ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಭಾರತವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಲು ನ್ಯೂಜಿಲೆಂಡ್‌ಗೆ ಶೇನ್ ಬಾಂಡ್ ಸಲಹೆ

WTC Final: Shane Bond Advice to New Zealand for bowl India out cheaply

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕಾದಾಡಲು ಭಾರತ ಹಾಗೂ ನ್ಯೂಜಿಲೆಂಡ್ ಸಜ್ಜಾಗಿದ್ದು ಈ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂನ್ 18ರಂದು ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತವನ್ನು ಅಗ್ಗಕ್ಕೆ ಕಟ್ಟಿಹಾಕಲು ನ್ಯೂಜಿಲೆಂಡ್ ತಂಡ ಏನು ಮಾಡಬೇಕೆಂದು ಕೀವಿಸ್ ತಂಡದ ಮಾಜಿ ವೇಗಿ ಶೇನ್ ಬಾಂಡ್ ಸಲಹೆಯನ್ನು ನೀಡಿದ್ದಾರೆ.

ಸೌಥಾಂಪ್ಟನ್‌ನ್ಲಲಿ ನಡೆಯುವ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದರತೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಭಾರತ ತಂಡವನ್ನು ಕನಿಷ್ಠ ರನ್‌ಗಳಿಗೆ ಕಟ್ಟಿಹಾಕಲು ಸಾಧ್ಯವಿದೆ ಎಂದು ಶೇನ್ ಬಾಂಡ್ ಸಲಹೆಯನ್ನು ನೀಡಿದ್ದಾರೆ. ಆದರೆ ಭಾರತ ಟಾಸ್ ಗೆದ್ದಲ್ಲಿ ನ್ಯೂಜಿಲೆಂಡ್ ತಂಡದ ರಣತಂತ್ರ ಹೇಗಿರಬೇಕೆಂದು ಬಾಂಡ್ ಪ್ರತಿಕ್ರಿಯಿಸಿಲ್ಲ.

WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

"ನ್ಯೂಜಿಲೆಂಡ್ ತಂಡ ಟಾಸ್ ಗೆದ್ದರೆ ಅವರ ಅತ್ಯುತ್ತಮ ಮಟ್ಟದ ಬೌಲಿಂಗ್ ದಾಳಿಯನ್ನು ನಡೆಸಬೇಕಿದೆ. ನನ್ನ ಪ್ರಕಾರ ಅವರು ಭಾರತ ತಂಡವನ್ನು ಅಗ್ಗಕ್ಕೆ ಔಟ್ ಮಾಡಬಲ್ಲರು. ಆದರೆ ಕನಿಷ್ಠ ರನ್‌ಗಳಿಗೆ ಭಾರತ ತಂಡವನ್ನು ಔಟ್ ಮಾಡದಿದ್ದರೆ ಅವರು ಸಮಸ್ಯೆಗೆ ಸಿಲುಕಲಿದ್ದಾರೆ" ಎಂದು ಶೇನ್ ಬಾಂಡ್ ಸ್ಟಾರ್‌ಸ್ಪೋರ್ಟ್ಸ್‌ನ ವರ್ಚುವಲ್ ಪ್ರೆಸ್‌ಕಾನ್ಫರೆನ್ಸ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಟಾಸ್ ಬಹಳ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಎಂದು ಶೇನ್ ಬಾಂಡ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಮೊದಲ ಇನ್ನಿಂಗ್ಸ್ ಎರಡು ತಂಡಗಳ ಪಾಲಿಗೂ ಬಹಳಷ್ಟು ನಿರ್ಣಾಯಕವಾಗಿರಲಿದೆ ಎಂದು ಕೀವಿಸ್ ತಂಡದ ಮಾಜಿ ವೇಗಿ ಶೇನ್ ಬಾಂಡ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬಾಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯಕ್ಕಾಗಿ ನಡೆಸಿದ ಅಭ್ಯಾಸ ಸಾಕಷ್ಟು ನಿರ್ಣಾಯಕವಾಗಿರಲಿದೆ. ನನ್ನ ಅನಿಸಿಕೆಯ ಪ್ರಕಾರ ಭಾರತ ಸಮತೋಲಿತ ಬೌಲಿಂಗ್ ವಿಭಾಗವನ್ನು ಹೊಂದಿದೆ. ಅವರು ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಬಾಂಡ್ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, June 16, 2021, 18:12 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X