ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

WTC Final, India vs New zealand, Kyle Jamieson breaks 80 year old record for New zealand

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಬೌಲರ್‌ಗಳು ಯಶಸ್ಸು ಸಾಧಿಸಿದ್ದಾರೆ. ಅದರಲ್ಲೂ ಕೈಲ್ ಜ್ಯಾಮಿಸನ್ ಐದು ವಿಕೆಟ್‌ಗಳ ಗೊಂಚಲು ಪಡೆದು ಟೀಮ್ ಇಂಡಿಯಾ ಹಿನ್ನೆಡೆಗೆ ಕಾರಣರಾದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ 8 ದಶಕಗಳ ಹಿಂದಿನ ದಾಖಲೆಯೊಂದನ್ನು ಕೈಲ್ ಜ್ಯಾಮಿಸನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೂರನೇ ದಿನದಾಟವನ್ನು ಆರಂಭಿಸಿದ ಭಾರತಕ್ಕೆ ಇಂದು ಆರಂಭದಲ್ಲಿಯೇ ಕೈಲ್ ಜ್ಯಾಮಿಸನ್ ಆಘಾತವನ್ನು ನೀಡಿದರು. ನಾಯಕ ವಿರಾಟ್ ಕೊಹ್ಲಿಯನ್ನು ಜ್ಯಾಮಿಸನ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ನಂತರ ಯುವ ಆಟಗಾರ ರಿಷಭ್ ಪಂತ್ ಕೂಡ ಕೈಲ್ ಜ್ಯಾಮಿಸನ್‌ಗೆ ಔಟಾದರು.

WTC Final, ಭಾರತ vs ಕಿವೀಸ್, Live ಸ್ಕೋರ್‌: 217 ರನ್‌ಗೆ ಭಾರತ ಆಲೌಟ್WTC Final, ಭಾರತ vs ಕಿವೀಸ್, Live ಸ್ಕೋರ್‌: 217 ರನ್‌ಗೆ ಭಾರತ ಆಲೌಟ್

ಇದು ಜ್ಯಾಮಿಸನ್ ಅವರ 42ನೇ ಟೆಸ್ಟ್ ವಿಕೆಟ್ ಎನಿಸಿದೆ. ನ್ಯೂಜಿಲೆಂಡ್‌ನ ವೇಗಿಯೋರ್ವ ಮೊದಲ 8 ಪಂದ್ಯಗಳಲ್ಲಿ ಪಡೆದ ಅತಿ ಹೆಚ್ಚಿನ ವಿಕೆಟ್ ಆಗಿದೆ. ಈ ಮೂಲಕ 1930-40ರ ದಶಕದಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಜಾಕ್ ಕೋವಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ನ್ಯೂಜಿಲೆಂಡ್ ಪರವಾಗಿ ಮೊದಲ 8 ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್‌ ಪಡೆದ ಬೌಲರ್‌ಗಳು

ಕೈಲ್ ಜ್ಯಾಮೀಸನ್- 44 ವಿಕೆಟ್ (2020-2021*)

ಜ್ಯಾಕ್ ಕೋವಿ- 41 ವಿಕೆಟ್ (1937-1949)

ಶೇನ್ ಬಾಂಡ್- 38 ವಿಕೆಟ್ (2001-2003)

ಡೌಗ್ ಬ್ರೇಸ್ವೆಲ್- 33 ವಿಕೆಟ್ (2011-2012)

ಹೆಡ್ಲಿ ಹೋವರ್ತ್- 32 ವಿಕೆಟ್ (1969)

ಇನ್ನು ಕೈಲ್ ಜ್ಯಾಮಿಸನ್ ಇದಕ್ಕೂ ಮುನ್ನ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ವಿಕೆಟ್ ಪಡೆ ಭಾರತಕ್ಕೆ ಮೊದಲ ಆಘಾತವನ್ನು ನೀಡಿದ್ದರು. ಈ ಮೂಲಕ ಒಟ್ಟು ಐದು ವಿಕೆಟ್ ಪಡೆದು ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Sunday, June 20, 2021, 19:54 [IST]
Other articles published on Jun 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X