ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಭಾರತದ ಬ್ಯಾಟಿಂಗ್‌ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮೆಚ್ಚುಗೆ

WTC Final: Michael Vaughan praises Team India’s batting

ಸೌಥಾಂಪ್ಟನ್ ಜೂನ್ 20: ಸದಾ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಹೇಳಿಕೆಯನ್ನು ನೀಡುವ ಇಂಗ್ಲೆಂಡ್ ಕ್ರಿಕೆಟ್ ತಮಡದ ಮಾಜಿ ನಾಯಕ ಮೈಕಲ್ ವಾನ್ ಭಾರತೀಯ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಎರಡನೇ ದಿನದಲ್ಲಿ ಭಾರತ ತಂಡ ನಡೆಸಿದ ಬ್ಯಾಟಿಂಗ್ ಬಗ್ಗೆ ಮೈಕಲ್ ವಾನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಮೊದಲ ದಿನ ಮಳೆಯಿಂದಾಗಿ ಸಂಪೂರ್ಣ ದಿನದಾಟ ಆಟಂಭವಾಗಿರಲಿಲ್ಲ. ಹೀಗಾಗಿ ಎರಡನೇ ದಿನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿದ್ದ ಭಾರತ 3 ವಿಕೆಟ್ ಕಳೆದುಕೊಂಡು 146 ರನ್‌ಗಳಿಸಿದೆ. ಈ ಪ್ರದರ್ಶನದ ನಂತರ ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. "ಸೌಥಾಂಪ್ಟನ್‌ನಲ್ಲಿ ನನಗೆ 225 ರನ್ ಸವಾಲಿನ ಮೊತ್ತದಂತೆ ಭಾಸವಾಗುತ್ತಿದೆ. ಭಾರತ ಈವರೆಗೆ ಅದ್ಭುತವಾಗಿ ಪ್ರದರ್ಶನವನ್ನು ನೀಡಿದೆ. ಇಂತಾ ಕಠಿಣ ಪರಿಸ್ಥಿತಿಯಲ್ಲಿ ಭಾರತ ಹೆಚ್ಚಿನ ವಿಕೆಟ್ ಕಳೆದುಕೊಂಡಿಲ್ಲ" ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲುWTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು

ಎರಡನೇ ದಿನ ಮಂದಬೆಳಕಿನ ಕಾರಣದಿಂದ ಪಂದ್ಯವನ್ನು ಸ್ಥಗಿತಗೊಳಿಸಿದಾಗ ಭಾರತ 146 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 44 ರನ್‌ಗಳಿಸಿದ್ದರೆ ಅಜಿಂಕ್ಯ ರಹಾನೆ 29 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ಭಾರತೀಯ ಕ್ರಿಕೆಟ್ ತಂಡವನ್ನು ಕಾಲೆಳೆಯುವಂತೆ ಟ್ವೀಟ್ ಮಾಡಿದ್ದರು. ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೈಕಲ್ ವಾನ್‌ಗೆ ್ಟರೋಲ್‌ಗಳ ಮೂಲಕ ತಿರುಗೇಟು ನೀಡಿದ್ದರು. ಮೊದಲ ದಿನದಾಟ ಮಳೆಯಿಂದ ಆರಂಭವಾಗದ ಹಿನ್ನೆಲೆಯಲ್ಲಿ ಮೈಕಲ್ ವಾನ್ "ಹವಾಮಾನದಿಂದಾಗಿ ಭಾರತ ಸೋಲಿನಿಂದ ರಕ್ಷಣೆಯನ್ನು ಪಡೆಯುತ್ತಿದೆ" ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

Story first published: Sunday, June 20, 2021, 13:41 [IST]
Other articles published on Jun 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X