ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಆ ಓರ್ವ ಬೌಲರ್‌ನನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ಆಕಾಶ್ ಚೋಪ್ರ

WTC Final: Team India missing Bhuvneshwar Kumar in england condition feels Aakash Chopra

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ ಹಿನ್ನೆಡೆಯನ್ನು ಅನುಭವಿಸಿದೆ. ಸೌಥಾಂಪ್ಟನ್‌ನ ಮೈದಾನದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಭಾರತೀಯ ವೇಗಿಗಳು ವಿಫಲರಾಗಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಬೌಲರ್‌ನನ್ನು ಟೀಮ್ ಇಂಡಿಯಾ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಆಕಾಶ್ ಚೋಪ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಮುಖಾಮುಖಿಗೆ ಮಳೆ ಸಾಕಷ್ಟು ಅಡ್ಡಿಯುಂಟು ಮಾಡುತ್ತಿದೆ. ಈಗಾಗಲೇ ಎರಡು ದಿನಗಳ ಸಂಪೂರ್ಣ ಆಟ ಸ್ಥಗಿತವಾಗಿದೆ. ಆದರೆ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ ನಂತರ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡ ಭಾರತ ನಂತರ ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿ ಕಂಡು ಬರಲಿಲ್ಲ. ಮೂರನೇ ದಿನದಂತ್ಯದಲ್ಲಿ ಭಾರತ ನ್ಯೂಜಿಲೆಂಡ್‌ನ ಎರಡು ವಿಕೆಟ್ ಕೀಳುವಲ್ಲಿ ಯಶಸ್ವಿಯಾಯಿತಾದರೂ ಒಟ್ಟಾರೆಯಾಗಿ ಭಾರತ ಹಿನ್ನೆಡೆ ಅನುಭವಿಸಿತ್ತು.

ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್

ಭುವನೇಶ್ವರ್ ಕುಮಾರ್ ಬೇಕಿತ್ತು ಎಂದ ಆಕಾಶ್

ಭುವನೇಶ್ವರ್ ಕುಮಾರ್ ಬೇಕಿತ್ತು ಎಂದ ಆಕಾಶ್

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಭುವನೇಶ್ವರ್ ಕುಮಾರ್ ಅವರನ್ನು ಟೀಮ್ ಇಂಡಿಯಾ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. ಸ್ವಿಂಗ್ ಬೌಲರ್ ಆಗಿ ಭುವನೇಶ್ವರ್ ಕುಮಾರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ವಿವಿಧ ಆಯಾಮಗಳಲ್ಲಿ ತಂಡಕ್ಕೆ ನೆರವಾಗುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಮೂರು ಆಯಾಮದಲ್ಲಿ ತಂಡಕ್ಕೆ ನೆರವು

ಮೂರು ಆಯಾಮದಲ್ಲಿ ತಂಡಕ್ಕೆ ನೆರವು

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಯೋರ್ವರು ಭುವನೇಶ್ವರ್ ಕುಮಾರ್ ಅಲಭ್ಯತೆಯ ಬಗ್ಗೆ ಆಕಾಶ್ ಚೋಪ್ರ ಬಳಿ ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡುತ್ತಾ ಈ ಅಭಿಪ್ರಾಯವನ್ನು ವ್ಯಕ್ರಪಡಿಸಿದ್ದಾರೆ. "ಭಾರತ ಖಂಡಿತವಾಗಿಯೂ ಭುವನೇಶ್ವರ್ ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಆತನಲ್ಲಿ ಮೂರು ವಿಶೇಷತೆಗಳು ಇವೆ. ಮೊದಲನೆಯದಾಗಿ ಹೊಸ ಚೆಂಡಿನಲ್ಲಿ ಆತ ಮ್ಯಾಜಿಕ್ ಮಾಡಬಲ್ಲ. ಸುದೀರ್ಘ ಸ್ಪೆಲ್ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಹಾಗೂ ಬ್ಯಾಟಿಂಗ್‌ನಲ್ಲಿಯೂ ಭುವನೇಶ್ವರ್ ತಂಡಕ್ಕೆ ಕೊಡುಗೆ ನೀಡಬಲ್ಲರು" ಎಂದು ಆಕಾಶ್ ಚೋಪ್‌ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೂರ್ಣ ಪ್ರಮಾಣದ ಸ್ವಿಂಗ್ ಬೌಲರ್

ಪೂರ್ಣ ಪ್ರಮಾಣದ ಸ್ವಿಂಗ್ ಬೌಲರ್

ಇನ್ನು ಈ ಹಂತದಲ್ಲಿ ಎದುರಾಳಿ ನ್ಯೂಜಿಲೆಂಡ್ ಬೌಲರ್‌ಗಳ ರೀತಿಯಲ್ಲಿ ಭುವನೇಶ್ವರ್ ಕುಮಾರ್ ಪೂರ್ಣ ಪ್ರಮಾಣದಲ್ಲಿ ಸ್ವಿಂಗ್ ಬೌಲರ್ ಆಗಿ ತಂಡಕ್ಕೆ ನೆರವಾಗುತ್ತಿದ್ದರು ಎಂದಿದ್ದಾರೆ ಚೋಪ್ರ. ಈಗ ಟೀಮ್ ಇಂಡಿಯಾದಲ್ಲಿರುವ ಬೌಲರ್‌ಗಳ ಪೈಕಿ ಇಶಾಂತ್ ಶರ್ಮಾ ಮಾತ್ರವೇ ಉತ್ತಮ ಸ್ವಿಂಗ್ ಮಾಡಬಲ್ಲವರಾಗಿದ್ದಾರೆ ಎಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ

ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ

ಇನ್ನು ಭುವನೇಶ್ವರ್ ಕುಮಾರ್ ಇಂಗ್ಲೆಂಡ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 2014ರ ಪ್ರವಾಸದಲ್ಲಿ ಭುವಿ 5 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 19 ವಿಕೆಟ್ ಸಂಪಾದಿಸಿದ್ದಾರೆ. ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನವನ್ನು ನೀಡಿದ್ದು 3 ಅರ್ಧಶತಕಗಳ ಸಹಿತ 247 ರನ್‌ ಬಾರಿಸಿದ್ದಾರೆ.

Story first published: Tuesday, June 22, 2021, 21:09 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X