ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಭಾರತ ಇಷ್ಟು ರನ್ ಬಾರಿಸಿದರೆ ನ್ಯೂಜಿಲೆಂಡ್‌ಗೆ ಸಂಕಷ್ಟ ತಪ್ಪಿದ್ದಲ್ಲ!

WTC Final: India batting coach explains what will be a competitive score against New Zealand
Kohli, ರಹಾನೆಗಿಂತ ರೋಹಿತ್, ಶುಭ್ ಮನ್ ಸೂಪರ್ ಎಂದ ಬ್ಯಾಟಿಂಗ್ ಕೋಚ್ | Oneindia Kannada

ಸೌಥಾಂಪ್ಟನ್, ಜೂನ್ 20: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾದ ನಂತರ ಎರಡನೇ ದಿನ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಹೋರಾಟವನ್ನು ಆರಂಭಿಸಿದೆ. ಟಾಸ್‌ ಗೆದ್ದ ನ್ಯೂಜಿಲೆಂಡ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 146 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ನಾಯಕ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ಮೂಲಕ ಇಂಗ್ಲೆಂಡ್‌ನ ಕಠಿಣ ಪಿಚ್‌ನಲ್ಲಿ ನ್ಯೂಜಿಲೆಂಡ್‌ನ ವೇಗಿಗಳ ಸವಾಲನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ 44 ರನ್‌ಗಳಿಸಿದ್ದರೆ, ಅಜಿಂಕ್ಯ ರಹಾನೆ 29 ರನ್‌ಗಳಿಸಿ ಮೂರನೇ ದಿನದಾಟ ಮುಂದುವರಿಸಲಿದ್ದಾರೆ.

WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲುWTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು

ಇನ್ನು ಟೀಮ್ ಇಂಡಿಯಾದ ಎರಡನೇ ದಿನದಾಟದ ನಂತರ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನ್ಯೂಜಿಲೆಂಡ್ ತಂಡಕ್ಕೆ ಸವಾಲೆನಿಸಬಲ್ಲ ಸ್ಕೋರ್‌ಅನ್ನು ತಿಳಿಸಿದ್ದಾರೆ.

ಭಾರತ ಉತ್ತಮ ಸ್ಥಿತಿಯಲ್ಲಿದೆ

ಭಾರತ ಉತ್ತಮ ಸ್ಥಿತಿಯಲ್ಲಿದೆ

ನ್ಯೂಜಿಲೆಂಡ್ ವಿರುದ್ಧದ ಐತಿಹಾಸಿಕ ಟೆಸ್ಟ್‌ನಲ್ಲಿ ಭಾರತ ತಂಡ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ. ಸೌಥಾಂಪ್ಟನ್ ಅಂಗಳದ ಪರಿಸ್ಥಿತಿಯನ್ನು ಗಮನಿಸಿಕೊಂಡು ಭಾರತ 250ಕ್ಕಿಂತ ಹೆಚ್ಚಿನ ರನ್‌ಗಳಿಸಿದರೆ ಅದು ಉತ್ತಮ ಮೊತ್ತವಾಗಲಿದೆ ಎಂದು ವಿಕ್ರಂ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ.

ಸವಾಲಿನ ಮೊತ್ತವನ್ನು ತಿಳಿಸಿದ ಬ್ಯಾಟಿಂಗ್ ಕೋಚ್

ಸವಾಲಿನ ಮೊತ್ತವನ್ನು ತಿಳಿಸಿದ ಬ್ಯಾಟಿಂಗ್ ಕೋಚ್

"ನಾವು ಸಾಧ್ಯವಾದಷ್ಟು ಹೆಚ್ಚಿನ ರನ್‌ಗಳಿಸಲು ಪ್ರಯತ್ನಿಸಲಿದ್ದೇವೆ. ಆದರೆ 250ಕ್ಕಿಂತ ಹೆಚ್ಚಿನ ರನ್‌ಗಳಿಸುವುದು ಈ ಪಿಚ್‌ನಲ್ಲಿ ಸವಾಲಿನ ಮೊತ್ತವಾಗಲಿದೆ" ಎಂದು ವಿಕ್ರಂ ರಾಥೋರ್ ಎರಡನೇ ದಿನದಾಟ ಅಂತ್ಯದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ.

ಆರಂಭಿಕರಿಗೆ ಶ್ರೇಯಸ್ಸು

ಆರಂಭಿಕರಿಗೆ ಶ್ರೇಯಸ್ಸು

ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್‌ ಕೋಚ್ ವಿಕ್ರಂ ರಾಥೋರ್ ಭಾರತೀಯ ಆರಂಭಿಕ ಜೋಡಿಯನ್ನು ಪ್ರಶಂಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಹೊಸ ಚೆಂಡನ್ನು ಅದ್ಭುತ ರೀತಿಯಲ್ಲಿ ಎದುರಿಸಿದ್ದಾರೆ ಎಂದರು. ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ಗಳಿಸಿತು. "ಬ್ಯಾಟಿಂಗ್ ಅಂದರೆ ರನ್‌ಗಳಿಸುವುದುದು. ರೋಹಿತ್ ಹಾಗೂ ಗಿಲ್ ಅದ್ಭುತವಾಗಿ ಆಟವಾಡುತ್ತಾ ಹೆಚ್ಚು ರನ್‌ಗಳಿಸುವತ್ತ ಚಿತ್ತ ನೆಟ್ಟರು. ಎಲ್ಲಿ ಸಾಧ್ಯವೋ ಅಲ್ಲಿ ರನ್‌ಗಳಿಸುತ್ತಾ ಸಾಗಿದ್ದರು. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆಗೂ ಹ್ಯಾಟ್ಸ್‌ಆಫ್ ಆದರೆ ಹೆಚ್ಚಿನ ಶ್ರೇಯಸ್ಸು ಆರಂಭಿಕರಿಗೆ ಸಲ್ಲಬೇಕು" ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ.

ಪೂಜಾರ ಬ್ಯಾಟಿಂಗ್ ಬಗ್ಗೆ ಕಳವಳವಿಲ್ಲ

ಪೂಜಾರ ಬ್ಯಾಟಿಂಗ್ ಬಗ್ಗೆ ಕಳವಳವಿಲ್ಲ

ಇನ್ನು ಇದೇ ಸಂದರ್ಭದಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್‌ನಲ್ಲಿನ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದರು. "ನಾವು ನಿಜಕ್ಕೂ ಆ ವಿಚಾರವಾಗಿ ಕಳವಳವನ್ನು ಹೊಂದಿಲ್ಲ, ಯಾಕೆಂದರೆ ಆತ ನಿಜಕ್ಕೂ ಅತ್ಯುತ್ತಮ ಆಟಗಾರ. ವೇಗ ಆತನಿಗೆ ಸಮಸ್ಯೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆತ ಬ್ಯಾಟಿಂಗ್ ನಡೆಸುವವರೆಗೂ ಅದ್ಭುತವಾಗಿ ಕಾಣಿಸುತ್ತಾರೆ. ಇವತ್ತು ಕೂಡ ಅವರು 50 ಎಸೆತಗಳನ್ನು ಎದುರಿಸಿದ್ದಾರೆ. ಈ ಉತ್ತಮ ಆರಂಭವನ್ನು ತಮ್ಮ ಪರವಾಗುವಂತೆ ಅವರು ಮಾಡಬೇಕಿದೆಯಷ್ಟೆ. ಅದು ಶೀಘ್ರದಲ್ಲಿಯೇ ಆಗಲಿದೆ" ಎಂದು ವಿಕ್ರಂ ರಾಥೋರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

Story first published: Sunday, June 20, 2021, 11:10 [IST]
Other articles published on Jun 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X