ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC: ಮಯಾಂಕ್ ಅಥವಾ ಗಿಲ್, ರೋಹಿತ್‌ಗೆ ಆರಂಭಿಕ ಜೊತೆಗಾರನನ್ನು ಹೆಸರಿಸಿದ ಲಕ್ಷ್ಮಣ್

WTC Final: opening partener for Rohit Sharma: VVS Laxman picks Shubman Gill

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರು ಈ ಮಹತ್ವದ ಪಂದ್ಯಕ್ಕೆ ಅಂತಿಮ ಸಿದ್ಧತೆ ನಡೆಸುತ್ತಿದ್ದಾರೆ. ಈ ಐತಿಹಾಸಿಕ ಪಂದ್ಯದಲ್ಲಿ ಯಾವೆಲ್ಲಾ ಆಟಗಾರರು ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಆರಂಭಿಕನಾಗಿ ರೋಹಿತ್ ಶರ್ಮಾಗೆ ಯಾವ ಆಟಗಾರ ಸಾಥ್ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

ಅನುಭವಿ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕನಾಗಿ ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮತ್ತೊಂದು ತುದಿಯಲ್ಲಿ ಯಾರು ಶರ್ಮಾಗೆ ಸಾಥ್ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ. ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ ಮಧ್ಯೆ ಈ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!

ಶುಬ್ಮನ್ ಗಿಲ್ ಸೂಕ್ತ ಎಂದ ಲಕ್ಷ್ಮಣ್

ಶುಬ್ಮನ್ ಗಿಲ್ ಸೂಕ್ತ ಎಂದ ಲಕ್ಷ್ಮಣ್

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ರೋಹಿತ್ ಶರ್ಮಾಗೆ ಆರಂಭಿಕನಾಗಿ ಸಾಥ್ ನೀಡಲು ಯುವ ಆಟಗಾರ ಶುಬ್ಮನ್ ಗಿಲ್ ಸೂಕ್ತ ಆಯ್ಕೆಯಾಗಬಲ್ಲರು ಎಂದಿದ್ದಾರೆ. ಯುವ ಆಟಗಾರ ಉತ್ತಕ ಲಯದಲ್ಲಿದ್ದು ಮಹತ್ವದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಸಾಥ್ ನೀಡುವುದು ಸೂಕ್ತ ಎಂದಿದ್ದಾರೆ. "ನಾನು ನಿರಂತರತೆಯನ್ನು ಬಯಸುತ್ತೇನೆ. ನನ್ನ ಪ್ರಕಾರ ಶುಬ್ಮನ್ ಗಿಲ್ ಅದ್ಭುತವಾದ ಪ್ರತಿಬೆ. ಒತ್ತಡದ ಸಂದರ್ಭದಲ್ಲಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಲು ಆತ ಸಮರ್ಥ" ಎಂದು ವಿವಿಎಸ್ ಲಕ್ಷ್ಮಣ್ ಸ್ಟಾರ್‌ಸ್ಪೋರ್ಟ್ಸ್‌ ಆಯೋಜಿಸಿದ್ದ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

"ಉತ್ತಮ ಲಯದಲ್ಲಿ ಗಿಲ್"

"ಈ ಕಾರಣಕ್ಕೆ ನಾನು ಶುಬ್ಮನ್ ಗಿಲ್ ಬೆಂಬಲಕ್ಕೆ ನಿಲ್ಲುತ್ತೇನೆ. ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿಯೂ ಶುಬ್ಮನ್ ಗಿಲ್ 80ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅದರರ್ಥ ಆತ ಉತ್ತಮ ಲಯದಲ್ಲಿದ್ದಾರೆ. ಇಲ್ಲಿ ಆ ಲಯ ಕಳೆದುಹೋಗಿತ್ತು. ಹಾಗಿದ್ದರೂ ನಾನು ರೋಹಿತ್ ಶರ್ಮಾಗೆ ಆರಂಭಿಕನಾಗಿ ಶುಬ್ಮನ್ ಗಿಲ್ ಉತ್ತಮ ಆಯ್ಕೆ ಎಂದು ಬೆಂಬಲಿಸುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಾಲ್ ಅವರಂತಾ ಆಟಗಾರ ಬೆಂಚ್‌ನಲ್ಲಿ ಇರುವುದಕ್ಕೆ ಟೀಮ್ ಇಂಡಿಯಾ ಅದೃಷ್ಟವನ್ನು ಮಾಡಿದೆ. ಆದರೆ ಈ ಸಂದರ್ಭದಲ್ಲಿ ಶುಬ್ಮನ್ ಗಿಲ್ ರೋಹಿತ್ ಶರ್ಮಾಗೆ ಆರಂಭಿಕನಾಗಿ ಸಾಥ್ ನೀಡಲು ಸೂಕ್ತ ಎಂದು ಬೆಂಬಲಿಸುತ್ತೇನೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

ಭಾರತ ಗೆಲ್ಲುವ ನೆಚ್ಚಿನ ತಂಡ

ಭಾರತ ಗೆಲ್ಲುವ ನೆಚ್ಚಿನ ತಂಡ

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ. "ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಟ್ಟ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಭಾವಿಸುತ್ತೇನೆ. ಅದಕ್ಕೆ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಈ ಎರಡು ವರ್ಷಗಳ ಅವಧಿಯಲ್ಲಿ ಸ್ಥಿರವಾದ ಪ್ರದರ್ಶನವನ್ನು ನೀಡುತ್ತಾ, ದೇಶ ಹಾಗೂ ವಿದೇಶಿ ನೆಲದಲ್ಲಿ ಗೆಲುವು ಸಾಧಿಸುತ್ತಾ ಮುನ್ನಡೆದ ಒಂದು ತಂಡವಿದ್ದರೆ ಅದು ಟೀಮ್ ಇಂಡಿಯಾ. ಹಾಗಾಗಿ ಭಾರತ ಗೆಲ್ಲಲಿದೆ" ಎಂದು ಹೇಳಿಕೆ ನೀಡಿದ್ದಾರೆ.

Story first published: Wednesday, June 16, 2021, 9:08 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X