಾರತ vs ನ್ಯೂಜಿಲೆಂಡ್ ಪಂದ್ಯದ ಮೊದಲ ಸೆಶನ್ ಮಳೆಗೆ ಆಹುತಿ!

ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ರಾಷ್ಟ್ರದ ಕ್ರಿಕೆಟ್ ತಂಡದ ನಾಯಕನಾಗಿ ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಇನ್ನು ಕೇವಲ 8 ರನ್‌ಗಳಿಸಿದರೆ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಕ್ರಿಕೆಟ್ ತಂಡ ನಾಯಕನಾಗಿ 4000 ರನ್‌ಗಳಿಸಿದ ಆಟಗಾರ ಎನಿಸಲಿದ್ದಾರೆ. 36 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅವರು 60.62ರ ಸರಾಸರಿಯಲ್ಲಿ 3992 ರನ್‌ಗಳಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 13 ಅರ್ಧ ಶತಕಗಳು ಸೇರಿದೆ. ನ್ಯೂಜಿಲೆಂಡ್ ನಾಯಕನಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಸ್ಟೀಫನ್ ಫ್ಲೆಮಿಂಗ್ ಮೊದಲ ಸ್ಥಾನದಲ್ಲಿದ್ದು ಕೇನ್ ಎರಡನೇ ಸ್ಥಾನದಲ್ಲಿದ್ದಾರೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಸ್ಲಿಪ್‌ನಲ್ಲಿ ಅತ್ಯಂತ ನಂಬಿಕಸ್ಥ ಕ್ಷೇತ್ರ ರಕ್ಷಕ. ಈ ಐತಿಹಾಸಿಕ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಐದು ಕ್ಯಾಚ್ ಪಡೆಯಲು ರಹಾನೆ ಯಶಸ್ವಿಯಾದರೆ ಟೆಸ್ಟ್‌ನಲ್ಲಿ 100 ಕ್ಯಾಚ್ ಪಡೆದ ಸಾಧನೆ ಮಾಡಿದಂತಾಗುತ್ತದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಅನುಭವಿ ರೋಹಿತ್ ಶರ್ಮಾ ವಿದೇಶದಲ್ಲಿ ಟೆಸ್ಟ್‌ನಲ್ಲಿ 1000 ರನ್‌ಗಳಿಸಲು 55 ರನ್‌ಗಳ ಅವಶ್ಯಕತೆಯಿದೆ. ವಿದೇಶಿ ನೆಲದಲ್ಲಿ ಈವರೆಗೆ 20 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ರೋಹಿತ್ ಶರ್ಮಾ 27ರ ಸರಾಸರಿಯಲ್ಲಿ ಆರು ಅರ್ಧ ಶತಕಗಳ ಸಹಿತ 945 ರನ್‌ಗಳಿಸಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್‌ಗಳ ಮೈಲಿಗಲ್ಲಿ ನೆಡುವ ಸಾಧ್ಯತೆಯಿದೆ. 51 ಟೆಸ್ಟ್ ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ 1954 ರನ್‌ ಬಾರಿಸಿದ್ದಾರೆ. ಇದರಲ್ಲಿ 15 ಅರ್ಧ ಶತಕ ಹಾಗೂ ಒಂದು ಶತಕ ಸೇರಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಹಾಗೂ 2000ಕ್ಕೂ ಅಧಿಕ ರನ್‌ಗಳಿಸಿದ ಭಾರತದ ಐದನೇ ಆಟಗಾರ ಎನಿಸಲಿದ್ದಾರೆ. ಇದಕ್ಕೂ ಮುನ್ನ ಕಪಿಲ್‌ದೇವ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ ಹಾಗೂ ಆರ್ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.

ರಾಸ್ ಟೇಲರ್

ರಾಸ್ ಟೇಲರ್

ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ರಾಸ್ ಟೇಯ್ಲರ್ ಮತ್ತೊಂದು ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಭಾರತದ ವಿರುದ್ಧ 100 ರನ್‌ಗಳಿಸಿದ ಸಾಧನೆ ಂಆಡುವ ಅವಕಾಶ ಅವರ ಮುಂದಿದೆ. ಆದರೆ ಅದಕ್ಕೆ ಅವರು 188 ರನ್‌ಗಳನ್ನು ಗಳಿಸಬೇಕಿದೆ. ಭಾರತದ ವಿರುದ್ಧ 14 ಪಂದ್ಯಗಳನ್ನು ಆಡಿರುವ ಟೇಲರ್ 812 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 18, 2021, 16:23 [IST]
Other articles published on Jun 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X