ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್

WTC Final: Sunil Gavaskar names India pacer he would have included in team
WTC ಪಂದ್ಯದಲ್ಲಿ ಆಡೋಕೆ ಟೀಮ್ ಇಂಡಿಯಾದಲ್ಲಿ ಈ ಬೌಲರ್ ಇದ್ದಿದ್ರೆ ಕಥೆನೇ ಬೇರೆ ಆಗ್ತಿತ್ತು | Oneindia Kannada

ಸೌತಾಂಪ್ಟನ್: ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡದಲ್ಲಿ ಆಡಿಸಬೇಕಾಗಿದ್ದ ಆಟಗಾರನನ್ನು ಟೀಮ್ ಇಂಡಿಯಾದ ಮಾಜಿ ನಾಯಕ, ಈಗ ಕಾಮೆಂಟೇಟರ್ ಆಗಿರುವ ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಭಾರತ ತಂಡದಲ್ಲಿ ಸೇರಿಸಬೇಕಾಗಿತ್ತು ಎಂದು ಗವಾಸ್ಕರ್ ಅಭಿಪ್ರಾಯಿಸಿದ್ದಾರೆ.

ಭರ್ಜರಿ ಸಿಕ್ಸ್ ಚಚ್ಚಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್‌ಮನ್‌: ವಿಡಿಯೋಭರ್ಜರಿ ಸಿಕ್ಸ್ ಚಚ್ಚಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್‌ಮನ್‌: ವಿಡಿಯೋ

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯುತ್ತಿದೆ. ಜೂನ್ 18-26 (ರಿಸರ್ವ್ ಡೇ ಸೇರಿ) ಈ ಪಂದ್ಯ ನಡೆಯಲಿದೆ. 5ನೇ ದಿನದಾಟದ ವೇಳೆ ಭಾರತ ಅಂಥ ಬೌಲಿಂಗ್‌ ನೀಡದಿದ್ದನ್ನು ಗಮನಿಸಿ ಗವಾಸ್ಕರ್, ಭುವಿ ತಂಡದಲ್ಲಿರಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದರು.

1
50883

'ಈ ಬಾರಿ ಭುವಿ ಐಪಿಎಲ್‌ನಲ್ಲಿ ಆಡಿದ್ದರು. ಅವರೀಗ ಗಾಯದಲ್ಲೂ ಇರಲಿಲ್ಲ. ಆತ ಈ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಸೇರಿಸಲ್ಪಡಬೇಕಿತ್ತು. ಯಾಕೆಂದರೆ ಈ ಪಂದ್ಯ ಜೂನ್‌ನಲ್ಲಿ ನಡೆಯುತ್ತಿದೆ,' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗವಾಸ್ಕರ್ ಹೇಳಿದ್ದಾರೆ. ಭುವಿಯ ಸ್ವಿಂಗ್‌ ಬೌಲಿಂಗ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತಿತ್ತು ಎಂಬರ್ಥದಲ್ಲಿ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.

WTC Final: ಆ ಓರ್ವ ಬೌಲರ್‌ನನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ಆಕಾಶ್ ಚೋಪ್ರWTC Final: ಆ ಓರ್ವ ಬೌಲರ್‌ನನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ಆಕಾಶ್ ಚೋಪ್ರ

ಮಂಗಳವಾರ (ಜೂನ್ 21) ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 80 ಓವರ್‌ ಮುಕ್ತಾಯದ ವೇಳೆ ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ 2, ಆರ್‌ ಅಶ್ವಿನ್ 1 ವಿಕೆಟ್ ಪಡೆದುಕೊಂಡಿದ್ದರು. ನ್ಯೂಜಿಲೆಂಡ್‌ 5 ವಿಕೆಟ್‌ ಕಳೆದುಕೊಂಡಿತ್ತು. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮಳೆಯಿಂದ ತೀವ್ರ ತೊಂದರೆಯಾಗಿತ್ತು.

Story first published: Tuesday, June 22, 2021, 19:46 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X