ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್: ಇಶಾಂತ್, ಸಿರಾಜ್‌ಗಿಂತ ಶಾರ್ದೂಲ್ ಬೆಸ್ಟ್ ಎಂದಿದ್ಯಾಕೆ ಸಂಜಯ್ ಮಂಜ್ರೇಕರ್!

WTC Final: Sanjay Manjrekar choose Indias third pacer after Jasprit Bumrah, Mohammed Shami

ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಎದುರಿಸಲಿದೆ. ಈ ಪ್ರವಾಸಕ್ಕೆ ಈಗಾಗಲೇ 20 ಸದಸ್ಯರ ಬಲಿಷ್ಠ ತಂಡವನನ್ಉ ಹೆಸರಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ನ್ಯೂಜಿಲೆಂಡ್ ವಿರುದ್ಧ ನಡೆಯುವ ಈ ಐತಿಹಾಸಿಕ ಹಣಾಹಣಿಯಲ್ಲಿ ಟೀಮ್ ಇಂಇಡಯಾ ಪರವಾಗಿ ಕಣಕಕಿಳಿಯುವ ಮೂರನೇ ಬೌಲರ್ ಯಾರಾಗಬೇಕು ಎಂಬುದನ್ನು ವಿವರಿಸಿದ್ದಾರೆ.

ಇಂಗ್ಲೆಂಡ್‌ನ ಬೌನ್ಸಿ ಪಿಚ್‌ನಲ್ಲಿ ಭಾರತ ಮೂವರು ಪ್ರಮುಖ ವೇಗಿಗಳೋಂದಿಗೆ ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಜ್ರೇಕರ್ ಪ್ರಕಾರ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಬೌಲಿಂಗ್ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಮೂರನೇ ವೇಗಿಯಾಗಿ ಶಾರ್ದೂಲ್ ಠಾಕೂರ್‌ಗೆ ಅವಕಾಶವನ್ನು ನೀಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.

ಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕ

ಮಂಜ್ರೇಕರ್ ಪ್ರಕಾರ ಇಂಗ್ಲೀಷ್ ವಾತಾವರಣದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಇಶಾಂತ್ ಶರ್ಮಾ ಅವರಿಗಿಂತ ಶಾರ್ದೂಲ್ ಠಾಕೂರ್ ಹೆಚ್ಚು ಪರಿಣಾಮಕಾರಿ. ಶಾರ್ದೂಲ್ ಠಾಕೂರ್ ಸ್ವಿಂಗ್ ಬೌಲಿಂಗ್‌ಅನ್ನು ಮಾಡಬಲ್ಲವರಾಗಿರುವ ಕಾರಣ ಇಂಗ್ಲೀಷ್ ಬೇಸಿಗೆಯ ಪ್ರಥಮಾರ್ಧದಲ್ಲಿ ಅವರಿಂದ ತಂಡಕ್ಕೆ ಹೆಚ್ಚಿನ ಉಪಯೋಹವಾಗಲಿದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ಗೆ ಭಾರತ ಪ್ರವಾಸ ಮಾಡುತ್ತಿದ್ದಾಗ ಭಾರತ ಕಳೆದುಕೊಂಡಿದ್ದ ವಿಚಾರವೆಂದರೆ ಸೂಕ್ತವಾದ ಸ್ವಿಂಗ್ ಬೌಲರ್‌ನನ್ನು. ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಬ್ಯಾಟಿಂಗ್ ನಡೆಸಲಿಲ್ಲ ಎಂದು ನನಗೆ ತಿಳಿದಿದೆ. ಆದರೆ ನ್ಯೂಜಿಲೆಂಡ್ ಗೆಲುವಿಗೆ ಕಾರಣವಾಗಿದ್ದು ಅವರಲ್ಲಿ ಪರಿಣಾಮಕಾರಿಯಾದ ಸ್ವಿಂಗ್ ಬೌಲರ್‌ಗಳು ಇದ್ದರು ಎಂದು ಮಂಜ್ರೇಕರ್ ಹೇಳಿದ್ದಾರೆ.

ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

ಇಂಗ್ಲೆಂಡ್ ಬೇಸಿಗೆಯ ಮೊದಲಾರ್ಧದಲ್ಲಿ ಸೂರ್ಯನ ಬೆಳಕು ಹೆಚ್ಚಿನ ಪ್ರಮಾಣದಲ್ಲಿ ಬರುವುದಿಲ್ಲ. ಹೀಗಾಗಿ ನ್ಯೂಜಿಲೆಂಡ್‌ನಲ್ಲಿ ಭಾರತ ಎದುರಿಸಿದ ವಾತಾವರಣವೇ ಇಂಗ್ಲೆಂಡ್‌ನಲ್ಲಿಯೂ ಇರಲಿದೆ ಎಂದಿದ್ದಾರೆ ಸಂಜಯ್ ಮಂಜ್ರೇಕರ್

Story first published: Friday, May 14, 2021, 11:25 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X